ಅವ್ಯವಸ್ಥೆಯ ಆಗರವಾಗಿದೆ ಇಎಸ್‍ಐ ಆಸ್ಪತ್ರೆ
ಮೈಸೂರು

ಅವ್ಯವಸ್ಥೆಯ ಆಗರವಾಗಿದೆ ಇಎಸ್‍ಐ ಆಸ್ಪತ್ರೆ

January 10, 2022

ಮೈಸೂರು, ಜ.9(ಎಸ್‍ಪಿಎನ್)-ರಾಜ್ಯದ ಮುಖ್ಯಮಂತ್ರಿಗಳೇ…, ಆರೋಗ್ಯ ಸಚಿವರೇ…., ಕಾರ್ಮಿಕ ಸಚಿವರೇ….., ಜಿಲ್ಲಾಧಿ ಕಾರಿಗಳೇ…., ಮೈಸೂರು ಇಎಸ್‍ಐ ಆಸ್ಪತ್ರೆ ದುಸ್ಥಿತಿ ಸರಿಪಡಿಸಿ… ಇದು ಮೈಸೂರಿನ ಇಎಸ್‍ಐ ಆಸ್ಪತ್ರೆಯ ರೋಗಿಗಳ ಗೋಳಾಟ.

ಮೈಸೂರು ಇಎಸ್‍ಐ ಆಸ್ಪತ್ರೆಯಲ್ಲಿ ಬಡ ಕಾರ್ಮಿಕರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ವೃದ್ಧ ತಂದೆ-ತಾಯಿಗಳಿಗೆ ಚಿಕಿತ್ಸೆ ಕೊಡಿಸಲು ದಿನಗಟ್ಟಲೇ ಕಾಯಬೇಕು. ಇಎಸ್‍ಐ ಆಸ್ಪತ್ರೆ ಗಿಂತ ಸರ್ಕಾರಿ ಆಸ್ಪತ್ರೆಯೇ ಎಷ್ಟೋ ಮೇಲು ಎಂಬ ಪರಿಸ್ಥಿತಿ ಇದೆ. ಬಡ ಕಾರ್ಮಿಕರ ತೆರಿಗೆ ಹಣದಿಂದ ನಡೆ ಯುತ್ತಿರುವ ಇಎಸ್‍ಐ ಆಸ್ಪತ್ರೆ, ಕೆಲವೇ ಕೆಲ ವೈದ್ಯರು ಮತ್ತು ಸಿಬ್ಬಂದಿಗಳ ಜೇಬು ತುಂಬಿಸುವ ಅಡ್ಡೆಯಾಗಿ ಬದಲಾಗಿದೆ ಎಂದು ಎಂದು ರೋಗಿಯೊಬ್ಬರು ಆರೋಪಿಸಿದ್ದಾರೆ.

ಸಾರ್ವಜನಿಕರ ಕೋಟ್ಯಾಂತರ ರೂ ತೆರಿಗೆ ಹಣದಲ್ಲಿ ಮೈಸೂರಿನ ಇಎಸ್‍ಐ ಆಸ್ಪತ್ರೆ ಕಟ್ಟಡ ಕಟ್ಟಿದ್ದಾರೆ. ಆದರೆ, ಇಲ್ಲಿಗೆ ಬರುವ ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ. ತೀರಾ ಸುಸ್ತಾದ ರೋಗಿಗಳಿಗೆ ವ್ಹೀಲ್ ಚೇರ್ ಇಲ್ಲ. ಬಡ ಕಾರ್ಮಿಕರ ಆರೋಗ್ಯದಲ್ಲಿ ತುಸು ಏರುಪೇರಾಗಿ ಇಲ್ಲಿಗೆ ಚಿಕಿತ್ಸೆ ಬರುವವರೊಂದಿಗೆ ಇಲ್ಲಿನ ಸಿಬ್ಬಂದಿ ಮತ್ತು ವೈದ್ಯರುಗಳು ಮಾನವೀಯತೆ ಇಲ್ಲದಂತೆ ವರ್ತಿಸುತ್ತಾರೆ.

