ಮೈಸೂರಲ್ಲಿ ನೋಂದಣಿ, ಮುದ್ರಾಂಕ ಇಲಾಖೆ ಸಿಬ್ಬಂದಿ `ವರ್ಗಾವರ್ಗಿ’: ಸಾರ್ವಜನಿಕರಲ್ಲಿ ತೀವ್ರ ಕುತೂಹಲ
ಮೈಸೂರು

ಮೈಸೂರಲ್ಲಿ ನೋಂದಣಿ, ಮುದ್ರಾಂಕ ಇಲಾಖೆ ಸಿಬ್ಬಂದಿ `ವರ್ಗಾವರ್ಗಿ’: ಸಾರ್ವಜನಿಕರಲ್ಲಿ ತೀವ್ರ ಕುತೂಹಲ

July 15, 2020

ಮೈಸೂರು, ಜು.14(ಎಸ್‍ಬಿಡಿ)- ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ, ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದ್ದು, ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಇಲ್ಲಿನ ವಿಭಾಗಗಳಿಗೇ ನಿಯೋಜಿಸಿರುವುದು ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿದೆ.

ವಿವಿಧ ಜಿಲ್ಲೆಗಳ ಜಿಲ್ಲಾ ನೋಂದಣಾಧಿಕಾರಿ ಗಳು, ಹಿರಿಯ ಉಪ ನೋಂದಣಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರನ್ನು ವರ್ಗಾ ವಣೆ ಮಾಡಿರುವ ಸರ್ಕಾರ ಈ ಸಂಬಂಧ ಜು.10 ರಂದು ಆದೇಶ ಹೊರಡಿಸಿದೆ. ಆದರೆ ಮೈಸೂ ರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಮಾತ್ರ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ವಿಭಾಗಗಳ ನಡುವೆಯೇ ವರ್ಗಾವಣೆಗೊಂಡಿದ್ದಾರೆ.

ಹಿರಿಯ ಉಪ ನೋಂದಣಾಧಿಕಾರಿಗಳಾದ ಮೈಸೂರು ಪಶ್ಚಿಮ ಕಚೇರಿಯಲ್ಲಿದ್ದ ವಿವೇಕ್ ಹಾಗೂ ಉತ್ತರ ವಿಭಾಗದಲ್ಲಿದ್ದ ಕಿರಣ್ ಪರಸ್ಪರ ವರ್ಗಾ ವರ್ಗಿಯಾಗಿದ್ದಾರೆ. ಹಾಗೆಯೇ ಪೂರ್ವ ವಿಭಾಗ ದಲ್ಲಿದ್ದ ಬಿ.ಜಿ.ಮಂಜು ಹಾಗೂ ದಕ್ಷಿಣ ವಿಭಾಗ ದಲ್ಲಿದ್ದ ಸಂತೋಷ್‍ಕುಮಾರ್ ಕೂಡ ಪರಸ್ಪರ ಸ್ಥಾನಗಳಿಗೆ ನಿಯೋಜನೆಗೊಂಡಿದ್ದಾರೆ. ಹಾಗೆಯೇ ನಂಜನಗೂಡು ಉಪ ನೋಂದಣಿ ಕಚೇರಿಯಲ್ಲಿದ್ದ ಪಿ.ನಂದಿನಿ ಅವರನ್ನು ಮೈಸೂರು ದಕ್ಷಿಣ ಉಪ ನೋಂದಣಿ ಕಚೇರಿಯಲ್ಲಿ ಬಸವಣ್ಣ ಅವರ ವರ್ಗಾ ವಣೆಯಿಂದ ತೆರವಾದ ಸ್ಥಾನಕ್ಕೆ ನಿಯೋಜನೆ ಮಾಡ ಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಉಪ ನೋಂದಣಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪ ನೋಂದಣಾಧಿಕಾರಿ ರುಕ್ಮಿಣಿ ಅವರು ಮಾತ್ರ ಮೂಡಿಗೆರೆಗೆ ವರ್ಗಾ ವಣೆಯಾಗಿದ್ದಾರೆ.

ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರ ವರ್ಗಾವಣೆಯಲ್ಲೂ ಇದೇ ಆಗಿದೆ. ಮುಡಾ ಸಂಕೀರ್ಣದಲ್ಲಿರುವ ಅಧಿಕ ಜಿಲ್ಲಾ ನೋಂದಣಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾ ಯಕರಾಗಿದ್ದ ಕುಮಾರಸ್ವಾಮಿ ಹುಣಸೂರು ಉಪ ನೋಂದಣಿ ಕಚೇರಿಗೆ, ದ್ವಿತೀಯ ದರ್ಜೆ ಸಹಾ ಯಕರಾದ ಮೈಸೂರು ದಕ್ಷಿಣ ಉಪ ನೋಂದಣಿ ಕಚೇರಿಯಲ್ಲಿದ್ದ ಲತಾ ಪಶ್ಚಿಮ ಕಚೇರಿಗೆ, ಪೂರ್ವ ವಿಭಾಗದ ಕಚೇರಿಯಲ್ಲಿದ್ದ ನಾಗೇಂದ್ರ ಪ್ರಸಾದ್ ದಕ್ಷಿಣ ವಿಭಾಗದ ಕಚೇರಿಗೆ, ಪಶ್ಚಿಮ ವಿಭಾಗದ ಕಚೇರಿಯಲ್ಲಿದ್ದ ಗುರುರಾಜ್ ಪೂರ್ವ ವಿಭಾಗದ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ. ಜಿಲ್ಲಾ ನೋಂದಣಿ ಕಚೇರಿಯಲ್ಲಿದ್ದ ಭರತ್ ಮಾತ್ರ ಬಾಣಸವಾಡಿಗೆ ನಿಯೋಜನೆಗೊಂಡಿದ್ದಾರೆ.

Translate »