ಎಂಎಂಸಿಆರ್‍ಐನ ಐದು ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ
ಮೈಸೂರು

ಎಂಎಂಸಿಆರ್‍ಐನ ಐದು ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ

January 10, 2022

ಮೈಸೂರು, ಜ.9(ಎಂಕೆ)- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಬರುವ 5 ಆಸ್ಪತ್ರೆಗಳಲ್ಲಿಯೂ ಸೋಂಕಿತರ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಲಾಗಿದೆ.
ದೊಡ್ಡಾಸ್ಪತ್ರೆಯೆಂದೇ ಕರೆಯಲ್ಪಡುವ ಕೆ.ಆರ್.ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ರಿಗೆ ಪ್ರತ್ಯೇಕವಾಗಿ 612 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಅವುಗಳಲ್ಲಿ 74 ಸಾಮಾನ್ಯ, 501 ಆಕ್ಸಿಜನ್, 6 ಐಸಿಯು ಹಾಗೂ 31 ವೆಂಟಿಲೇಟರ್ ಮತ್ತು ಐಸಿಯು ಬೆಡ್‍ಗಳನ್ನು ಮೀಸಲಿಡಲಾಗಿದೆ.
ಹಾಗೆಯೇ ಕೆಆರ್‍ಎಸ್ ರಸ್ತೆಯಲ್ಲಿ ಪಿಕೆಟಿಬಿ ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್, 16 ವೆಂಟಿಲೇಟರ್, 17 ಐಸಿಯು ಬೆಡ್ ಸೇರಿ ಒಟ್ಟು 133 ಬೆಡ್‍ಗಳಿದ್ದರೆ, ಟ್ರಾಮ ಕೇರ್ ಸೆಂಟರ್‍ನಲ್ಲಿ 12 ವೆಂಟಿಲೇಟರ್, 18 ಐಸಿಯು ಮತ್ತು 120 ಆಕ್ಸಿಜನ್ ಬೆಡ್ ಸೇರಿ ಒಟ್ಟು 150 ಬೆಡ್‍ಗಳಿವೆ. ಚೆಲುವಾಂಬ ಆಸ್ಪತ್ರೆಯಲ್ಲಿ ಸೋಂಕಿತ ಮಕ್ಕಳ ಚಿಕಿತ್ಸೆಗಾಗಿ ಮಕ್ಕಳ ವಾರ್ಡ್‍ನಲ್ಲಿ ಪ್ರತ್ಯೇಕ 111 ಬೆಡ್‍ಗಳನ್ನು ಕಾಯ್ದಿರಿ ಸಿದ್ದು, ಸೋಂಕಿತ ಗರ್ಭಿಣಿಯರ ಚಿಕಿತ್ಸೆಗೆ 27 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ.

ಔಷಧಿಗಳ ಶೇಖರಣೆ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಔಷಧಿ-ಮಾತ್ರೆಗಳನ್ನು ಅಗತ್ಯಕ್ಕನುಗುಣವಾಗಿ ಶೇಖರಣೆ ಮಾಡಿಕೊಳ್ಳಲಾಗಿದೆ. ರೆಮ್ಡಿಸಿವಿ ಯರ್ ಸೇರಿದಂತೆ ಇನ್ನಿತರೆ ಔಷಧಿಗಳನ್ನು ಶೇಖರಿಸಿಟ್ಟಿದ್ದು, ಔಷಧಿ-ಮಾತ್ರೆಗಳ ಪೂರೈಕೆ ದಾರೊಂದಿಗೂ ಸಂಪರ್ಕವಿಟ್ಟು ಕೊಳ್ಳಲಾಗಿದೆ ಎಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇ ಶಕ ಹೆಚ್.ಎನ್.ದಿನೇಶ್ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

9 ಮಂದಿಗೆ ಚಿಕಿತ್ಸೆ: ಸದ್ಯ ಕೆ.ಆರ್. ಆಸ್ಪತ್ರೆ ಯಲ್ಲಿ 9 ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾ ಗುವವರ ಸಂಖ್ಯೆ ಕಡಿಮೆ ಇದ್ದರೂ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ಗೈಡ್‍ಲೈನ್ ಅನ್ವಯ ಕೊರೊನಾ ಪಾಸಿಟಿವ್ ಇದ್ದರೂ, ಚೆನ್ನಾಗಿರುವವರು ಚಿಕಿತ್ಸೆ ಪಡೆದು ಹೋಂ ಐಸೋಲೇಷನ್ ಆಗಬೇಕು. ಕೊರೊನಾ ಸೋಂಕು ಲಕ್ಷಣಗಳ ಕಾಣಿಸಿಕೊಂಡು ಆರೋಗ್ಯ ದಲ್ಲಿ ಸ್ವಲ್ಪ ಏರುಪೇರಾದರೂ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು ಎಂದು ತಿಳಿಸಿದರು.

ಕೋವಿಡ್-19 ಪಾಸಿಟಿವ್ ಇಲ್ಲದಿ ದ್ದರೂ ಸೋಂಕಿನ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ಭೇಟಿ ನೀಡುವವರನ್ನು ದಾಖಲು ಮಾಡಿಕೊಳ್ಳ ಲಾಗುತ್ತಿದೆ. ಅಂತಹವರಿಗಾಗಿ ಐಸೋಲೇಷನ್ ವಾರ್ಡ್ ವ್ಯವಸ್ಥೆ ಇದ್ದು, ಕೊರೊನಾ ವರದಿ ಬಂದ ಬಳಿಕ ನೆಗೆಟಿವ್ ಇದ್ದರೆ ಸಾಮಾನ್ಯ ವಾರ್ಡ್ ಹಾಗೂ ಪಾಸಿಟಿವ್ ಇದ್ದರೆ ಕೋವಿಡ್-19 ವಾರ್ಡ್‍ಗೆ ದಾಖಲಿಸ ಲಾಗುವುದು ಎಂದು ತಿಳಿಸಿದರು.

6 ತಂಡ: ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿಯ ಎಲ್ಲಾ ಆಸ್ಪತ್ರೆಗಳಲ್ಲಿರುವ ನುರಿತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಕೋವಿಡ್ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ 6 ತಂಡಗಳನ್ನು ರಚನೆ ಮಾಡಿದ್ದು, ಪ್ರತಿ ಯೊಂದು ತಂಡದಲ್ಲಿ 40-50 ಮಂದಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಇರಲಿದ್ದಾರೆ. ಒಂದೊಂದು ತಂಡ ಒಂದೊಂದು ಕಡೆ ಕರ್ತವ್ಯ ನಿರ್ವಹಿಸಲಿದ್ದು, ಚಿಕಿತ್ಸೆಯಲ್ಲಿ ಯಾವುದೇ ತೊಂದರೆ ಉಂಟಾಗ ದಂತೆ ಮುನ್ನೆಚ್ಚರಿಕೆ ವಹಿಸಲಾ ಗುವುದು ಎಂದು ಹೇಳಿದರು.

Translate »