ಮೈಸೂರು, ಸೆ. 28- ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಬರುವ ಶ್ರೀರಾಂಪುರ ಗ್ರಾಮ ಪಂಚಾಯಿತಿಯ ಮಹದೇವಪುರ ಗ್ರಾಮದಲ್ಲಿ ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಸ್ಸಿ ಘಟಕದ ಅಧ್ಯಕ್ಷ ಪಿ.ಲಕ್ಷ್ಮಣ್ ಪ್ರಭು ನೇತೃತ್ವದಲ್ಲಿ ಮಹಾದೇವಪುರ ವ್ಯಾಪ್ತಿಯ 8 ವಾರ್ಡ್‍ಗಳ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು.
ಸಭೆಯ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಕೆ.ಮರಿಗೌಡ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಉಸ್ತು ವಾರಿಗಳಾದ ಗುರುಪಾದಸ್ವಾಮಿ ಆಗಮಿಸಿದ್ದರೆ, ಸಭೆಯ ಅಧ್ಯಕ್ಷತೆಯನ್ನು ಚಾಮುಂಡೇ ಶ್ವರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜೆ. ಸತೀಶ್‍ಕುಮಾರ್ ವಹಿಸಿದ್ದರು.
ಮುಂಬರುವ ಪಟ್ಟಣ ಪಂಚಾಯತಿ ಚುನಾವಣೆ ಹಾಗೂ ಕೆಪಿಸಿಸಿ ಮಹತ್ವದ ಪ್ರಜಾಪ್ರತಿನಿಧಿ ಸಮಿತಿ ರಚನೆ ಸಲುವಾಗಿ ಪ್ರತಿ ಬೂತ್‍ಗೆ ಒಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಬೂತ್ ಏಜೆಂಟರಾಗಿ, ಒಬ್ಬರು ಬೂತ್ ಅಧ್ಯಕ್ಷರನ್ನಾಗಿ ನೇಮಕ ಮಾಡುವುದರ ಮೂಲಕ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಪಕ್ಷದ ಬಲವರ್ಧನೆಗೆ ನಿರ್ಧರಿಸಲಾಯಿತು. ಪಕ್ಷದ ಕಾರ್ಯಕ್ರಮಗಳು ಮತ್ತು ಚುನಾವಣೆ ದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಆದ್ದರಿಂದ ಈ ಸಮಿತಿಯನ್ನು ಆದಷ್ಟು ಶೀಘ್ರದಲ್ಲಿ ರಚನೆ ಮಾಡಬೇಕೆಂದು ಮುಖಂಡರಲ್ಲಿ ಕೆ.ಮರಿಗೌಡ ಮನವಿ ಮಾಡಿದರು.
ಸಭೆಯಲ್ಲಿ ಇಲವಾಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಸ್ತುವಾರಿಗಳಾದ ಜೇಸು ದಾಸ್, ಇಲವಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಗುರುಸ್ವಾಮಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬುಲೆಟ್ ಮಹದೇವು, ಶ್ರೀರಾಂಪುರ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡರುಗಳಾದ ಮಲ್ಲೇಶ್, ನಾಗಲಿಂಗಣ್ಣ, ರಮೇಶ್, ತಾಜುದ್ದೀನ್, ಸುಜಿತ್‍ಕುಮಾರ್, ಸಣ್ಣಪ್ಪ ಶೆಟ್ಟರು, ಜಯಲಕ್ಷ್ಮಿ, ಸುಮಾ, ಸಿದ್ದರಾಜು, ವೆಂಕಟಸ್ವಾಮಿ, ರವಿ, ಮಲ್ಲೇಶ್, ಪ್ರಶಾಂತ್, ಸುನಿಲ್ ಕುಮಾರ್, ಸಿದ್ದರಾಜು, ಶಂಕರ್, ಜಾರ್ಜ್, ಜಯಶೀಲ, ಕೋಕಿಲ, ಗೀತಾ, ಚಂದ್ರಬಾನ ಸಿಂಗ್, ಸೌಮ್ಯ, ನಳಿನಿ, ಗಾಯತ್ರಿ, ನಾಗರತ್ನ, ಮಂಜುಳಾ, ಸುರೇಶ್‍ಕುಮಾರ್, ರಾಣಿ, ಗಾಯತ್ರಿ ಬಾಯಿ, ಮಹೇಶ್, ನಾಗರಾಜು, ಪ್ರಭಾಕರ್ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.