ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅವಳಿ ಆತ್ಮಾಹುತಿ ದಾಳಿ 40ಕ್ಕೂ ಅಧಿಕ ಸಾವು
ಮೈಸೂರು

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅವಳಿ ಆತ್ಮಾಹುತಿ ದಾಳಿ 40ಕ್ಕೂ ಅಧಿಕ ಸಾವು

August 27, 2021

ಕಾಬೂಲ್, ಆ.೨೬- ಕಾಬೂಲ್ ವಿಮಾನ ನಿಲ್ದಾಣದ ಹೊರ ಗಡೆ ಗುರುವಾರ ಸಂಭ ವಿಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ೪೦ಕ್ಕೂ ಅಧಿಕ ಮಂದಿ ಸಾವಿ ಗೀಡಾಗಿದ್ದು, ೧೫೦ಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯನ್ನು ಅಮೆರಿಕ ಖಚಿತಪಡಿಸಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟçಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಸ್ಫೋಟ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸಂಪೂರ್ಣ ಹಿಡಿತ ಸಾಧಿಸಿ ರುವ ಹಿನ್ನೆಲೆಯಲ್ಲಿ ಪಲಾಯನ ಮಾಡುವ ಸಲು ವಾಗಿ ವಿಮಾನ ನಿಲ್ದಾಣದಲ್ಲಿ ಅಸಂಖ್ಯಾತ ಜನರು ಜಮಾಯಿಸಿದ್ದರು.

ಸ್ಫೋಟದಲ್ಲಿಅಮೆರಿಕ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೆಂಟಗನ್ ಅಧಿಕಾರಿಗಳು ತಿಳಿಸಿ ದ್ದಾರೆ. ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಸ್ಪೋಟವನ್ನು ಖಚಿತಪಡಿಸಿದ್ದು, ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಮೊದಲ ದಾಳಿ ನಡೆದಿದೆ. ಮಗದೊಂದು ಹೋಟೆಲ್‌ನಿಂದ ಸ್ವಲ್ಪ ದೂರದಲ್ಲಿತ್ತು ಎಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಕಾಯುತ್ತಿದ್ದ ಜನರ ಗುಂಪಿನ ನಡುವೆ ಸ್ಫೋಟ ಸಂಭವಿಸಿದೆ ಎಂದು ಹತ್ತಿರದಲ್ಲೇ ಇದ್ದ ಅದಾಮ್ ಖಾನ್ ಎಂಬುವರು ತಿಳಿಸಿದ್ದಾರೆ. ಸ್ಥಳದಲ್ಲೇ ಹಲವರು ಸಾವಿಗೀಡಾಗಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದಿದ್ದಾರೆ.

ದಾಳಿಯ ಹಿಂದೆ ಐಎಸ್‌ನ ಖುರಾಸನ್‌ಗಳು: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದ ಬಾಂಬ್ ದಾಳಿಯ ಹಿಂದೆ ಉಗ್ರ ಸಂಘಟನೆ ಐಎಸ್‌ನ?ಖುರಾಸನ್ ಇದೆ ಎಂದು ಅಮೆರಿಕದ ಅಧಿಕಾರಿಗಳು ಬಲವಾಗಿ ನಂಬಿದ್ದಾರೆ. ಈ ಕುರಿತು ಅಮೆರಿಕದ ಗುಪ್ತಚರ ಇಲಾಖೆಯ ನಿಕಟ ಮೂಲಗಳು ಮಾಹಿತಿ ಒದಗಿಸಿವೆ.

ದಾಳಿಯ ಬಗ್ಗೆ ಅಮೆರಿಕ ತನಿಖೆ ನಡೆಸುತ್ತಿದೆ. ಅದರೆ, ಸ್ಫೋಟದ ಹಿಂದೆ ಐಎಸ್ ಸಂಘಟನೆಯ ಕೈವಾಡ ಇರುವ ಎಲ್ಲ ಲಕ್ಷಣಗಳೂ ಇವೆ ಎಂದು ಅಮೆರಿಕ ಭಾವಿಸಿದೆ ಎಂದು ಗುಪ್ತಚರ ಇಲಾಖೆಯ ಮತ್ತೊಂದು ಮೂಲ ತಿಳಿಸಿದೆ. ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ಗುರುವಾರ ಸಂಭವಿಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ೪೦ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ೧೫ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯನ್ನು ಅಮೆರಿಕ ಖಚಿತಪಡಿಸಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟçಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಸ್ಫೋಟ ಸಂಭವಿಸಿದೆ.

 

Translate »