ಕೇಂದ್ರದಿಂದ ಜಾತಿ ಜನಗಣತಿ ನಿರ್ಲಕ್ಷ್ಯ  ವಿರೋಧಿಸಿ ಅಂಚೆ ಪತ್ರ ಚಳವಳಿ
ಮೈಸೂರು

ಕೇಂದ್ರದಿಂದ ಜಾತಿ ಜನಗಣತಿ ನಿರ್ಲಕ್ಷ್ಯ ವಿರೋಧಿಸಿ ಅಂಚೆ ಪತ್ರ ಚಳವಳಿ

September 29, 2021

ಮೈಸೂರು, ಸೆ.28(ಆರ್‍ಕೆಬಿ)- ಜಾತಿ ಗಣತಿ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋ ಧಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರಪಾಲಿಕೆ ಎದುರಿನ ಅಂಚೆ ಪೆಟ್ಟಿಗೆ ಬಳಿ ಅಂಚೆ ಪತ್ರ ಚಳವಳಿ ನಡೆಸಿದರು.

ಕೇಂದ್ರ ಸರ್ಕಾರ ಹಿಂದುಳಿದ ವರ್ಗ ಗಳ ವಿರೋಧಿ ನೀತಿ ಅನುಸರಿಸುತ್ತಿದೆ. ಸಮ ಸಮಾಜ ನಿರ್ಮಾಣಕ್ಕೆ, ಸರ್ಕಾರದ ಸವಲತ್ತುಗಳು ಸಮಾನ ಹಂಚಿಕೆಗೆ, ಹಿಂದು ಳಿದ ವರ್ಗಗಳ ಜನಸಂಖ್ಯೆಗೆ ಅನುಗುಣ ವಾಗಿ ಮೀಸಲಾತಿ ಪಡೆಯಲು ಜಾತಿವಾರು ಜನಗಣತಿ ಅತೀ ಅವಶ್ಯ. ಹಿಂದುಳಿದ ವರ್ಗಗಳ ಜಾತಿಗಣತಿ ಮಾಡುವುದರಿಂದ ಸಂವಿಧಾನ ಬದ್ಧ ಹಕ್ಕು ಪಡೆಯಲು ಸಹಾ ಯಕವಾಗುತ್ತದೆ. ಈ ವಿಚಾರಗಳ ಬಗ್ಗೆ ಅರಿಯದೇ ಜಾತಿಗಣತಿ ನಡೆಸುವುದಿಲ್ಲ ಎಂದು ಸುಪ್ರೀಂಕೋರ್ಟ್‍ಗೆ ತಿಳಿಸಿ ರುವುದು ಖಂಡನೀಯ ಎಂದರು.

ಪ್ರಾಣಿ, ಪಕ್ಷಿ, ಗಿಡ ಮರಗಳ ಗಣತಿ ಮಾಡುವ ಕೇಂದ್ರ ಸರ್ಕಾರ ಮತ್ತು ಆರ್‍ಎಸ್ ಹಿಂದುಳಿದ ಜಾತಿಗಳ ಜನಗಣತಿ ಮಾಡದೆ ಹಿಂದುಳಿದ ವರ್ಗದವರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಎಸ್.ಆರ್.ರವಿಕುಮಾರ್, ಎಂ.ಲೋಕೇಶ್ ಕುಮಾರ್, ಆರ್.ಕೆ.ರವಿ, ಮಹೇಂದ್ರ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ಆರ್.ನಾಗೇಶ್, ಜಿಲ್ಲಾ ಆರ್ಯ ಈಡಿಗ ಸಂಘದ ಕಾರ್ಯದರ್ಶಿ ರಾಜಶೇಖರ ಕದಂಬ, ಪಾಲಿಕೆ ಮಾಜಿ ಸದಸ್ಯ ಸುನಿಲ್, ಹಿಂದು ಳಿದ ವರ್ಗಗಳ ಒಕ್ಕೂಟದ ಉಪಾಧ್ಯಕ್ಷ ಪುಟ್ಟಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »