ಇಂದು, ನಾಳೆ ಕೆಲವೆಡೆ ನೀರು ಸರಬರಾಜಲ್ಲಿ ವ್ಯತ್ಯಯ
ಮೈಸೂರು

ಇಂದು, ನಾಳೆ ಕೆಲವೆಡೆ ನೀರು ಸರಬರಾಜಲ್ಲಿ ವ್ಯತ್ಯಯ

March 10, 2021

ಮೈಸೂರು,ಮಾ.9-ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಲಯದ ವ್ಯಾಪ್ತಿಯ ವಿಜಯ ನಗರ ಕೇಂದ್ರೀಯ ಜಲಸಂಗ್ರಹಾಗಾರ ಮತ್ತು ಹೆಚ್‍ಎಲ್‍ಆರ್ ಜಲಸಂಗ್ರಹಾಗಾರದಲ್ಲಿ ವಿದ್ಯುತ್ ಅಡಚಣೆ ಉಂಟಾಗಿರುವುದರಿಂದ, ಸದರಿ ಟ್ಯಾಂಕ್‍ಗಳಲ್ಲಿ ಸಮರ್ಪಕವಾಗಿ ನೀರು ಶೇಖರಣೆಯಾಗದೇ ಇರುವ ಕಾರಣ ಮಾ.10 ಮತ್ತು 11ರಂದು ನೀರು ಸರಬರಾಜು ವಿನಲ್ಲಿ ವಿಜಯನಗರ 1, 2 ಮತ್ತು 3ನೇ ಹಂತ, ಹೆಬ್ಬಾಳು 1ನೇ ಹಂತ, 2ನೇ ಹಂತ ಮತ್ತು 3ನೇ ಹಂತ, ಕೆಹೆಚ್‍ಬಿ ಕಾಲೋನಿ, ಹೂಟಗಳ್ಳಿ, ಕುಂಬಾರಕೊಪ್ಪಲು, ಲೋಕನಾಯಕನಗರ, ಮೇಟಗಳ್ಳಿ, ಬಿ.ಎಂ. ಶ್ರೀನಗರ, ಬೃಂದಾವನ ಬಡಾವಣೆ, ವಿವಿ ಮೊಹಲ್ಲಾ, ಒಂಟಿಕೊಪ್ಪಲು, ವಿನಾಯಕ ನಗರ, ಮಂಜುನಾಥಪುರ, ಗೋಕುಲಂ, ಯಾದವಗಿರಿ, ಪಡುವಾರಹಳ್ಳಿ, ಸರಸ್ವತಿ ಪುರಂ, ಶಾರದಾದೇವಿನಗರ, ಬೋಗಾದಿ, ಗಂಗೋತ್ರಿ ಬಡಾವಣೆ, ಟಿ.ಕೆ. ಲೇಔಟ್, ಕಾಮಟಗೇರಿ, ಸೊಪ್ಪಿನಕೇರಿ, ರಮಾವಿಲಾಸ ರಸ್ತೆ, ಸಯ್ಯಾಜಿರಾವ್ ರಸ್ತೆ, ಒಕ್ಕಲಗೇರಿ, ಶಿವರಾಂಪೇಟೆ, ಮಂಡಿ ಮೊಹಲ್ಲಾ, ತಿಲಕ್‍ನಗರ, ಲಷ್ಕರ್ ಮೊಹಲ್ಲಾ, ದೇವರಾಜ ಮೊಹಲ್ಲಾ, ವಾರ್ಡ್ ನಂ. 1, 2, 3, 4, 5, 6, 7, 8, 17, 19, 20, 21, 22, 23, 24, 40, 41, 42, 43, 44, 45, 46, 47 ಮತ್ತು ಇದಕ್ಕೆ ಸಂಬಂಧಪಟ್ಟ ಡಿ.ಎಂ.ಎ. ಪ್ರದೇಶಗಳು ಹಾಗೂ ಇತ್ಯಾದಿ ಪ್ರದೇಶಗಳಲ್ಲಿ ವ್ಯತ್ಯಯ ಉಂಟಾಗಲಿದೆ.

Translate »