ವಿದ್ಯಾರ್ಥಿಗಳು ಗಣಿತದ ಒಡನಾಟದಲ್ಲಿ ಇರಬೇಕು
ಮೈಸೂರು

ವಿದ್ಯಾರ್ಥಿಗಳು ಗಣಿತದ ಒಡನಾಟದಲ್ಲಿ ಇರಬೇಕು

December 23, 2020

ಮೈಸೂರು, ಡಿ.22- ವಿಶ್ವ ಉದಯವಾದಂದಿ ನಿಂದಲೂ ಅದರೊಟ್ಟಿಗೆ ಗಣಿತವೂ ಸಾಗಿ ಬಂದಿದೆ. ಪ್ರತಿಯೊಂದಕ್ಕೂ ಗಣಿತದ ಲೆಕ್ಕಾಚಾರ ಬೇಕೇ ಬೇಕು. ಆದ್ದರಿಂದ ವಿದ್ಯಾರ್ಥಿಗಳು ಗಣಿತದ ಬಗ್ಗೆ ಹೆಚ್ಚು ಒಲ ವಿಟ್ಟುಕೊಂಡು ಕಲಿತು ಅದರ ಒಡನಾಟವಿಟ್ಟುಕೊಳ್ಳ ಬೇಕೆಂದು ಸಾಹಿತಿ ಬನ್ನೂರು ಕೆ ರಾಜು ತಿಳಿಸಿದರು.

ನಗರದ ಒಂಟಿಕೊಪ್ಪಲಿನ (ಯಾದವಗಿರಿ) ಸರ್ಕಾರಿ ಪ್ರೌಢಶಾಲೆ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಜಗದ್ವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿ ಅಂಗವಾಗಿ ಆಯೋಜಿ ಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ ವನ್ನು ರಾಮಾನುಜನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡು ವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕನಸು ಮನಸ್ಸಿನಲ್ಲೆಲ್ಲ ಅಂಕೆ ಸಂಖ್ಯೆಗಳನ್ನು ತುಂಬಿ ಕೊಂಡು ಗಣಿತವನ್ನೇ ಉಸಿರಾಗಿಸಿಕೊಂಡು ಗಣಿತ ಲೋಕದಲ್ಲಿ ಜಗತ್ತು ಕಂಡರಿಯದಂತಹ ಮಹದದ್ಭುತ ಸಾಧನೆ ಮಾಡಿ ಗಣಿತದಲ್ಲಿ ಅಗಣಿತವನ್ನು ಕಂಡಿದ್ದ ಗಣಿತ ದಾರ್ಶನಿಕ ಶ್ರೀನಿವಾಸ ರಾಮಾನುಜನ್ ಬಗ್ಗೆ ಅರಿತವರಾರೂ ಗಣಿತವನ್ನು ಕಬ್ಬಿಣದ ಕಡಲೆ ಎನ್ನ ಲಾರರು. ಬದಲಿಗೆ ಗಣಿತವೆಂಬುದು ಕಲ್ಲುಸಕ್ಕರೆ ಎಂದು ಬಾಯಿ ಚಪ್ಪರಿಸುತ್ತಾರೆಂದರು.

ಕೇವಲ 32 ವರ್ಷಗಳು ಮಾತ್ರ ಬದುಕಿದ್ದ ಶ್ರೀನಿ ವಾಸ ರಾಮಾನುಜನ್ ಎಂದೆಂದಿಗೂ ಜಗತ್ತಿನ ಗಣಿತ ಲೋಕದಲ್ಲಿ ಯಾರೂ ಮುರಿಯದಂತಹ ದಾಖಲೆ ಬರೆದು ಭಾರತದ ಕೀರ್ತಿ ಪತಾಕೆಯನ್ನು ವಿಶ್ವದ ಉದ್ದ ಗಲಕ್ಕೂ ಹಾರಿಸಿದ್ದಾರೆ. ಬಹುಮುಖ್ಯವಾಗಿ ಪೈ ಎಂಬ ಸಂಖ್ಯೆಯ ನಿರ್ದಿಷ್ಟ ಮೌಲ್ಯವನ್ನು ನಿರ್ಧರಿಸಲು ರಾಮಾ ನುಜನ್ ಬರೆದಿದ್ದ ವಿಶೇಷ ಸೂತ್ರ ವಿಶ್ವದ ಮಹತ್ವದ ಮೈಲುಗಲ್ಲುಗಳಲ್ಲಿ ಒಂದಾಗಿದೆ. 32ನೆಯ ಚಿಕ್ಕ ವಯಸ್ಸಿ ನಲ್ಲಿಯೇ ಅವರು ಸುಮಾರು 3900 ಗಣಿತ ಸೂತ್ರಗಳನ್ನು ರಚಿಸಿದ್ದರು. ಅವರು ಬರೆದು ಪ್ರಕಟಿಸಿದ್ದ ನೂರಾರು ಸಂಶೋಧನಾ ಲೇಖನಗಳು ಮಾತ್ರವಲ್ಲದೆ ನೋಟ್ ಪುಸ್ತಕಗಳಲ್ಲಿ ಅವರು ಬರೆದು ಹೋಗಿದ್ದ ಲೆಕ್ಕವಿಲ್ಲದಷ್ಟು ಗಣಿತ ಸೂತ್ರಗಳು ಹಾಗೂ ಪ್ರಮೇಯಗಳನ್ನು ಕುರಿತು ಇಂದಿಗೂ ಅಧ್ಯಯನಗಳು ನಡೆಯುತ್ತಿವೆ ಎಂದರು.

ಇದೇ ಸಂದರ್ಭದಲ್ಲಿ ಗಣಿತದಲ್ಲಿ ಹೆಚ್ಚು ಅಂಕ ಗಳಿಸಿ ರುವ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಾದ ಇಮ್ರಾನ್, ಹರ್ಷ, ಪ್ರೀತಿ ಅಗರ್ವಾಲ್, ದರ್ಶನ್, ವರ್ಷ, ಐಶ್ವರ್ಯ, ಅಜಯ್, ಸಿಂಧು ಅವರನ್ನು ಗಣಿ ತಜ್ಞ ಶ್ರೀನಿವಾಸ ರಾಮಾನುಜನ್ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಮಂಚೇಗೌಡನಕೊಪ್ಪಲಿನ ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕಿ ಕೆ.ಎಸ್.ಕಲ್ಪನಾ ಗೌರ ವಿಸಿದರು. ಇದೇ ವೇಳೆ ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಹೇಶ್ವರಿ ರಾಮಾ ನುಜನ್ ಬಗ್ಗೆ ಭಾಷಣ ÀiÁಡಿ ಮೆಚ್ಚುಗೆ ಗಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಪುಷ್ಪಾ ಅವರು, ಗಣಿತವಿಲ್ಲದೆ ಬದುಕಿಲ್ಲ. ಗಣಿತವನ್ನು ಕಲಿತ ವರಿಗೆ ಮಿಕ್ಕಿದ್ದೆಲ್ಲಾ ನೀರು ಕುಡಿದಂತೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಗಣಿತದ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕಲಿಯಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷ ಎನ್.ಕೆ.ಕಾವೇರಿ ಯಮ್ಮ, ಶಿಕ್ಷಕರಾದ ಡಾ.ವಿಜಿ, ಸೋಮಚಾರ್, ರೇಣುಕಾ, ಹಾಗೂ ಕನ್ನಡಪರ ಹೋರಾಟಗಾರ ಆರ್.ಎ.ರಾಧಾಕೃಷ್ಣ ಇನ್ನಿತರರು ಉಪಸ್ಥಿತರಿದ್ದರ

Translate »