6ನೇ ತಂಡದ ಮಹಿಳಾ ಕಾನ್‍ಸ್ಟೇಬಲ್‍ಗಳ ಆಕರ್ಷಕ ನಿರ್ಗಮನ ಪಥ ಸಂಚಲನ
ಮೈಸೂರು

6ನೇ ತಂಡದ ಮಹಿಳಾ ಕಾನ್‍ಸ್ಟೇಬಲ್‍ಗಳ ಆಕರ್ಷಕ ನಿರ್ಗಮನ ಪಥ ಸಂಚಲನ

September 29, 2021

ಮೈಸೂರು, ಸೆ.28(ಆರ್‍ಕೆ)- ಮೈಸೂರಿನ ಪೊಲೀಸ್ ತರಬೇತಿ ಶಾಲೆ (ಪಿಟಿಎಸ್)ಯಲ್ಲಿ 8 ತಿಂಗಳ ಬುನಾದಿ ತರಬೇತಿ ಪಡೆದ 6ನೇ ತಂಡದ 242 ಮಹಿಳಾ ಕಾನ್‍ಸ್ಟೇಬಲ್‍ಗಳ ನಿರ್ಗಮನ ಪಥಸಂಚಲನ ಮಂಗಳವಾರ ಜ್ಯೋತಿನಗರದ ಡಿಎಆರ್ ಪರೇಡ್ ಮೈದಾನದಲ್ಲಿ ನಡೆಯಿತು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಿಕ್ಷಣಾರ್ಥಿಗಳ ಆಕರ್ಷಕ ಪಥ ಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರಲ್ಲದೆ ತರಬೇತಿ ಅವಧಿಯಲ್ಲಿ ಸಾಧನೆ ಮೆರೆದ ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳಿಗೆ ಬಹುಮಾನ ವಿತರಿಸಿದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರ ಬೇತಿ) ಪಿ.ಹರಿಶೇಖರನ್, ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲರಾದ ಡಾ.ಕೆ.ಧರಣಿದೇವಿ ಮಾಲಗತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಪಿಎ ನಿರ್ದೇ ಶಕ ವಿಪುಲ್‍ಕುಮಾರ್, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಆರ್.ಚೇತನ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಪೊಲೀಸ್ ತರಬೇತಿ ಶಾಲೆ ಹೊರತಂದಿರುವ `ಸ್ಮøತಿ ಸಂಚಯ ಸ್ಮರಣ ಸಂಚಿಕೆಯನ್ನು ಗೃಹ ಸಚಿ ವರು ಇದೇ ವೇಳೆ ಬಿಡುಗಡೆ ಮಾಡಿದರು. ಪರೇಡ್ ಕಮಾಂಡರ್ ಎಂ.ಲತಾ ಹಾಗೂ ಉಪ ಪರೇಡ್ ಕಮಾಂಡರ್ ಕೆ.ಅಶ್ವಿನಿ ಅವರ ನೇತೃತ್ವದಲ್ಲಿ ನಡೆದ ಆಕ ರ್ಷಕ ಪಥಸಂಚಲನ ಕಾರ್ಯಕ್ರಮವನ್ನು ಆಕಾಶ ವಾಣಿಯ ಮಂಜುನಾಥ್ ಮತ್ತು ಡಿಎಆರ್‍ನ ಲಕ್ಷ್ಮಿ ಅವರು ನಿರೂಪಣೆ ಮಾಡಿದರು.

ಬಹುಮಾನ ವಿಜೇತರು: ಒಳಾಂಗಣದಲ್ಲಿ ಪ್ರಥಮ ಬಹುಮಾನ ಪಡೆದ ಎಂ. ಲತಾ ಅವರಿಗೆ ಸರ್ವೋ ತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಗೃಹ ಸಚಿವರು ಪ್ರದಾನ ಮಾಡಿದರು. ಬಿ. ಕಾವೇರಿ ಮತ್ತು ಕೆ. ಅಶ್ವಿನಿ ಅವರು ಒಳಾಂಗಣದಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು.

ಹೊರಾಂಗಣ ಪ್ರಶಸ್ತಿಗೆ ಡಿ.ರೇಖಾ, ಶಶಿಕಲಾ, ಎಂ.ಪಿ. ಮೇಘನ, ಫೈರಿಂಗ್‍ನಲ್ಲಿ ಎಸ್. ಸುಜಾತ, ಬಿರಾದಾರ, ಚಂದ್ರಕಲಾ ಬಿರಾದಾರ ಹಾಗೂ ಡಿ.ಜಿ. ಚಿತ್ರ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಕ್ಕೆ ಭಾಜನರಾದರು.

220 ಮಂದಿ ಪದವೀಧರರು: ತರಬೇತಿ ಪಡೆದವರ ಪೈಕಿ 22 ಮಂದಿ ಪಿಯುಸಿ ವಿದ್ಯಾರ್ಹತೆ ಹೊಂದಿದವ ರಾಗಿದ್ದು, ಉಳಿದ 220 ಮಂದಿ ಪದವಿ ಮತ್ತು ಸ್ನಾತ ಕೋತ್ತರ ಪದವೀಧರರಾಗಿದ್ದಾರೆ. ಎಂ.ಎಸ್ಸಿ, ಬಿ.ಎಡ್ 1, ಎಂ.ಎ., ಬಿ.ಎಡ್. 2, ಎಂ.ಎಸ್ಸಿ 11, ಎಂ.ಎ. 12, ಬಿ.ಎ.,ಎಲ್‍ಎಲ್.ಬಿ 1, ಬಿಎ, ಬಿ.ಎಡ್ 6, ಬಿ.ಎ., ಬಿಪಿ.ಎಡ್ 1, ಬಿಎಸಿ, ಬಿ.ಎಡ್ 6, ಬಿ.ಎ., ಡಿ.ಎಡ್ 1, ಬಿಇ 15, ಬಿಸಿಎ 2, ಬಿಬಿಎಂ 6, ಬಿಬಿಎ 4, ಬಿ.ಕಾಂ. 45, ಬಿಎ 72, ಬಿಎಸ್ಸಿ 23 ಹಾಗೂ ಬಿ.ಎಸ್. ಓರ್ವ ಪದವೀಧರೆ ಕಾನ್‍ಸ್ಟೇಬಲ್ ಆಗಿ ನೇಮಕಗೊಂಡಿದ್ದಾರೆ.

2021ರ ಜ.22ರಂದು ಆರಂಭವಾದ ಬುನಾದಿ ತರಬೇತಿಯಲ್ಲಿ ಪೊಲೀಸ್ ತರಬೇತಿ ಶಾಲೆಯ ಪ್ರಾಂಶು ಪಾಲರಾದ ಡಾ. ಧರಣೀದೇವಿ ಮಾಲಗತ್ತಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಂಕರೇಗೌಡ, ಇನ್ಸ್ ಪೆಕ್ಟರ್‍ಗಳಾದ ವೈ.ಪಿ.ಚಂದ್ರಕಲಾ, ಎಸ್.ನಾಗೇಶ್, ಎಸ್.ಗಂಗಾಧರ, ಎಂ.ನಾಯಕ್, ಹೆಚ್.ಎಂ. ಸ್ಫೂರ್ತಿ ರಾಜ್, ಸಬ್ ಇನ್ಸ್‍ಪೆಕ್ಟರ್‍ಗಳಾದ ಎನ್.ಜಯಕಾಂತ ಮಣಿ, ಎನ್.ಭವ್ಯಾ, ಎ.ನವೀನ್ ಬೋಧನೆ ಮಾಡಿದ್ದಾರೆ.

Translate »