ಟೊಮೆಟೊ ದರ ಹೆಚ್ಚಳ; ರೈತರಲ್ಲಿ ಹರ್ಷ
ಮೈಸೂರು

ಟೊಮೆಟೊ ದರ ಹೆಚ್ಚಳ; ರೈತರಲ್ಲಿ ಹರ್ಷ

June 24, 2020

ಮೈಸೂರು, ಜೂ.23(ವೈಡಿಎಸ್)- ಕಳೆದ ವಾರ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದ ಟೊಮೆಟೊ ದರ ಈಗ ಹೆಚ್ಚಳವಾಗಿದ್ದು, ರೈತರಲ್ಲಿ ಸಂತಸ ಮೂಡಿದೆ. ಆದರೆ, ಬೀನ್ಸ್ 50 ರೂ.ನಿಂದ 20 ರೂ.ಗೆ ದಿಢೀರ್ ಕುಸಿತ ಕಂಡಿದ್ದು, ಬೆಳೆಗಾರರು ಭಾರೀ ನಷ್ಟ ಅನುಭವಿಸುವಂತಾಗಿದೆ.

ಕೊರೊನಾ ಹಾವಳಿ, ಲಾಕ್‍ಡೌನ್ ವೇಳೆ ಎಪಿಎಂಸಿ ಮಾರು ಕಟ್ಟೆಯಲ್ಲಿ 25 ಕೆಜಿಯ 1 ಕ್ರೇಟ್ ಟೊಮ್ಯಾಟೊ 80 ರೂ.ಗೆ ಮಾರಾಟವಾಗುತ್ತಿತ್ತು. ಇದರಿಂದ ಕಂಗಾಲಾಗಿದ್ದ ರೈತರು, ಸಾಗಣೆ ಖರ್ಚೂ ಸಿಗುವುದಿಲ್ಲ ಎಂದು ಗಿಡದಿಂದ ಕೊಯ್ಲು ಮಾಡದೇ ಹಾಗೆಯೇ ಬಿಟ್ಟಿದ್ದರು. ಇಂದು ಟೊಮ್ಯಾಟೊ ಬೆಲೆ ಕೆಜಿಗೆ 30 ರೂ.ಗೆ ಏರಿಕೆ ಆಗಿರುವುದರಿಂದ ಬೆಳೆಗಾರರಲ್ಲಿ ಸಂತಸ ಮೂಡಿದೆ.

ಮಂಗಳವಾರ ದೇವರಾಜ ಮಾರುಕಟ್ಟೆಯಲ್ಲಿ (ಕೆ.ಜಿ.ಗಳಲ್ಲಿ) ಬೀಟ್‍ರೂಟ್ 20 ರೂ.(ಈ ಹಿಂದೆ 30 ರೂ), ಕ್ಯಾರೆಟ್ 10ರೂ., ಬೀನ್ಸ್ 20 ರೂ (50ರೂ), ಶುಂಠಿ 80 ರೂ. (100ರೂ), ಹಸಿಮೆಣಸಿನಕಾಯಿ 40 ರೂ. (50ರೂ), ದಪ್ಪಮೆಣಸಿನಕಾಯಿ 80 ರೂ. (100 ರೂ), ಮೂಲಂಗಿ 15 ರೂ. (20ರೂ), ಗೆಡ್ಡಕೋಸು 20 ರೂ. (30 ರೂ), ಬದನೆ ಕಾಯಿ 20 ರೂ. (30 ರೂ), ಬೆಂಡೇಕಾಯಿ 20 ರೂ. (25 ರೂ), ಸೌತೆಕಾಯಿ 10ರೂ. (15 ರೂ), ಗೋರಿಕಾಯಿ 20 ರೂ. (25 ರೂ), ಈರುಳ್ಳಿ 10 ರೂ. (15 ರೂ), ಎಲೆಕೋಸು 10 ರೂ. (15 ರೂ), ಆಲೂಗೆಡ್ಡೆ 30 ರೂ. (40 ರೂ), ಸೋರೆಕಾಯಿ 10 ರೂ. (15 ರೂ)ಗೆ ಮಾರಾಟ ಮಾಡುತ್ತಿದ್ದಾರೆ.

ಸಂಬಾರಸೊಪ್ಪು ಕಂತೆಗೆ (ದಪ್ಪ) 10 ರೂ.ಗೆ ಮಾರಾಟ ವಾದರೆ, ಸಣ್ಣ ಕಂತೆ 5 ರೂ. (10ರೂ.), ಸಬ್ಬಸಿಗೆ, ಪಾಲಾಕು, ಮೆಂತ್ಯೆ, ಪುದೀನ ತಲಾ 3 ಸಣ್ಣ ಕಂತೆಗೆ 10 ರೂ. (1ಕ್ಕೆ 5 ರೂ)ಗೆ ಮಾರಾಟವಾಗುತ್ತಿವೆ.