ಪ್ರತಿ ತಿಂಗಳು ರಾಜ್ಯದ ಲಕ್ಷಾಂತರ ಕಾರ್ಮಿಕರ ಸಂಬಳದಲ್ಲಿ ಆರೋಗ್ಯ ವಿಮೆ ಹಣ ಕಟಾಯಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಕಾರ್ಮಿಕರಿಗೆ ಇಎಸ್‍ಐ ಆಸ್ಪತ್ರೆಯ ಸೇವೆ ದೊರೆಯುತ್ತಿಲ್ಲ. ಇಎಸ್‍ಐ ಆಸ್ಪತ್ರೆ ಸೇವೆಗಳು ಸಂಪೂರ್ಣ ಆನ್‍ಲೈನ್‍ನಲ್ಲಿ ಲಭ್ಯ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಇಂದಿಗೂ ಹತ್ತಾರು ದಾಖಲಾತಿ ಹಿಡಿದು ಕೊಂಡು ರೋಗಿಗಳು ಸುತ್ತಾಡೋದು ತಪ್ಪಿಲ್ಲ. ಚಿಕ್ಕ ಇಎಸ್‍ಐನಿಂದ ಚೀಟಿಗಳನ್ನು ಬರೆಸಿಕೊಂಡು ಬರುವ ರೋಗಿಗಳಿಗೆ ಇಲ್ಲಿನ ವೈದ್ಯರು ಸರಿಯಾಗಿ ಮಾತನಾಡಿಸಿ ರೋಗಿ ಗುಣಮುಖವಾಗಲು ಚಿಕಿತ್ಸೆ ನೀಡುವುದಿಲ್ಲ.

ಘಟನೆಯ ವಿವರ: ಮೈಸೂರಿನ ಕೆಆರ್‍ಎಸ್ ರಸ್ತೆ ಯಲ್ಲಿರುವ ಇಎಸ್‍ಐ ಆಸ್ಪತ್ರೆಗೆ ಇಂದು ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಇಎಂಎಲ್ ಕಾರ್ಮಿಕರೊಬ್ಬರು ಚಿಕಿತ್ಸೆ ಪಡೆಯಲು ಬಂದಿದ್ದಾರೆ. ಇಲ್ಲಿನ ಎಲ್ಲಾ ವೈದ್ಯರು ಮಧ್ಯಾಹ್ನ 12 ಗಂಟೆಗೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದಾರೆ. ಎಮರ್ಜೆನ್ಸಿಯಲ್ಲಿದ್ದ ಕರ್ತವ್ಯ ನಿರತ ವೈದ್ಯರು ಮತ್ತು ನರ್ಸ್‍ಗಳು ಸರಿಯಾಗಿ ಮಾರ್ಗದರ್ಶನ ನೀಡದೇ ಏಕವಚನದಲ್ಲಿ ಮಾತನಾಡಿ, ದುವರ್ತನೆ ಮೆರೆದಿದ್ದಾರೆ ಎನ್ನಲಾಗಿದೆ.

ಇದು ಒಬ್ಬರ ಕಥೆಯಲ್ಲ. ಇಲ್ಲಿಗೆ ಬರುವ ಎಲ್ಲಾ ಕಾರ್ಮಿ ಕರಿಗೂ ಆಗಿರುವ ಅನುಭವ. ಈಗ ಇಎಸ್‍ಐ ಆಸ್ಪತ್ರೆ ಅನಾರೋಗ್ಯ ಪೀಡಿತವಾಗಿದ್ದು, ಇದಕ್ಕೆ ಸೂಕ್ತ ಚಿಕಿತ್ಸೆ ನೀಡ ಬೇಕಾಗಿದೆ. ಸರ್ಕಾರದ ದಪ್ಪ ಚರ್ಮಕ್ಕೆ ಕಾರ್ಮಿಕರ ಗೋಳು ಕೇಳುವುದೇ ಎಂಬ ಅನುಮಾನ ಕಾರ್ಮಿಕರಲ್ಲಿದೆ.

Translate »