ನಾಳೆ `ವಚನ ದೀವಿ’ಗೆ ಕಾರ್ಯಕ್ರಮ
ಮೈಸೂರು

ನಾಳೆ `ವಚನ ದೀವಿ’ಗೆ ಕಾರ್ಯಕ್ರಮ

March 5, 2021

ಮೈಸೂರು, ಮಾ.4(ಎಸ್‍ಪಿಎನ್)- ರಂಗಾಯಣ ಆವರಣದ ಶ್ರೀರಂಗ ಮಂದಿರ ದಲ್ಲಿ `ವಚನ ದೀವಿಗೆ’ ಶೀರ್ಷಿಕೆ ಯಡಿ ನಡೆಯುವ `ವಚನ ಗಾಯನ’ ಕಾರ್ಯ ಕ್ರಮವನ್ನು ಮಾ.7ರಂದು ಸಂಜೆ 6.30ಕ್ಕೆ ಹಮ್ಮಿಕೊಳ್ಳ ಲಾಗಿದೆ ಎಂದು ರಂಗಾ ಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

2021ನೇ ಸಾಲಿನ ಜನವರಿ ತಿಂಗಳಿನಲ್ಲಿ ಬೇಂದ್ರೆ ಕಾವ್ಯ ಗಾಯನ ಹಾಗೂ ಫೆಬ್ರವರಿ ತಿಂಗಳಲ್ಲಿ ತತ್ವಪದ ಗಾಯನ ಹಮ್ಮಿಕೊಳ್ಳಲಾಗಿದ್ದು, ಇದೀಗ ವಚನ ದೀವಿಗೆ ಶೀರ್ಷಿಕೆ ಯಡಿ ಗಾಯಕಿಯರಾದ ನಿಸರ್ಗ ಮತ್ತು ವಿಸ್ಮಯ ಅವಳಿ ಸಹೋದರಿಯರು ವಚನ ಗಾಯನ ನಡೆಸಿ ಕೊಡಲಿದ್ದಾರೆ. ಈ ಸಹೋದರಿಯರು, ಶೈಕ್ಷಣಿಕವಾಗಿ ವಿಜ್ಞಾನ ಸ್ನಾತಕೋತ್ತರ ಪದವೀಧರರಾಗಿದ್ದು, ಈಗಾಗಲೇ ರಾಜ್ಯಾದ್ಯಂತ ರಂಗಗೀತೆ, ಭಾವಗೀತೆ, ವಚನ ಗಾಯನ ಗಳ ಮೂಲಕ ಮನೆ ಮಾತಾಗಿದ್ದಾರೆ. ಇವರು ರಾಗ ರಂಗಾಯಣ ಕಾರ್ಯಕ್ರಮದಲ್ಲಿ ವಚನ ಗಾಯನ ನಡೆಸಿಕೊಡಲಿದ್ದು, ತಿಂಗಳ ಅತಿಥಿಯಾಗಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮ.ಗು.ಸದಾನಂದಯ್ಯ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Translate »