ಹಾಪ್‍ಕಾಮ್ಸ್: ತರಕಾರಿಗಳ ಧಾರಣೆಯೂ ಸಾಕಷ್ಟು ಏರಿಳಿತ ಕಂಡಿದೆ. (ಕೆಜಿಗಳಲ್ಲಿ) ಟೊಮ್ಯಾಟೊ (618)- 32 ರೂ., ಟೊಮ್ಯಾಟೊ ಹೆಚ್‍ಬಿ 42 ರೂ., ಹಸಿಶುಂಠಿ 90 ರೂ., ಹುರಳಿಕಾಯಿ (ನಾಟಿ) 24 ರೂ., ಬದನೆಕಾಯಿ 15 ರೂ., ಬೆಂಡೆಕಾಯಿ 16 ರೂ., ಪಚ್ಚಬಾಳೆ 20 ರೂ., ದಪ್ಪಮೆಣಸಿನ ಕಾಯಿ 80 ರೂ., ಹಸಿ ಮೆಣಸಿನಕಾಯಿ 40 ರೂ., ಹಾಗಲಕಾಯಿ 44 ರೂ., ಎಲೆಕೋಸು 12 ರೂ., ನುಗ್ಗೆಕಾಯಿ 60 ರೂ., ಕಿತ್ತಳೆ 130 ರೂ., ಗೋರಿಕಾಯಿ 24 ರೂ., ಕ್ಯಾರೇಟ್ 38 ರೂ., ಬೀಟ್‍ರೂಟ್ 38 ರೂ., ಪಡವಲಕಾಯಿ 14 ರೂ., ಸೋರೆಕಾಯಿ 12 ರೂ., ಮಂಗಳೂರು ಸೌತೆ 8 ರೂ., ಸೀಮೆಬದನೆಕಾಯಿ 24 ರೂ., ಮೂಲಂಗಿ 20 ರೂ., ಹೂಕೋಸು 23 ರೂ., ಗೆಡ್ಡೆಕೋಸು 30 ರೂ., ಹೀರೆಕಾಯಿ 38 ರೂ., ಚಪ್ಪರದ ಅವರೆ 62 ರೂ., ಸುವರ್ಣಗೆಡ್ಡೆ 30 ರೂ., ಈರುಳ್ಳಿ 20 ರೂ., ಬೆಳ್ಳುಳ್ಳಿ 120 ರೂ., ಆಲೂಗಡ್ಡೆ 36 ರೂ., ಬೂದಕುಂಬಳ 20 ರೂ., ಸಿಹಿಕುಂಬಳ 8 ರೂ., ಸೌತೆಕಾಯಿ 12 ರೂ. ತೊಂಡೆಕಾಯಿ 16 ರೂ., ತೆಂಗಿನಕಾಯಿ 35 ರೂ ದರವಿದೆ.

ಹಣ್ಣು: (ಕೆಜಿಗಳಲ್ಲಿ) ಮೊಸಂಬಿ 54 ರೂ., ಸೇಬು 185 ರೂ., ಪರಂಗಿ(ನಾಟಿ) 10 ರೂ., ಸಪೋಟ 50 ರೂ., ಅನಾನಸ್ 30 ರೂ., ಖರ್ಬೂಜ 34 ರೂ., ದಾಳಿಂಬೆ 100 ರೂ., ದ್ರಾಕ್ಷಿ ಡಿಕೆ 50 ರೂ., ದ್ರಾಕ್ಷಿ ನೀಲಿ 60 ರೂ., ಸೀಬೆ ಹಣ್ಣು 60 ರೂ., ಕಲ್ಲಂಗಡಿ 20 ರೂ., ಮಾವು ಬಿಪಿ 50 ರೂ., ಮಾವು ತೋತಾಪುರಿ 24 ರೂ., ಮಾವು ಮಲ್ಲಿಕ 80 ರೂ., ಮಾವು ರಸಪುರಿ 70 ರೂ., ಮಾವು ಬಾದಾಮಿ 80 ರೂ., ಮಾವು ಸೇಂದೂರ 50 ರೂ., ಮಾವು ನೀಲಂ 75 ರೂ.ಗೆ ಮಾರಾಟ ಮಾಡಲಾಗುತ್ತಿದೆ.

Translate »