ಬಲಿಜ ವಿದ್ಯಾರ್ಥಿನಿಲಯದ ಪುನರ್ ನಿರ್ಮಾಣಕ್ಕೆ ಸಂಪೂರ್ಣ ನೆರವು
ಮೈಸೂರು

ಬಲಿಜ ವಿದ್ಯಾರ್ಥಿನಿಲಯದ ಪುನರ್ ನಿರ್ಮಾಣಕ್ಕೆ ಸಂಪೂರ್ಣ ನೆರವು

September 29, 2021

ಮೈಸೂರು,ಸೆ.28- ಸಮಾಜದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ವಿದ್ಯಾರ್ಥಿನಿಲಯದ ಪುನರ್ ನಿರ್ಮಾಣಕ್ಕೆ ಬೇಕಾದ ಹಣಕಾಸಿನ ನೆರವನ್ನು ಸಂಪೂರ್ಣವಾಗಿ ಒದಗಿಸಲಾಗುವುದು ಎಂದು ಮಾಜಿ ಸಚಿವ ಎಂ.ಆರ್. ಸೀತಾರಾಮ್ ಭರವಸೆ ನೀಡಿದರು.

ನಗರದ ಸರಸ್ವತಿಪುರಂ ಶ್ರೀಯೋಗಿ ನಾರಾಯಣ ಬಲಿಜ(ಬಣಜಿಗ) ಸಂಘದ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ, ಕಟ್ಟಡದ ಪರಿಸ್ಥಿತಿ ಪರಿಶೀಲಿಸಿದರು.
ಬಳಿಕ ಸಮಾಜದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಲಿಜ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ನಿರ್ಮಿಸಿರುವ ಹಾಸ್ಟೆಲ್‍ಗಳನ್ನು ಖಾಸಗಿಯವರಿಗೆ ಕೊಡದೆ ಸಂಘದಿಂದಲೇ ನಿರ್ವಹಣೆ ಮಾಡಬೇಕು. ಬೆಂಗಳೂರಿ ನಲ್ಲಿ ಇದ್ದ ಹಾಸ್ಟೆಲ್ ಅನ್ನು ಖಾಸಗಿಯವರಿಗೆ ವಹಿಸಿಕೊಟ್ಟ ಪರಿಣಾಮವಾಗಿ ಅವರಿಂದ ವಾಪಸ್ ಪಡೆಯಲು ದೊಡ್ಡ ಸಮಸ್ಯೆ ಎದುರಿಸಬೇಕಾಯಿತು. ಈಗ ಸಮಾಜದ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಮೈಸೂರಿನ ವಿದ್ಯಾರ್ಥಿನಿಲಯವನ್ನು ಸಹ ಖಾಸಗಿ ಯವರಿಗೆ ಕೊಟ್ಟಿದ್ದರಿಂದ ನ್ಯಾಯಾಲಯದ ಮೊರೆ ಹೋಗಬೇಕಾದ ಸನ್ನಿವೇಶ ಬಂದಿದ್ದು ಬೇಸರದ ಸಂಗತಿ. ಈಗ ಸಮಾಜದ ವಶಕ್ಕೆ ಬಂದಿರುವುದು ಸಂತೋಷ ತಂದಿದೆ. ಕಟ್ಟಡವನ್ನು ಪುನರ್ ನವೀಕರಣ ಮಾಡಿ ನೂರು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವಂತಹ ಕೊಠಡಿಗಳನ್ನು ನಿರ್ಮಾಣ ಮಾಡಲು ಅನುದಾನ ಕೊಡುತ್ತೇನೆ ಎಂದರು.

ಮುಂದಿನ ಜನವರಿ ಒಳಗೆ ಸಂಪೂರ್ಣ ನವೀ ಕರಣವಾಗಿ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡ ಬೇಕು. ಸ್ನಾತಕ, ಸ್ನಾತಕೋತ್ತರ, ಇಂಜಿನಿಯರಿಂಗ್, ವೈದ್ಯ ಕೀಯ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಯ ಬಲಿಜ ಸಮಾಜದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ನಮ್ಮ ತಂದೆಯವರು (ಎಂ.ಎಸ್. ರಾಮಯ್ಯ) ಸಮಾ ಜಕ್ಕೆ ಕೊಡುಗೆ ನೀಡಬೇಕು. ಸಮಾಜದ ಸೇವೆ ಮಾಡ ಬೇಕು ಎಂದು ಸದಾ ಹೇಳುತ್ತಿದ್ದರು. ಅದರಂತೆ, ಮೈಸೂರು ಭಾಗಕ್ಕೂ ನಮ್ಮ ಸೇವೆ ಸದಾ ಇರುತ್ತದೆ ಎಂದು ಸೀತಾರಾಮ್ ಭರವಸೆ ನೀಡಿದರು.

ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿನಿಲಯ ದೇವಸ್ಥಾನಕ್ಕಿಂತ ಶ್ರೇಷ್ಠ. ಯಾವುದೇ ಕಲ್ಮಶ ಇಲ್ಲದ ವಾತಾವರಣ ನಿರ್ಮಾಣ ಮಾಡಬೇಕು. ಬಡವರು, ಗ್ರಾಮಾಂತರ ಪ್ರದೇಶಗಳಿಂದ ಬರುವವರಿಗೆ ಅನುಕೂಲ ವಾಗಲೆಂದು ಕಟ್ಟಿಸಿದ ವಿದ್ಯಾರ್ಥಿನಿಲಯದ ಸಂರಕ್ಷಣೆ ಆಗಬೇಕು ಎಂದರು. ಸಂಘದ ಅಧ್ಯಕ್ಷ ಎಂ.ನಾರಾಯಣ, ಪ್ರಧಾನ ಕಾರ್ಯದರ್ಶಿ ಎಚ್.ಆರ್.ಗೋಪಾಲ ಕೃಷ್ಣ, ಖಜಾಂಚಿ ಡಿ.ನಾಗರಾಜು, ಮಹಾರಾಣಿ ಕಾಲೇಜು ಸಹಾ ಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ, ಹಾಜರಿದ್ದರು.

Translate »