ಮೈಸೂರಲ್ಲಿ ಟ್ರಿಣ್ ಟ್ರಿಣ್ ಬೈಸಿಕಲ್ ಯಶಸ್ವಿ ಸೇವೆ 10 ಸಾವಿರ ಗಡಿ ದಾಟಿದ ಚಂದಾದಾರರ ಸಂಖ್ಯೆ
ಮೈಸೂರು

ಮೈಸೂರಲ್ಲಿ ಟ್ರಿಣ್ ಟ್ರಿಣ್ ಬೈಸಿಕಲ್ ಯಶಸ್ವಿ ಸೇವೆ 10 ಸಾವಿರ ಗಡಿ ದಾಟಿದ ಚಂದಾದಾರರ ಸಂಖ್ಯೆ

July 24, 2018

ಮೈಸೂರು: ಮೈಸೂರಿನಲ್ಲಿ ಜನಪ್ರಿಯವಾಗಿರುವ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆಗೆ ದಿನೇ ದಿನೇ ಹೆಚ್ಚು ಪ್ರತಿಕ್ರಿಯೆ ದೊರೆಯುತ್ತಿದ್ದು, ಈ ಯೋಜನೆಯ ಸದಸ್ಯರ ಸಂಖ್ಯೆ ಈಗ ಐದಂಕಿಗೆ ತಲುಪಿದೆ.

ಯೋಜನೆಯ ಅಧಿಕೃತ ಚಂದಾದಾರರಾಗಿ ಇದುವರೆಗೆ 10,000 ಮಂದಿ ನೋಂದಣಿ ಮಾಡಿಸಿದ್ದು, ಇದು ಯಶಸ್ವಿಯಾಗಿ ನಡೆಯುತ್ತಿರುವುದಕ್ಕೆ ನಿದರ್ಶನವಾಗಿದೆ.

ಕಳೆದ 2017ರ ಜೂನ್ 4ರಂದು ಯೋಜನೆಗೆ ಚಾಲನೆ ನೀಡಲಾಗಿತ್ತು. ಅಂದಿನಿಂದಲೇ ಯೋಜನೆಗೆ ಚಂದಾದಾರರಾಗುವವರ ಸಂಖ್ಯೆ ದಿನೇ ದಿನೇ ಏರತೊಡಗಿತ್ತು. ಇದರಲ್ಲಿ ಯುವಕರು, ಕಾಲೇಜು ವಿದ್ಯಾರ್ಥಿ,ವಿದ್ಯಾರ್ಥಿನಿಯರು, ಸಾರ್ವಜನಿಕರು, ಪ್ರವಾಸಿಗರು, ಸರ್ಕಾರಿ ನೌಕರರು ಸೇರಿದ್ದಾರೆ.

ದೇಶದ ಮೊಟ್ಟ ಮೊದಲ ಸಾರ್ವಜನಿಕ ಬೈಸಿಕಲ್ ಸೇವೆಯಾಗಿರುವ ಮೈಸೂರಿನ ಟ್ರಿಣ್ ಟ್ರಿಣ್‍ಗೆ ಪ್ರತಿ ತಿಂಗಳು ಸರಾಸತಿ 300ರಿಂದ 500 ಮಂದಿ ನೋಂದಣಿ ಮಾಡಿಸುತ್ತಿದ್ದಾರೆ.

ಮೈಸೂರಿನಲ್ಲಿ ಒಟ್ಟು 52 ಟ್ರಿಣ್ ಟ್ರಿಣ್ ಬೈಸಿಕಲ್ ಕೇಂದ್ರಗಳಲ್ಲಿ 1000 ಮಂದಿ ಟ್ರಿಣ್ ಟ್ರಿಣ್ ಸೈಕಲ್ ಸೇವೆ ಬಳಸುತ್ತಿದ್ದಾರೆ. ಒಟ್ಟು 12 ಕಡೆಗಳಲ್ಲಿ ಹೆಸರು ನೋಂದಣಿಗೆ ಅವಕಾಶವಿದ್ದು, ಆರೋಗ್ಯ ದೃಷ್ಟಿಯಿಂದಲೂ ಈ ಸೇವೆಗೆ ಜನ ಮುಗಿ ಬೀಳುತ್ತಿದ್ಧಾರೆ.

Translate »