ಹೆಲಿಟೂರಿಸಂಗಾಗಿ ಮರ ಹನನ  ನಿರ್ಧಾರ ಖಂಡಿಸಿ ಪ್ರತಿಭಟನೆ
ಮೈಸೂರು

ಹೆಲಿಟೂರಿಸಂಗಾಗಿ ಮರ ಹನನ ನಿರ್ಧಾರ ಖಂಡಿಸಿ ಪ್ರತಿಭಟನೆ

April 5, 2021

ಮೈಸೂರು,ಏ.4(ವೈಡಿಎಸ್)- `ಹೆಲಿಟೂರಿಸಂ’ಗಾಗಿ ಮೈಸೂರಿನ ಲಲಿತ ಮಹಲ್ ಬಳಿ ಮರ ಕಡಿಯಲು ಮುಂದಾಗಿರುವುದನ್ನು ಖಂಡಿಸಿ `ಪರಿಸರ ಸಂರಕ್ಷಣಾ ಸಮಿತಿ’ ಪದಾಧಿಕಾರಿಗಳು ಮತ್ತು ಸ್ಥಳೀಯರು ಭಾನುವಾರ ಪ್ರತಿಭಟನೆ ನಡೆಸಿದರು. ಮರ ಕಡಿ ಯಲು ಗುರುತಿಸಿ ನಂಬರ್ ಹಾಕಿರುವ ಜಾಗಕ್ಕೆ ಕಪ್ಪುಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

`ಹೆಲಿಟೂರಿಸಂ’ಗಾಗಿ ಸರ್ಕಾರ ಮರ ಕಡಿ ಯಲು ನಿಗದಿಪಡಿಸಿರುವ ಪ್ರದೇಶ ಜೀವ ವೈವಿಧ್ಯ ದಿಂದ ಕೂಡಿದೆ. ಅಲ್ಲಿ ಚಿಟ್ಟೆ, ಪಕ್ಷಿಗಳು, ನವಿಲು ಮತ್ತಿತರೆ ಪ್ರಾಣಿ-ಪಕ್ಷಿ ಸಂಕುಲ ವಾಸಿಸುತ್ತಿವೆ. ಅಲ್ಲಿಗೆ ದೂರದಿಂದ ಪಕ್ಷಿಗಳೂ ವಲಸೆ ಬರುತ್ತವೆ. ಮರ ಗಳನ್ನು ಕಡಿದುಹಾಕಿದರೆ ಆಶ್ರಯ ಪಡೆದಿರುವ ಜೀವಸಂಕುಲ ಎಲ್ಲಿ ಹೋಗಬೇಕು? ಎಂದು ಪ್ರತಿಭಟ ನಾಕಾರರು ಪ್ರಶ್ನಿಸಿದರು. ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನುಮೋಹನ್ ಮಾತನಾಡಿ, ಹೆಲಿಟೂರಿಸಂನಿಂದ ಹೆಚ್ಚು ಆದಾಯ ಗಳಿಸ ಬಹುದು ಎಂಬುದು ತಪ್ಪು ಕಲ್ಪನೆ. ಆದಾಯ ಮತ್ತು ಅಭಿವೃದ್ಧಿ ಹೆಸರಲ್ಲಿ ಮರಗಳ ಹನನ ಮಾಡಿದರೆ ನಾವು ಪರಿಸರವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸುವುದು ಕಷ್ಟ. ಸದ್ಯ ನಗರದಲ್ಲಿರುವ ಹೆಲಿಪ್ಯಾಡ್ ಮತ್ತು ಮಂಡಕಳ್ಳಿ ವಿಮಾನ ನಿಲ್ದಾಣವನ್ನೇ ಬಳಸಿಕೊಂಡು ಹೆಲಿಟೂರಿಸಂ ನಡೆಸಲಿ ಎಂದು ಒತ್ತಾಯಿಸಿದರು. 627 ಮರಗಳ ಹನನಕ್ಕೆ ಗುರುತು ಮಾಡಲಾಗಿದೆ. ಅವುಗಳಲ್ಲಿ 100 ಮರಗಳ ಮೇಲಿನ ಗುರುತಿನ ಸಂಖ್ಯೆಗೆ ಪ್ರತಿಭಟನಾರ್ಥ ಕಪ್ಪುಬಣ್ಣ ಬಳಿದಿದ್ದೇವೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ವಕೀಲ ಎನ್.ಪುನೀತ್, ದಸಂಸ ಮುಖಂಡ ಕಲ್ಲಹಳ್ಳಿ ಕುಮಾರ್, ಸ್ಥಳೀಯ ರಾದ ಮಣಿಕಂಠ, ಸಿದ್ದರಾಜು, ಕಿರಣ್, ಉಮಾಶಂಕರ್, ಗಣೇಶ್ ಮತ್ತಿತರರಿದ್ದರು.

Translate »