ಮೈಸೂರು ಜಿಲ್ಲೆಯಲ್ಲಿ ಏಡ್ಸ್ ಸೋಂಕಿತರ ಪ್ರಮಾಣ ಇಳಿಕೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಏಡ್ಸ್ ಸೋಂಕಿತರ ಪ್ರಮಾಣ ಇಳಿಕೆ

December 2, 2020

ಮೈಸೂರು, ಡಿ.1(ಪಿಎಂ)- ಮೈಸೂರು ಜಿಲ್ಲೆಯಲ್ಲಿ ಏಡ್ಸ್ ಸೋಂಕಿತರ ಪ್ರಮಾಣ ದಲ್ಲಿ ಇಳಿಕೆಯಾಗಿದೆ. ಜಿಲ್ಲೆಯಲ್ಲಿ 2002 ರಲ್ಲಿ ಸೋಂಕಿನ ಪರೀಕ್ಷೆ ಆರಂಭಿಸಲಾ ಯಿತು. ಅಂದು ಸಾಮಾನ್ಯ ವರ್ಗದಲ್ಲಿ ಸೋಂಕಿತರ ಪ್ರಮಾಣ ಶೇ.26ರಷ್ಟಿದ್ದರೆ, 2020-21ರ ಪ್ರಸಕ್ತ ಸಾಲಿನಲ್ಲಿ ಶೇ.0.63ಕ್ಕೆ ಇಳಿಕೆಯಾಗಿದೆ. ಅದೇ ರೀತಿ ಅಂದು ಗರ್ಭಿಣಿ ವರ್ಗದಲ್ಲಿ ಶೇ.0.68ರಷ್ಟಿದ್ದರೆ, ಪ್ರಸಕ್ತ ಸಾಲಿಗೆ ಈ ವರ್ಗದಲ್ಲಿ ಶೇ.0.04ಗೆ ಇಳಿಕೆ ಕಂಡಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಮೊಹಮ್ಮದ್ ಶಿರಾಜ್ ಅಹಮದ್ ತಿಳಿಸಿದರು.

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವ ರಣದ ರಾಜೇಂದ್ರ ಭವನದಲ್ಲಿ ಜಿಲ್ಲಾಡ ಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾ ಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಂಯು ಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂ ಡಿದ್ದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಪ್ರಾಸ್ತಾ ವಿಕವಾಗಿ ಅವರು ಮಾತನಾಡಿದರು.

ಸೋಂಕು ಹರಡುವಿಕೆ ಪ್ರಮಾಣವನ್ನು 2002ರ ಸಾಲಿಗೆ ಹಾಗೂ ಪ್ರಸಕ್ತ ಸಾಲಿನ ಅಕ್ಟೋಬರ್‍ವರೆಗೆ ಗಮನಿಸಿದರೆ ಇಳಿಕೆ ಯಾಗಿರುವುದನ್ನು ಕಾಣಬಹುದು. ವರ್ಷ ದಿಂದ ವರ್ಷಕ್ಕೆ ಸೋಂಕಿತರ ಪ್ರಮಾಣ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯ ವರ್ಗಕ್ಕೆ ಸಂಬಂಧಿಸಿದಂತೆ ಒಟ್ಟಾರೆ (2002 ರಿಂದ ಈವರೆಗೆ) 6,60,965 ಮಂದಿ ಪರೀಕ್ಷೆಗೆ ಒಳಪಟ್ಟಿದ್ದು, ಈ ಪೈಕಿ 25,644 ಮಂದಿ ಸೋಂಕಿತರು ಕಂಡು ಬಂದಿದ್ದಾರೆ. ಅದೇ ರೀತಿ ಗರ್ಭಿಣಿ ವರ್ಗದಲ್ಲಿ 6,35,541 ಮಂದಿ ಪರೀಕ್ಷೆಗೆ ಒಳಪಟ್ಟು ಈ ಪೈಕಿ 1,242 ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದರು.

ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 916 ಹಾಗೂ 2020-21ನೇ ಸಾಲಿನ ಅಕ್ಟೋ ಬರ್‍ವರೆಗೆ 286 ಸೋಂಕಿತರು ಪತ್ತೆಯಾಗಿ ದ್ದಾರೆ. ಜಿಲ್ಲೆಯಲ್ಲಿ ಯುವ ಜನರಿಗೆ ಏಡ್ಸ್ ಬಗ್ಗೆ ಅರಿವು ಮೂಡಿಸಲು 72 ರೆಡ್ ರಿಬ್ಬನ್ ಕ್ಲಬ್‍ಗಳನ್ನು ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 26 ಐಸಿಟಿಸಿ (ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ) ಕಾರ್ಯ ನಿರ್ವ ಹಿಸುತ್ತಿವೆ. ಜೊತೆಗೆ ಜಿಲ್ಲೆಯಲ್ಲಿ 3 ಎಆರ್‍ಟಿ ಚಿಕಿತ್ಸಾ ಕೇಂದ್ರಗಳು (ಮೈಸೂ ರಿನ ಕೆಆರ್ ಆಸ್ಪತ್ರೆ, ಜೆಎಸ್‍ಎಸ್ ಆಸ್ಪತ್ರೆ ಹಾಗೂ ಆಶಾಕಿರಣ ಆಸ್ಪತ್ರೆ) ಇವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಮಾತ ನಾಡಿ, ಸಂವಿಧಾನದ ಕಲ್ಯಾಣ ರಾಜ್ಯದ ಪರಿಕಲ್ಪನೆಯಲ್ಲಿ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಆರೋಗ್ಯ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನೀಡುವ ಸಲಹೆ-ಸೂಚನೆಗಳನ್ನು ಸಾರ್ವ ಜನಿಕರು ಪಾಲಿಸಬೇಕು ಎಂದು ಕೋರಿದರು.

ಸಂವಿಧಾನ ಜಾರಿಗೆ ಬರುವ ಮುನ್ನ ಸಾವಿರಾರು ವರ್ಷಗಳಿಂದ ನಮ್ಮ ಸಮಾಜ ದಲ್ಲಿ ಹಲವು ಅನಿಷ್ಟ ಪದ್ಧತಿಗಳು ರೂಢಿ ಯಲ್ಲಿದ್ದವು. ಮಹಿಳೆಯರಿಗೆ ಸಂಬಂಧಿಸಿ ದಂತೆ ಹಲವು ಕಟ್ಟುಪಾಡುಗಳು ಮಹಿಳೆ ಯರ ಸ್ವಾತಂತ್ರ್ಯ ಕಸಿದುಕೊಂಡಿದ್ದವು. ಸಂವಿಧಾನ ಜಾರಿಯಾದ ಬಳಿಕ ಮಹಿಳೆ ಯರು ಪುರುಷನಿಗೆ ಸಮಾನಾಗಿ ಬೆಳೆ ಯಲು ಸಾಧ್ಯವಾಯಿತು ಎಂದರು.

1953ರಲ್ಲಿ ದೇಶದ ಪ್ರಥಮ ಕಾನೂನು ಮಂತ್ರಿ ಡಾ.ಬಿ.ಆರ್.ಅಂಬೇಡ್ಕರ್, ಮಹಿಳೆ ಯರಿಗೆ ಸ್ವಾತಂತ್ರ್ಯ ಕಲ್ಪಿಸುವಂತಹ ಹಿಂದು ಕೋಡ್ ಮಸೂದೆ ಮಂಡಿಸಿದ್ದರು. ಆದರೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿ ಅಂಬೇ ಡ್ಕರ್ ಅವರು ಮಂತ್ರಿ ಸ್ಥಾನಕ್ಕೆ ರಾಜೀ ನಾಮೆ ನೀಡುತ್ತಾರೆ. ಆದರೆ 1955ರಲ್ಲಿ ನೆಹರು ಸರ್ಕಾರದಲ್ಲಿ ಅದೇ ಮಸೂದೆ ಅಂಗೀಕಾರಗೊಂಡು ಕಾನೂನುಗಳಾಗಿ ಜಾರಿಯಾಗುತ್ತವೆ. ಆ ಬಳಿಕ ಮಹಿಳೆಯ ರಿಗೆ ಆಸ್ತಿ ಹಕ್ಕು, ವಿಚ್ಛೇದನ ಹಕ್ಕು ಸೇರಿ ದಂತೆ ಹಲವು ಹಕ್ಕು ಪಡೆಯುವಂತಾ ಗಿದೆ ಎಂದು ವಿವರಿಸಿದರು.

