ಇಂದು ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮೈಸೂರು

ಇಂದು ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ

December 18, 2018

ಮೈಸೂರು: ಮೈಸೂರಿನ ಉದಯಗಿರಿಯಲ್ಲಿರುವ ಶ್ರೀ ವಿಘ್ನೇಶ್ವರ ಪ್ರಸನ್ನ ಭಕ್ತ ಮಂಡಳಿ ವತಿಯಿಂದ ನಾಳೆ (ಡಿ.18) ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ಏರ್ಪಡಿಸಲಾಗಿದೆ. ಬೆಳಿಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ, 7ಕ್ಕೆ ಪ್ರಾಕಾರೋತ್ಸವ, 7.30ಕ್ಕೆ ವೈಕುಂಠ ದ್ವಾರದಲ್ಲಿ ಶ್ರೀದೇವಿ, ಭೂದೇವಿ ಜೊತೆಯಲ್ಲಿ ಶ್ರೀ ವೆಂಕಟೇಶ್ವರಸ್ವಾಮಿ ವೈಕುಂಠ ದ್ವಾರದಲ್ಲಿ ವಿಜೃಂಭಿಸುತ್ತಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ. ಬೆಳಿಗ್ಗೆ 7ರಿಂದ ರಾತ್ರಿ 8 ಗಂಟೆವರೆಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Translate »