ಮೈಸೂರು, ಡಿ.1-ಹೊಂಗಳ್ಳಿ ಕೊಳವೆ ಮಾರ್ಗ ದುರಸ್ತಿ ಕಾಮಗಾರಿ ಕೈಗೊಂಡಿರು ವುದರಿಂದ ಡಿ.2 ಮತ್ತು 3ರಂದು ಮೈಸೂರಿನ ವಾರ್ಡ್ ನಂ.1 ರಿಂದ 6, ವಾರ್ಡ್ ನಂ.20, 23, 40, 42, 45, 47 ಹಾಗೂ ಹೆಬ್ಬಾಳ್, ಕುಂಬಾರಕೊಪ್ಪಲು, ಮಂಚೇ ಗೌಡನಕೊಪ್ಪಲು, ಕೆ.ಜಿ.ಕೊಪ್ಪಲು, ಲೋಕನಾಯಕ ನಗರ, ಒಂಟಿಕೊಪ್ಪಲು, ಪಡುವಾರ ಹಳ್ಳಿ, ಶಾರದಾದೇವಿ ನಗರ, ಸರಸ್ವತಿಪುರಂ, ಬೋಗಾದಿ, ವಿಜಯನಗರ 1, 2 ಮತ್ತು 3ನೇ ಹಂತ, ಗೋಕುಲಂ 1, 2 3ನೇ ಹಂತ, ಹೊರವಲಯದ ಆರ್‍ಎಂಪಿ, ಬಿಇಎಂಎಲ್, ಜನತಾನಗರ, ಕೆಹೆಚ್‍ಬಿ ಕಾಲೋನಿ, ಹೂಟಗಳ್ಳಿ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವಾಣಿವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.