ಇದೇ ವೇಳೆ ಏಡ್ಸ್ ನಿಯಂತ್ರಣಕ್ಕೆ ಶ್ರಮಿ ಸುತ್ತಿರುವ ಕಾರ್ಯಕರ್ತರು ಹಾಗೂ ಉತ್ತಮ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಿಬ್ಬಂದಿ ಯನ್ನು ಸನ್ಮಾನಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮೈಸೂರು ವಿಭಾಗದ ವಿಭಾಗೀಯ ಸಹ ನಿರ್ದೇಶಕಿ ಡಾ.ಬಿ.ಎಸ್.ಪುಷ್ಪಲತಾ, ಜೆಎಸ್‍ಎಸ್ ವೈದ್ಯ ಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್. ಬಸವನಗೌಡಪ್ಪ, ಜಿಲ್ಲಾ ಆರೋಗ್ಯಾಧಿ ಕಾರಿ ಡಾ.ಟಿ.ಅಮರ್‍ನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ರಾಜೇಶ್ವರಿ, ಕೆಆರ್ ಆಸ್ಪತ್ರೆ ಎಆರ್‍ಟಿ ಕೇಂದ್ರದ ನೋಡೆಲ್ ಅಧಿಕಾರಿ ಡಾ. ಸುನಿತಾ, ಐಎಂಎ ಮೈಸೂರು ಅಧ್ಯಕ್ಷ ಡಾ. ಬಿ.ಎನ್.ಆನಂದರವಿ, ಆರ್‍ಸಿಹೆಚ್ ಅಧಿ ಕಾರಿ ಡಾ.ರವಿ ಮತ್ತಿತರರು ಹಾಜರಿದ್ದರು.

ಏಡ್ಸ್ ಹರಡುವಿಕೆ ಸಂಬಂಧ ಅರಿವು
ಮೈಸೂರು,ಡಿ.1-ಜೆಎಸ್‍ಎಸ್ ಜನ ಶಿಕ್ಷಣ ಸಂಸ್ಥೆಯ ವತಿಯಿಂದ ಇಂದು ವರುಣಾ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಆಚರಿಸಲಾಯಿತು. ಅತಿಥಿಗಳು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ವರುಣಾ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಕಾಂತರಾಜು, ಊIಗಿ ವೈರಾಣು ವಿನಿಂದ ಹರಡುತ್ತದೆ. ಆಫ್ರಿಕಾ ಖಂಡದ ಕೀನ್ಯಾ ದೇಶದಲ್ಲಿ ಮೊದಲು ಏಡ್ಸ್ ಕಂಡುಬಂತು. ಏಡ್ಸ್ ಹರಡುವಿಕೆಯ ಕಾರಣಗಳು ಮತ್ತು ತಡೆಗಟ್ಟುವಿಕೆಯ ವಿಧಾನದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಅಸುರಕ್ಷತೆ ಅನೈತಿಕ ಲೈಂಗಿಕ ಸಂಪರ್ಕ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ರಕ್ತ ನೀಡುವಿಕೆ, ತಾಯಿಯಿಂದ ಮಗುವಿಗೆ ಸ್ತನ್ಯಪಾನದ ಮೂಲಕ ಇದು ಹರಡುವ ಸಾಧ್ಯತೆ ಇದೆ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಜೆಎಸ್‍ಎಸ್ ಜನ ಶಿಕ್ಷಣ ಸಂಸ್ಥೆ ಸಲಹೆಗಾರರಾದ ಚನ್ನಬಸಪ್ಪ, ಒಳ್ಳೆಯ ಅಭ್ಯಾಸದಿಂದ ರೋಗವನ್ನು ತಡೆಯಬಹುದು. ಈ ವಿಚಾರದಲ್ಲಿ ಪರಸ್ಪರ ಮಾಹಿತಿ ವಿನಿಮಯ ಅನಿವಾರ್ಯ. “ಏಟಿoತಿಟeಜge is ಠಿoತಿeಡಿ”ಗೆ ಬದಲಾಗಿ Iಟಿಜಿoಡಿmಚಿಣioಟಿ is ಠಿoತಿeಡಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣಾರ್ಥಿ ಕು.ಪೂಜಾ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮ ಸಹಾಯಕರಾದ ಮಹದೇವ ಪ್ರಸಾದ್ ಸ್ವಾಗತ ಕೋರಿದರು. ತರಬೇತಿಯ ಕಲಿಕಾರ್ಥಿಗಳು, ಸಿಬ್ಬಂದಿ ವರ್ಗದವರು ಸೇರಿದಂತೆ ಸುಮಾರು 50 ಮಂದಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Translate »