ನಾಳೆ ಅರಮನೆ ದರ್ಬಾರ್  ಹಾಲ್‍ನಲ್ಲಿ ಸಿಂಹಾಸನ ಜೋಡಣೆ
ಮೈಸೂರು

ನಾಳೆ ಅರಮನೆ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ಜೋಡಣೆ

September 30, 2021

ಮೈಸೂರು, ಸೆ.29(ಎಂಟಿವೈ)- ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಖಾಸಗಿ ದರ್ಬಾರ್‍ಗಾಗಿ ಭಾದ್ರಪದಮಾಸ ಕೃಷ್ಣ ಪಕ್ಷ ದಶಮಿ ದಿನವಾದ ಅ.1ರಂದು ಬೆಳಗ್ಗೆ 9.30ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ದರ್ಬಾರ್ ಹಾಲ್‍ನಲ್ಲಿ ಚಿನ್ನದ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಿಸಲಾಗುತ್ತದೆ.

ಪ್ರಸಕ್ತ ಸಾಲಿನಲ್ಲಿ ದಸರಾ ಮಹೋತ್ಸವದ ಅ.7ರಿಂದ 15ರವರೆಗೆ ನಡೆಯಲಿದೆ. ಇದಕ್ಕಾಗಿ ಅರಮನೆಯ ಸ್ಟ್ರಾಂಗ್‍ರೂಮ್‍ನಲ್ಲಿ ಬಿಡಿ ಬಿಡಿಯಾಗಿದ್ದ ಸಿಂಹಾಸನವನ್ನು ದರ್ಬಾರ್ ಹಾಲ್‍ನಲ್ಲಿ ಜೋಡಣೆ ಮಾಡಲಾಗುತ್ತದೆ. ಈ ಸಾಲಿನ ದಸರಾ ಮಹೋತ್ಸವಕ್ಕಾಗಿ ಅ.1ರಂದು ಬೆಳಗ್ಗೆ 9.30ರೊಳಗೆ ಸಲ್ಲುವ ತುಲಾಲಗ್ನದಲ್ಲಿ ದರ್ಬಾರ್ ಹಾಲ್‍ನಲ್ಲಿ ಚಿನ್ನದ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಿಸಲು ಸಮಯ ನಿಗದಿ ಮಾಡಲಾಗಿದೆ. ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 7.20ಕ್ಕೆ ದರ್ಬಾರ್ ಹಾಲ್‍ನಲ್ಲಿ ರಾಜ ಪುರೋಹಿತರ ಸಮ್ಮುಖದಲ್ಲಿ ನವಗ್ರಹ ಪುರಸ್ಸರ, ಶಾಂತಿಹೋಮ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯ ಜರುಗಲಿದೆ.

Translate »