ನಾಳೆ ನೀರು ಸರಬರಾಜು ವ್ಯತ್ಯಯ
ಮೈಸೂರು

ನಾಳೆ ನೀರು ಸರಬರಾಜು ವ್ಯತ್ಯಯ

September 19, 2018

ಮೈಸೂರು: ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಬೆಳಗೊಳ ಮತ್ತು ಹೊಂಗಳ್ಳಿ ಮೂಲಸ್ಥಾವರಕ್ಕೆ (2ನೇ ಹಂತ ಹಾಗೂ 3ನೇ ಹಂತಗಳಲ್ಲಿ) ಸೆಪ್ಟೆಂಬರ್ 19 ರಂದು ಕೆಪಿಟಿಸಿಎಲ್, 66/11 ಕೆ.ವಿ. ಸಬ್ ಸ್ಟೇಷನ್, ಬೆಳಗೊಳ ಎಂಯುಎಸ್‍ಎಸ್ ವತಿಯಿಂದ ತ್ರೈಮಾಸಿಕ ಕಾಮಗಾರಿ ಕೈಗೊಂಡಿದ್ದು, ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ. ಹಾಗೆಯೇ ಹೊಂಗಳ್ಳಿ 3ನೇ ಹಂತದ ಬೂಸ್ಟರ್ ಯಂತ್ರಾಗಾರದಲ್ಲಿ ಪಂಪ್ ಬದಲಾವಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರಿಂದ ಸೆಪ್ಟೆಂಬರ್ 20 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಾರ್ಡ್ ನಂ. 19 ರಿಂದ 45 (ಹಳೆಯ ವಾರ್ಡ್ ಸಂಖ್ಯೆಗಳು) ವರೆಗೆ ಇದಕ್ಕೆ ಸಂಬಂಧಪಟ್ಟ ಡಿ.ಎಂ.ಎ. ಪ್ರದೇಶಗಳು ಹಾಗೂ ಹೊರವಲಯಗಳಾದ ಆರ್.ಎಂ.ಪಿ., ಬಿ.ಇ.ಎಂ.ಎಲ್., ವಿಜಯನಗರ 3ನೇ ಹಂತ, ಕೆ.ಹೆಚ್.ಬಿ. ಕಾಲೋನಿ, ಹೂಟಗಳ್ಳಿ, ಮೇಟಗಳ್ಳಿ, ಕುಂಬಾರಕೊಪ್ಪಲು, ಲೋಕನಾಯಕನಗರ, ಬನ್ನಿಮಂಟಪ, ಯಾದವಗಿರಿ, ದೇವರಾಜ ಮೊಹಲ್ಲಾ ಭಾಗಶಃ ಬೃಂದಾವನ ಬಡಾವಣೆ, ವಿ.ವಿ.ಮೊಹಲ್ಲಾ, ಒಂಟಿಕೊಪ್ಪಲು, ಪಡುವಾರಹಳ್ಳಿ, ವಿನಾಯಕನಗರ, ಮಂಜುನಾಥಪುರ, ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಹೂಟಗಳ್ಳಿ, ವಿಜಯನಗರ 1 ಮತ್ತು 2ನೇ ಹಂತ, ಗೋಕುಲಂ 1, 2 ಮತ್ತು 3ನೇ ಹಂತ, ಯಾದವಗಿರಿ, ಬನ್ನಿಮಂಟಪ ಎ.ಬಿ.ಸಿ.ಲೇಔಟ್, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀಶ್ವರನಗರ, ತಿಲಕ್ ನಗರ, ಬಡೇಮಕಾನ್, ಹಲೀಂನಗರ, ಮಂಡಿಮೊಹಲ್ಲಾ ಭಾಗಶಃ ದೇವರಾಜ ಮೊಹಲ್ಲಾ ಭಾಗಶಃ ಎನ್.ಆರ್. ಮೊಹಲ್ಲಾ ಭಾಗಶ: ಪ್ರದೇಶಗಳು, ನಜûರ್‍ಬಾದ್ ಮೊಹಲ್ಲಾ, ವಿದ್ಯಾರಣ್ಯಪುರಂ, ಕೃಷ್ಣಮೂರ್ತಿಪುರಂ, ವಾರ್ಡ್ ನಂ. 10 ಹಾಗೂ ಇತ್ಯಾದಿ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ನೀರು ಬಂದ ವೇಳೆಯಲ್ಲಿ ನೀರನ್ನು ಸಂಗ್ರಹಿಸಿಕೊಂಡು ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಮಹಾನಗರ ಪಾಲಿಕೆಯ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »