ಮೈಸೂರಿನ ದೇವಾಲಯಗಳಲ್ಲಿ ಭಕ್ತಾದಿಗಳಿಂದ ದೇವರ ದರ್ಶನ, ವಿಶೇಷ ಪೂಜೆ
ಮೈಸೂರು

ಮೈಸೂರಿನ ದೇವಾಲಯಗಳಲ್ಲಿ ಭಕ್ತಾದಿಗಳಿಂದ ದೇವರ ದರ್ಶನ, ವಿಶೇಷ ಪೂಜೆ

December 19, 2018

ಮೈಸೂರು: ವೈಕುಂಠ ಏಕಾದಶಿ ಅಂಗವಾಗಿ ಇಂದು ಮೈಸೂ ರಿನ ಹಲವು ದೇವಸ್ಥಾನಗಳಲ್ಲಿ ಭಕ್ತರು ಶ್ರೀ ವೆಂಕಟೇಶ್ವರ ದರ್ಶನ ಪಡೆದು ಪುನೀತರಾದರು. ಮುಂಜಾನೆ 4ರಿಂದ ತಡ ರಾತ್ರಿವರೆಗೂ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಧನುರ್ಮಾಸದಲ್ಲಿ ಬರುವ ವೈಕುಂಠ ಏಕಾದಶಿ ದಿನವಾದ ಇಂದು ಸ್ವರ್ಗದ ಬಾಗಿಲು ತೆರೆಯಲಿದೆ ಎಂಬ ಪ್ರತೀತಿ ಇದೆ. ಈ ದಿನ ಶ್ರೀ ವೆಂಕಟೇಶ್ವರನ ದರ್ಶನ ಮಾಡಿದರೆ ಮೋಕ್ಷ ಪ್ರಾಪ್ತಿ ಯಾಗಲಿದೆ ಎಂಬ ನಂಬಿಕೆ ಜನಸಮು ದಾಯದಲ್ಲಿರುವುದರಿಂದ ಎಲ್ಲಾ ದೇವಾ ಲಯಗಳಲ್ಲಿ ಭಕ್ತರ ದಂಡೇ ಇಂದು ನೆರೆದಿತ್ತು.

ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನ: ಮೈಸೂರಿನ ಒಂಟಿಕೊಪ್ಪಲು ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ ದಲ್ಲಿ ಇಂದು ಮುಂಜಾನೆ 4 ಗಂಟೆಯಿಂ ದಲೇ ಧನುರ್ಮಾಸ ವಿಶೇಷ ಪೂಜೆ, ದೇವ ರಿಗೆ ವಜ್ರಾಂಗಿ ವಿಶೇಷ ಅಲಂಕಾರ, ಅಭಿಷೇಕ, ಪ್ರಾಕಾರ ಉತ್ಸವ, ಸ್ವರ್ಗಮಂಟಪ ಪೂಜೆ, ಸ್ವರ್ಗದ ಬಾಗಿಲು ಪ್ರವೇಶ, ಮಹಾ ಮಂಗಳಾರತಿ ಕೈಂಕರ್ಯಗಳನ್ನು ನಡೆಸಿದ ನಂತರ ಭಕ್ತರಿಗೆ ಶ್ರೀ ವೆಂಕಟರಮಣನ ದರ್ಶನ ಮಾಡಲು ಅವಕಾಶ ನೀಡಲಾಯಿತು.

ಧರ್ಮದರ್ಶನ ಹಾಗೂ 20 ರೂ.ಗಳ ವಿಶೇಷ ದರ್ಶನಗಳ ಸಾಲಿನಲ್ಲಿ ನಿಂತು ರಾತ್ರಿ 12 ಗಂಟೆವರೆಗೂ ಭಕ್ತಾದಿಗಳು ನಿರಂ ತರವಾಗಿ ವಜ್ರಾಂಗಿ ಅಲಂಕೃತದಿಂದ ಕಂಗೊ ಳಿಸುತ್ತಿದ್ದ ಶ್ರೀ ವೆಂಕಟರಮಣ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದ ಪ್ರಧಾನ ಅರ್ಚಕ ಸರ್ವೋತ್ತಮನ್ ಅವರ ನೇತೃತ್ವ ದಲ್ಲಿ ಜಿ.ಪಿ.ಶ್ರೀನಿವಾಸನ್, ಸತ್ಯನಾರಾ ಯಣ್, ನರಸಿಂಹ ಅವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು.

