ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಸಿಕ್ಕಾಗಷ್ಟೇ ಮಹಿಳಾ ಸಬಲೀಕರಣ
ಮೈಸೂರು

ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಸಿಕ್ಕಾಗಷ್ಟೇ ಮಹಿಳಾ ಸಬಲೀಕರಣ

March 10, 2021

ಮೈಸೂರು, ಮಾ.9 (ಎಂಟಿವೈ)- ಲಿಂಗ ಸಮಾನತೆ ಹಾಗೂ ಪುರುಷರಿಗೆ ಸರಿ ಸಮನಾಗಿ ಹೆಣ್ಣು ಮಕ್ಕಳಿಗೂ ಅವ ಕಾಶ ಸಿಕ್ಕಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದು ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲೆ ಸಭಾಂಗಣದಲ್ಲಿ ಮಂಗಳ ವಾರ `ಅಂತಾರಾಷ್ಟ್ರೀಯ ಮಹಿಳಾ ದಿನ’ ಆಚರಣೆ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಈ ವಿಶೇಷ ದಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯ ರನ್ನು ಕರೆಸಿ ಸನ್ಮಾನಿಸುವ ಮೂಲಕ ಮತ್ತಷ್ಟು ಮಹಿಳಾ ಸಾಧಕಿಯರನ್ನು ಹುಟ್ಟುಹಾಕಲು ಪ್ರೇರಣೆ ನೀಡಲಾಗುತ್ತದೆ. ಸಾಧಕಿಯರ ಮಾತು ಕೇಳುವುದರಿಂದ ವಿದ್ಯಾರ್ಥಿನಿಯ ರಲ್ಲಿ ತಾವು ಸಾಧನೆ ಮಾಡಬೇಕೆಂಬ ಛಲ ಹುಟ್ಟುತ್ತದೆ. ಲಿಂಗ ಅಸಮಾನತೆ ಹೋಗ ಲಾಡಿಸಬೇಕು. ತಾರತಮ್ಯ ನೀತಿ ನಿವಾ ರಣೆ ಯಾಗಬೇಕು. ಪುರುಷರಂತೆ ಮಹಿಳೆ ಯರಿಗೂ ಅವಕಾಶ ಸಿಕ್ಕಾಗ ಮಹಿಳಾ ಸಬಲೀಕರಣ ಸಾಧ್ಯ ಎಂದರು.

ಪುರುಷರಿಗೆ ಸಮನಾಗಿ ಪೈಪೋಟಿ ನಡೆಸಬೇಕು ಎಂದರೆ ಪುರುಷರೊಂದಿಗೆ ಸಂಘರ್ಷಕ್ಕಿಳಿಯಬೇಕು, ಹಿಯಾಳಿಸ ಬೇಕು ಎಂದರ್ಥವಲ್ಲ. ಪುರುಷರನ್ನೂ ಗೌರವಿಸುವುದರೊಂದಿಗೆ ತಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾ ಗಬೇಕು. ಸಾಮಾಜಿಕ ಕಳಕಳಿ ಬೆಳೆಸಿ ಕೊಳ್ಳಲು 18 ಅಥವಾ 21 ವರ್ಷ ಕಾಯುವ ಅಗತ್ಯ ವಿಲ್ಲ. ಶಾಲಾ ದಿನದಲ್ಲೇ ಸಾಮಾಜಿಕ ಹಾಗೂ ಪರಿಸರ ಸಂರ ಕ್ಷಣೆಯ ಕಾಳಜಿ ಬೆಳೆಸಿಕೊಳ್ಳು ವುದು ಅನಿ ವಾರ್ಯ. ಚಿಕ್ಕ ವಯಸ್ಸಲ್ಲೇ ಸಾಮಾ ಜಿಕ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ಮುಂದಿನ ದಿನಗಳಲ್ಲಿ ಸಾಧನೆ ಮಾಡ ಬಹುದು ಎಂದು ಉತ್ತೇಜನ ನೀಡಿದರು.

ಸನ್ಮಾನ: ಮೇಯರ್ ರುಕ್ಮಿಣಿ ಮಾದೇ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ದಿನದಂಗವಾಗಿ ಮೇಯರ್ ರುಕ್ಮಿಣಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಜೆಎಸ್‍ಎಸ್ ಆಸ್ಪತ್ರೆ ವೈದ್ಯೆ ಡಾ.ಸಿ.ಚೈತ್ರ, ಕೆ.ಆರ್. ಆಸ್ಪತ್ರೆ ವೈದ್ಯೆ ಡಾ.ರಶ್ಮಿ ಹಾಗೂ ದೇವರಾಜ ಪೊಲೀಸ್ ಠಾಣೆ ಸಬ್ ಇನ್‍ಸ್ಪೆಕ್ಟರ್ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು.

ಭಾರತ್ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಉಪಾಧ್ಯಕ್ಷೆ ಡಾ.ಜೆ.ಕಮಲಾ ರಾಮನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಪಿ.ವಿಶ್ವ ನಾಥ್, ಜಿಲ್ಲಾ ಆಯುಕ್ತೆ ಪುಷ್ಪವಲ್ಲಿ, ಜಿಲ್ಲಾ ಕೋಶಾಧಿಕಾರಿ ಡಾ.ಕೆ.ಬಿ.ಗುರು ಮೂರ್ತಿ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಜಮೀಲ್, ಜಿಲ್ಲಾ ಜಂಟಿ ಕಾರ್ಯದರ್ಶಿ ಎಸ್.ಸುಜಯ, ಸಹಾ ಯಕ ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಮೋಹನ್‍ಕುಮಾರ್ ಉಪಸ್ಥಿತರಿದ್ದರು.

Translate »