ಶ್ವಾನಗಳಿಗೆ ತಪ್ಪದೇ ರೇಬಿಸ್ ಲಸಿಕೆ ಕೊಡಿಸಿ
ಮೈಸೂರು

ಶ್ವಾನಗಳಿಗೆ ತಪ್ಪದೇ ರೇಬಿಸ್ ಲಸಿಕೆ ಕೊಡಿಸಿ

September 29, 2021

ಮೈಸೂರು, ಸೆ.28(ಆರ್‍ಕೆಬಿ)- ವಿಶ್ವ ರೇಬಿಸ್ ದಿನದ ಅಂಗವಾಗಿ ಪಶು ಸಂಗೋ ಪನಾ ಇಲಾಖೆಯು ಜಿಲ್ಲೆಯ ಎಲ್ಲಾ ಸರ್ಕಾರಿ ಪಶು ವೈದ್ಯ ಆಸ್ಪತ್ರೆಗಳಲ್ಲಿ ಹಮ್ಮಿಕೊಂಡಿ ರುವ ಶ್ವಾನಗಳಿಗೆ ರೇಬಿಸ್ ವಿರುದ್ಧದ ಉಚಿತ ಲಸಿಕೆ ನೀಡುವ ಮೂರು ದಿನಗಳ ಶಿಬಿರಕ್ಕೆ ಮಂಗಳವಾರ ಚಾಲನೆ ದೊರೆಯಿತು.
ಲೂಯಿಸ್ ಪಾಶ್ಚರ್, ರೇಬಿಸ್ ವಿರುದ್ಧ ಲಸಿಕೆಯನ್ನು ಯಶಸ್ವಿಯಾಗಿ ಕಂಡು ಹಿಡಿದ ಸೆ.28ರಂದು ವಿಶ್ವ ರೇಬಿಸ್ ದಿನ ಆಚರಿಸ ಲಾಗುತ್ತಿದೆ. ಈ ದಿನದ ಅಂಗವಾಗಿ ಮೈಸೂ ರಿನ 11 ಪಶು ವೈದ್ಯ ಆಸ್ಪತ್ರೆಗಳು ಸೇರಿದಂತೆ ಮೈಸೂರು ಜಿಲ್ಲೆಯ ಒಟ್ಟು 181 ಪಶು ವೈದ್ಯ ಕೀಯ ಆಸ್ಪತ್ರೆಗಳು ಹಾಗೂ ಏಳು ಸಂಚಾರಿ ಪಶು ಔಷಧಾಲಯಗಳಿವೆ. ಶ್ವಾನಗಳು ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕೆ ನೀಡ ಲಾಗುತ್ತಿದೆ. 2020ರ ಜನಗಣತಿ ಪ್ರಕಾರ ಮೈಸೂರು ನಗರದಲ್ಲಿ 6,500 ಸೇರಿದಂತೆ ಜಿಲ್ಲೆಯಲ್ಲಿ 18,000 ಶ್ವಾನಗಳಿವೆ. ಪ್ರತಿ 5 ವರ್ಷಗಳಿಗೊಮ್ಮೆ ಶ್ವಾನಗಳ ಗಣತಿ ನಡೆಯು ತ್ತದೆ. ಸಾಕುನಾಯಿಗಳು, ಬೀದಿನಾಯಿಗಳ ಗಣತಿ ನಡೆಸಲಾಗುತ್ತದೆ. 3 ದಿನಗಳ ರೇಬಿಸ್ ವಿರೋಧಿ ಲಸಿಕೆ ಅಭಿಯಾನದಲ್ಲಿ ಈ ಎಲ್ಲಾ ಶ್ವಾನಗಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಮೈಸೂರು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಬಿ.ಎನ್.ಷಡಕ್ಷರ ಮೂರ್ತಿ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಬೀದಿನಾಯಿಗಳಿಗೆ ರೇಬಿಸ್ ವಿರೋಧಿ ಲಸಿಕೆ ಮತ್ತು ಜನನ ನಿಯಂತ್ರಣ ಕ್ರಮ ಗಳನ್ನು ಮೈಸೂರು ಪಾಲಿಕೆ ಸಹಯೋಗ ದಲ್ಲಿ ಪೀಪಲ್ ಫಾರ್ ಅನಿಮಲ್ (ಪಿಎಫ್‍ಎ) ಕ್ರಮ ಕೈಗೊಳ್ಳುತ್ತದೆ. ಸಾರ್ವಜನಿಕರು ತಮ್ಮ ಶ್ವಾನಗಳನ್ನು ಕರೆದೊಯ್ದು ಲಸಿಕೆ ಕೊಡಿಸು ವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Translate »