ದೇವರ ದರ್ಶನ ಪಡೆದ ಪ್ರತಿಯೊಬ್ಬ ರಿಗೂ ಪ್ರಸಾದವಾಗಿ ಕೇಸರಿಬಾತ್, ಪೊಂಗಲ್, ಉಪ್ಪಿಟ್ಟು, ಹೆಸರುಕಾಳು, ಕಡಲೆಕಾಳು, ಕಡಲೆಬೇಳೆ ಉಸುಲಿಯನ್ನು ಮುಂಜಾನೆಯಿಂದ ತಡರಾತ್ರಿವರೆಗೂ ವಿತರಿ ಸಲಾಯಿತು ಎಂದು ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಖಾದ್ರಿ ಶ್ರೀನಿ ವಾಸನ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಇಸ್ಕಾನ್: ಮೈಸೂರಿನ ಜಯನಗರ 18ನೇ ಕ್ರಾಸ್‍ನಲ್ಲಿರುವ ಇಸ್ಕಾನ್ (International Society for Krishna Consciousness) ದೇವ ಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರ, ಪೂಜೆ ಹಾಗೂ ದೇವರ ದರ್ಶನ ನಡೆಯಿತು.

ಲಕ್ಷಾರ್ಚನೆ, ಸಂಗೀತೋತ್ಸವ, ಸ್ತೋತ್ರ ಪಠನಗಳು ಇಡೀ ದಿನ ನಡೆದು, ಭಕ್ತರಿಗೆ ಸಬ್ಬಕ್ಕಿ ಪಾಯಸ ಪ್ರಸಾದ ವಿನಿಯೋಗ ಮಾಡಲಾಯಿತು. ದೇವಾಲಯದ ಆವರಣ ದಲ್ಲಿ ಹರಿನಾಮ ಭಜನೆಯಲ್ಲಿ ಭಕ್ತರೊಂ ದಿಗೆ ವಿದೇಶಿಯರೂ ಭಾಗವಹಿಸಿ ಭಕ್ತಿ ಪರವಶರಾಗಿದ್ದುದು ಕಂಡು ಬಂದಿತು.

ಇಸ್ಕಾನ್ ದೇವಸ್ಥಾನದ ಅಧ್ಯಕ್ಷ ಚೈತನ್ಯ ದಾಸ್ ಹಾಗೂ ಉಪಾಧ್ಯಕ್ಷ ರಷಿಕಾ ಶೇಖರ್ ದಾಸ್ ಸೇರಿದಂತೆ ಹಲವರು ಉಪಸ್ಥಿತ ರಿದ್ದು, ವಿಶೇಷ ಪೂಜಾ ಕೈಂಕರ್ಯ ಗಳನ್ನು ನಡೆಸಿಕೊಟ್ಟರು.

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ: ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣ ಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿಯೂ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಧಾರ್ಮಿಕ ವಿಧಿ-ವಿಧಾನಗಳನ್ನು ಆಯೋಜಿಸಲಾಗಿತ್ತು.

ದೇವಸ್ಥಾನದ ಉತ್ತರ ದ್ವಾರದಲ್ಲಿ ನಿರ್ಮಿ ಸಿದ್ದ ಸ್ವರ್ಗದ ಬಾಗಿಲು ಮೂಲಕ ಪ್ರವೇ ಶಿಸಿದ ಭಕ್ತಾದಿಗಳು, ಗೋವಿಂದ ನಾಮ ಪಠಿಸುತ್ತಾ ಶ್ರೀ ದತ್ತ ವೆಂಕಟೇಶ್ವರನ ದರ್ಶನ ಪಡೆದು ಪುನೀತರಾದರು.

ಅಷ್ಟೋತ್ತರ, ಸ್ತೋತ್ರ ಪಠನ, ಭಜನೆ, ಸಂಗೀತ ಕಾರ್ಯಕ್ರಮಗಳು ನಡೆದವು. ಸರತಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದೇವರ ದರ್ಶನ ಪಡೆದು ವೈಕುಂಠ ಏಕಾದಶಿಗೆ ಸಾಕ್ಷಿಯಾದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಪ್ರಧಾನ ಅರ್ಚಕ ಮಾಧವ ಚಾರ್ಯಲು ನೇತೃತ್ವದಲ್ಲಿ ಸ್ವಾಮಿಗೆ ವಿಶೇಷ ಪುಷ್ಪಾಲಂಕಾರ, ಪೂಜಾ ಕೈಂಕರ್ಯಾ ದಿಗಳನ್ನು ನಡೆಸಲಾಯಿತು.ಮೈಸೂರಿನ ಹಲವೆಡೆಯೂ ದೇವಾ ಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿದವು.

Translate »