ಕೆಲ ರೈಲುಗಳ ಸಂಚಾರ ಸಮಯ ಪರಿಷ್ಕರಣೆ
ಮೈಸೂರು

ಕೆಲ ರೈಲುಗಳ ಸಂಚಾರ ಸಮಯ ಪರಿಷ್ಕರಣೆ

December 23, 2020

ಮೈಸೂರು,ಡಿ.22(ಎಸ್‍ಬಿಡಿ)-ಮೈಸೂರು ಸಂಪರ್ಕಿಸುವ ಕೆಲ ರೈಲುಗಳ ಸಂಚಾರ ಸಮಯವನ್ನು ಪರಿಷ್ಕರಿಸಲಾಗಿದೆ. ಹುಬ್ಬಳ್ಳಿ-ಮೈಸೂರು ವಿಶೇಷ ಎಕ್ಸ್‍ಪ್ರೆಸ್(06581) ರೈಲು ಸಂಜೆ 6.20ಕ್ಕೆ ಹುಬ್ಬಳ್ಳಿ ನಿಲ್ದಾಣ ದಿಂದ ಹೊರಟು ಮರುದಿನ ಬೆಳಗ್ಗೆ 8.55ಕ್ಕೆ ಮೈಸೂರಿಗೆ ಆಗಮಿಸಲಿದೆ. ಮೈಸೂರು-ಹುಬ್ಬಳ್ಳಿ ಸ್ಪೆಷಲ್ ಎಕ್ಸ್‍ಪ್ರೆಸ್ (06582) ರೈಲು ಸಂಜೆ 6.35ಕ್ಕೆ ಮೈಸೂ ರಿನಿಂದ ಹೊರಟು ಮರುದಿನ ಬೆಳಗ್ಗೆ 10.25ಕ್ಕೆ ಧಾರವಾಡ ತಲುಪಲಿದೆ. ಈ ಪರಿಷ್ಕøತ ಸಮಯ ನಾಳೆ(ಡಿ.23) ಯಿಂದ ಜಾರಿಯಾಗಲಿದೆ.

ಮೈಸೂರು-ಅಜ್ಮೀರ್ ಸಾಪ್ತಾಹಿಕ ಎಕ್ಸ್‍ಪ್ರೆಸ್ ವಿಶೇಷ ರೈಲು(06210) ಪ್ರತಿ ಮಂಗಳ ವಾರ ಸಂಜೆ 7 ಗಂಟೆಗೆ ಮೈಸೂರಿನಿಂದ ಹೊರಟು ಗುರುವಾರ ಮಧ್ಯಾಹ್ನ 3.10ಕ್ಕೆ ಅಜ್ಮೀರ್ ತಲುಪಲಿದ್ದು, ಈ ಪರಿಷ್ಕøತ ಸಮಯ ಇಂದಿನಿಂದಲೇ(ಡಿ.22) ಜಾರಿಯಾಗಿದೆ. ಭಾನುವಾರ ಬೆಳಗ್ಗೆ 6 ಗಂಟೆಗೆ ಅಜ್ಮೀರ್ ನಿಲ್ದಾಣದಿಂದ ಹೊರಡುವ ಅಜ್ಮೀರ್- ಮೈಸೂರು ಎಕ್ಸ್‍ಪ್ರೆಸ್ ವಿಶೇಷ ರೈಲು(06209) ಮಂಗಳವಾರ ಮುಂಜಾನೆ 2.15 ಗಂಟೆಗೆ ಮೈಸೂರು ತಲುಪಲಿದೆ. ಈ ಪರಿಷ್ಕøತ ಸಮಯ ಡಿ.20ರಿಂದಲೇ ಅಸ್ತಿತ್ವದಲ್ಲಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಪ್ರಕಟಣೆ ತಿಳಿಸಿದೆ.

 

Translate »