ಮೈಸೂರು, ಡಿ.1(ಆರ್‍ಕೆಬಿ)- ಕೊರೊನಾ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಇನ್ನಿತರರ ಆರೋಗ್ಯ ಹಿತ ದೃಷ್ಟಿಯಿಂದ ಸಮಾಜ ಸೇವಕ ಮಹೇಂದ್ರ ಸಿಂಗ್ ಕಾಳಪ್ಪ ಅವರು ಮೈಸೂರು ಜಿಲ್ಲಾ ಪತ್ರಕರ್ತರ ಭವ ನಕ್ಕೆ ಬಿಸಿ ನೀರಿನ ವಾಟರ್ ಡಿಸ್ಪೆನ್ಸರ್ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಸಿ ನೀರಿನ ಯಂತ್ರವನ್ನು ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ನೇತೃತ್ವದಲ್ಲಿ ಪ್ರತಿಷ್ಠಾಪಿಸ ಲಾಯಿತು. ಈ ಯಂತ್ರವು ಅಗತ್ಯಾನುಸಾರ ಬಿಸಿ ನೀರು ಅಥವಾ ತಣ್ಣೀರು ಕಲ್ಪಿಸುತ್ತದೆ. ಕೊರೊನಾ ಸಂದರ್ಭದಲ್ಲಿ ಪತ್ರಕರ್ತರಿಗೆ ಈ ಯಂತ್ರ ಅನುಕೂಲವಾಗಲಿದೆ. ಈ ವೇಳೆ ಮಾತನಾಡಿದ ಮಹೇಂದ್ರ ಸಿಂಗ್ ಕಾಳಪ್ಪ, ಕೊರೊನಾ ಮತ್ತು ಚಳಿಗಾಲದ ದಿನಗಳಲ್ಲಿ ಶುದ್ಧ ಬಿಸಿ ನೀರು ಬಳಸುವುದರಿಂದ ಕಾಯಿಲೆಯಿಂದ ದೂರ ಇರಬಹುದು. ಕೋವಿಡ್ ವಾರಿಯರ್ಸ್‍ಗಳಾಗಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ಯಂತ್ರವನ್ನು ನೀಡಿರುವುದಾಗಿ ತಿಳಿಸಿದರು. ಸಂಘದ ಉಪಾಧ್ಯಕ್ಷ ಅನುರಾಗ್ ಬಸವರಾಜ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ಎಂ.ರಂಗ ಸ್ವಾಮಿ, ಖಜಾಂಚಿ ನಾಗೇಶ್ ಪಾಣತ್ತಲೆ, ಸಾಹಿತಿ ಬನ್ನೂರು ಕೆ.ರಾಜು ಇನ್ನಿತರರಿದ್ದರು.