ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ, ಸ್ವಚ್ಛತೆಯ ಬದ್ಧತೆಗೆ ಪ್ರೇರಣೆ
ಮೈಸೂರು

ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ, ಸ್ವಚ್ಛತೆಯ ಬದ್ಧತೆಗೆ ಪ್ರೇರಣೆ

December 19, 2018

ಮೈಸೂರು:  ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳುವ ಸಂಬಂಧ ಶಾಲಾ ವಿದ್ಯಾರ್ಥಿಗಳನ್ನು ತೊಡ ಗಿಸಲು ಮೈಸೂರು ಗ್ರಾಹಕರ ಪರಿಷತ್ತು (ಎಂಜಿಪಿ) `ಪರಿಸರ ಶಾಲಾ ವಾರ್ಡನ್’ ವಿನೂತನ ಯೋಜನೆಯನ್ನು ರೂಪಿಸಿದ್ದು, ಇದನ್ನು ಮೈಸೂರು ನಗರದ ವಿವಿಧ ಶಾಲೆ ಗಳಿಗೆ ಎಂಜಿಪಿ ಪರಿಚಯಿಸುತ್ತಿದೆ.

ಶಾಲಾ ಮಕ್ಕಳು ಸೃಜನಾತ್ಮಕವಾಗಿ ಪರಿ ಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ತಮ್ಮದೇ ಆಲೋಚನೆಯಲ್ಲಿ ಪಾಲ್ಗೊಳ್ಳುವ ಎಂಜಿ ಪಿಯ ವಿಭಿನ್ನ ಪರಿಕಲ್ಪನೆಯ ಈ ಯೋಜ ನೆಗೆ ಮೈಸೂರಿನ ಕೌಟಿಲ್ಯ ವಿದ್ಯಾಲಯದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಚಾಲನೆ ನೀಡಿದರು. ಇದೇ ವೇಳೆ ಕೌಟಿಲ್ಯ ವಿದ್ಯಾಲಯದ 15 ವಿದ್ಯಾರ್ಥಿಗಳನ್ನು ಒಳಗೊಂಡ `ಪರಿಸರ ಶಾಲಾ ವಾರ್ಡನ್’ ತಂಡವನ್ನು ಅಸ್ತಿತ್ವಕ್ಕೆ ತರಲಾಯಿತು.

ತಂಡದ ಸ್ವರೂಪ: `ಪರಿಸರ ಶಾಲಾ ವಾರ್ಡನ್’ ತಂಡದ ಮೂಲಕ ವಿದ್ಯಾರ್ಥಿ ಗಳು ಸ್ವಯಂ ಪ್ರೇರಣೆಯಿಂದ ತಮ್ಮ ಶಾಲೆ, ಮನೆ ಮತ್ತು ಮೈಸೂರು ನಗರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವುದು ಹಾಗೂ ಪರಿಸರ ಸಂರಕ್ಷಣೆಗೆ ಮುಂದಾಗುವುದು ಈ ಯೋಜನೆಯ ತಿರುಳು. ಇದರೊಂ ದಿಗೆ ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಆ ಮೂಲಕ ತಮ್ಮ ಸುತ್ತಮುತ್ತಲಿ ನಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ಯನ್ನು ವಿದ್ಯಾರ್ಥಿಗಳು ತಮ್ಮದೇ ವಿಧಾನ ದಲ್ಲಿ ನಿಭಾಯಿಸಲಿದ್ದಾರೆ. ಪರಿಸರ ಶಾಲಾ ವಾರ್ಡನ್ ತಂಡಕ್ಕೆ ಶಾಲೆಯ ಮುಖ್ಯ ಶಿಕ್ಷಕರು ಮಾರ್ಗದರ್ಶಕರಾಗಿ ಕೆಲಸ ಮಾಡಲಿದ್ದಾರೆ.

ಮೈಸೂರಿನ ಕೌಟಿಲ್ಯ ವಿದ್ಯಾಲಯ ಸೇರಿ ದಂತೆ ವಿಜಯವಿಠ್ಠಲ ಶಾಲೆ, ಗೋಕು ಲಂನ ಲಯನ್ಸ್‍ನ ಸೇವಾನಿಕೇತನ್ ಶಾಲೆ, ಮಹಾಜನ ಪಬ್ಲಿಕ್ ಸ್ಕೂಲ್ ಹಾಗೂ ಸಿದ್ಧಾರ್ಥನಗರದ ಶಾಂತಲಾ ವಿದ್ಯಾಪೀಠ ದಲ್ಲಿ `ಪರಿಸರ ಶಾಲಾ ವಾರ್ಡನ್’ ಪರಿ ಕಲ್ಪನೆಯನ್ನು ಎಂಜಿಪಿ ಮೊದಲ ಹಂತ ದಲ್ಲಿ ಪರಿಚಯಿಸುತ್ತಿದೆ.

ಇದೇ ವೇಳೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಎಂಜಿಪಿ ಪರಿಸರಕ್ಕೆ ಪೂರಕ ವಾದ ವಿದ್ಯಾರ್ಥಿ ಚಟುವಟಿಕೆಯ ವಿಭಿನ್ನ ಪರಿಕಲ್ಪನೆಯ ಯೋಜನೆಯನ್ನು ಈ ಶಾಲೆಗೆ ಪರಿಚಯಿಸಿದೆ. ಅದರಂತೆ ಇದೀಗ ಶಾಲೆ ಯಲ್ಲಿ 15 ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ರಚನೆಯಾಗಿದೆ. ವಿದ್ಯಾರ್ಥಿಗಳೇ ಸ್ವಯಂಪ್ರೇರಣೆಯಿಂದ ಚಟುವಟಿಕೆ ನಡೆಸು ವಂತಹ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳ ನಿರ್ಧಾರದಂತೆಯೇ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಚಟುವಟಿಕೆ ಗಳು ರೂಪುಗೊಳ್ಳಲಿವೆ. ಆ ಮೂಲಕ ವಿದ್ಯಾರ್ಥಿಗಳು ಕ್ರೀಯಾಶೀಲನೆ ಹಾಗೂ ಸೃಜನಾತ್ಮಕವಾಗಿ ತೊಡಗಿಸಿಕೊಂಡು ಕ್ರಾಂತಿಕಾರ ಬದಲಾವಣೆ ತರುವ ಆಶಾ ಭಾವನೆ ಇದೆ ಎಂದು ನುಡಿದರು.

ಈ ಕಾರ್ಯಕ್ರಮದಡಿ ಮಕ್ಕಳಿಗೆ ಯಾವುದೇ ಸಮಯದ ನಿರ್ಬಂಧವಾಗಲೀ, ಹೀಗೆಯೇ ಮಾಡಬೇಕೆಂಬ ನಿಯಮಾವಳಿ ಇರುವು ದಿಲ್ಲ. ಇಲ್ಲಿ ವಿದ್ಯಾರ್ಥಿಗಳು ಪೂರ್ಣ ಸ್ವತಂತ್ರರಾಗಿ ಪರಿಸರಕ್ಕೆ ಪೂರಕ ಕಾರ್ಯ ಚಟುವಟಿಕೆ ನಡೆಸಲಿದ್ದಾರೆ. ಮಕ್ಕಳ ಪ್ರತಿಭೆ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ವಿಶಿಷ್ಟ ಪ್ರಯತ್ನ ಇದು ಎಂದರು.

ಎಂಜಿಪಿ ಅಧ್ಯಕ್ಷ ಡಾ.ಭಾಮಿ ವಿ.ಶೆಣೈ ಮಾತನಾಡಿ, ಮಕ್ಕಳ ಬಳಿ ಹೋಗಿ ಇಂತ ಹದ್ದನ್ನು ಮಾಡಲೇಬೇಕೆಂದು ಒತ್ತಡ ಹಾಕಿದರೆ ಪ್ರಯೋಜನವಿಲ್ಲ. ಬದಲಾಗಿ ಅವರಿಗೆ ಸಲಹೆ ನೀಡಿ ಸ್ವಯಂಪ್ರೇರಣೆ ಯಿಂದ ತೊಡಗಿಸಿಕೊಳ್ಳಲು ಅನುವು ಮಾಡಿ ಕೊಡಬೇಕು. ಇದೇ ಹಿನ್ನೆಲೆಯಲ್ಲಿ ಎಂಜಿಪಿ `ಪರಿಸರ ಶಾಲಾ ವಾರ್ಡನ್’ ಪರಿಕಲ್ಪನೆ ಮೂಡಿಬಂದಿದೆ. ಮಕ್ಕಳು ಸರ್ವ ಸ್ವತಂತ್ರ ರಾಗಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಹೊಸ ಆಲೋಚನೆಗಳನ್ನು ಅನಾವರಣ ಗೊಳಿಸಿ ಬದಲಾವಣೆ ತರಬೇಕೆಂಬುದು ಈ ಯೋಜನೆಯ ಆಶಯ ಎಂದು ವಿವರಿಸಿ ದರು. ಕೌಟಿಲ್ಯ ವಿದ್ಯಾಲಯದಲ್ಲಿ ರಚಿಸಿ ರುವ ತಂಡದಲ್ಲಿ ಇರುವ 15 ಮಂದಿಯಲ್ಲಿ ಅವರ ಸಂಖ್ಯೆ ಮೀರಿ ಹೊಸ ಆಲೋಚನೆ ಗಳು ಮೂಡಿಬರಬಹುದು. ಈ 15 ಮಂದಿ ಯಿಂದ ಇಡೀ ಶಾಲಾ ಮಕ್ಕಳಲ್ಲಿ ಪರಿಸರ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಉಂಟಾ ಗಬಹುದು. ನಾವು ವಿದ್ಯಾರ್ಥಿಗಳಿಗೆ ಯಾವುದೇ ನಿರ್ಬಂಧಗಳನ್ನು ಹಾಕುವು ದಿಲ್ಲ. ಅವರಿಗಿಷ್ಟವಾದಂತೆ ಚಟುವಟಿಕೆ ನಡೆಸಿ ಕೊಂಡು ಪರಿಸರ ಸಂರಕ್ಷಣೆಗೆ ಹಾಗೂ ಸ್ವಚ್ಛತೆಗೆ ತಮ್ಮದೇ ಕೊಡುಗೆ ನೀಡಬ ಹುದು ಎಂದರು. ಗೋಕುಲಂನ ಲಯನ್ಸ್‍ನ ಸೇವಾ ನಿಕೇತನ್ ಶಾಲೆ ಆಡಳಿತಾಧಿಕಾರಿ ಗುರುರಾಜ್, ಪರಿಸರವಾದಿ ಕಾಂತರಾಜ ಅರಸ್, ಕೌಟಿಲ್ಯ ವಿದ್ಯಾಲಯದ ಪ್ರಾಂಶು ಪಾಲರಾದ ಡಾ.ಎಲ್.ಸವಿತಾ ಮತ್ತಿತ ರರು ಹಾಜರಿದ್ದರು.

ಪರಿಸರ ಶಾಲಾ ವಾರ್ಡನ್ ಯೋಜನೆ ರಾಯಭಾರಿಗಳಾಗಿ ಕ್ರಿಯಾ ಸುಮನ್, ಬಿ.ಭೂಮಿಕಾ ಆಯ್ಕೆ
ಮೈಸೂರು: ಎಂಜಿಪಿ ಪರಿಕಲ್ಪನೆಯ `ಪರಿಸರ ಶಾಲಾ ವಾರ್ಡನ್’ ಯೋಜನೆಯ ರಾಯಭಾರಿಗಳಾಗಿ ಮೈಸೂರಿನ ಕೌಟಿಲ್ಯ ವಿದ್ಯಾಲಯದ 6ನೇ ತರಗತಿ ವಿದ್ಯಾರ್ಥಿನಿಯರಾದ ಕ್ರಿಯಾ ಸುಮನ್, ಬಿ.ಭೂಮಿಕಾ ಶರತ್ ಆಯ್ಕೆಯಾದರು.
ಈ ಇಬ್ಬರು ವಿದ್ಯಾರ್ಥಿನಿಯರು ಈ ಹಿಂದಿನಿಂದಲೂ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಸಂಬಂಧ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.

ಪತ್ರಿಕೆಯೊಂದಿಗೆ ಮಾತನಾಡಿದ ಕ್ರಿಯಾ, ಬೀದಿಯಲ್ಲಿ ಬಿದ್ದು ಪರಿಸರಕ್ಕೆ ಮಾರಕವಾಗುವಂತಹ ಪ್ಲಾಸ್ಟಿಕ್ ಕವರ್‍ಗಳು ಹಾಗೂ ಬಾಟಲಿಗಳನ್ನು ಸಂಗ್ರಹಿಸುವ ಹವ್ಯಾಸ ಇಟ್ಟುಕೊಂಡಿದ್ದೇನೆ. ಸಾಧ್ಯವಾದ ಸಂದರ್ಭದಲ್ಲಿ ಈ ಚಟುವಟಿಕೆ ನಡೆಸುತ್ತೇನೆ. ಸಂಗ್ರಹಿಸಿದ ಪ್ಲಾಸ್ಟಿಕ್ ಕವರ್ ಮತ್ತು ಬಾಟಲಿಗಳನ್ನು ಮರುಬಳಕೆ ಘಟಕಕ್ಕೆ ಕೊಡುವ ಪರಿಪಾಠ ಬೆಳೆಸಿಕೊಂಡಿದ್ದೇನೆ. ಪರಿಸರ ಪೂರಕ ಜೀವನ ಶೈಲಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ನನ್ನಲ್ಲಿದ್ದು, ಗಿಡ ನೆಡುವ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದರು.

ಬಿ.ಭೂಮಿಕಾ ಮಾತನಾಡಿ, ಬಿಡುವಿನ ವೇಳೆಯಲ್ಲಿ ಮನೆ ಹತ್ತಿರದಲ್ಲಿ ತ್ಯಾಜ್ಯ ನಿರ್ವಹಣೆಯ ಕಾರ್ಯವೈಖರಿ ಗಮನಿಸುತ್ತೇನೆ. ಯಾವ ತ್ಯಾಜ್ಯವನ್ನು ಯಾವ ವಿಧಾನದಲ್ಲಿ ನಿರ್ವಹಣೆ ಮಾಡಬೇಕೆಂಬ ಬಗ್ಗೆ ಶಾಲೆಯಿಂದ ಪ್ರಕಟಗೊಳ್ಳುವ ಪತ್ರಿಕೆಯಲ್ಲಿ ಲೇಖನ ಸಹ ಬರೆದಿದ್ದೇನೆ. ಮರ-ಗಿಡ ಹಾಗೂ ಪರಿಸರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಎಂದರು.

Translate »