ಎಡಿಜಿಪಿ ಪ್ರತಾಪ್ ರೆಡ್ಡಿ ಸ್ಥಳ ಪರಿಶೀಲನೆ
ಮೈಸೂರು

ಎಡಿಜಿಪಿ ಪ್ರತಾಪ್ ರೆಡ್ಡಿ ಸ್ಥಳ ಪರಿಶೀಲನೆ

August 27, 2021

ಮೈಸೂರು,ಆ.೨೬(ಎಂಟಿವೈ)- ಪೊಲೀಸ್ ಇಲಾಖೆಗೆ ತೀವ್ರ ಸವಾಲಾಗಿರುವ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ವನ್ನು ಭೇದಿಸಲು ಮೈಸೂರು ಪೊಲೀಸರು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಗುರುವಾರ ಎಡಿಜಿಪಿ ಪ್ರತಾಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿ, ಮಾಹಿತಿ ಪಡೆದರು.

ರಾಜ್ಯವನ್ನೇ ಬೆಚ್ಚಿಬೀಳಿಸಿರುವ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣ ಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಕರಣವನ್ನು ತ್ವರಿತಗತಿಯಲ್ಲಿ ಭೇದಿಸುವಂತೆ ಸೂಚನೆ ನೀಡಿರುವುದರಿಂದ ಇಂದು ಬೆಳಗ್ಗೆ ಎಡಿಜಿಪಿ ಪ್ರತಾಪರೆಡ್ಡಿ ಮೈಸೂರಿಗೆ ಆಗಮಿಸಿ ಸಾಮೂಹಿಕ ಅತ್ಯಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲಿಸಿದರು.

ಘಟನಾ ಸ್ಥಳದಲ್ಲಿ ೨೦ ನಿಮಿಷಕ್ಕೂ ಹೆಚ್ಚು ಸಮಯವಿದ್ದ ಅವರು, ತನಿಖಾಧಿಕಾರಿಗಳಿಗೆ ವಿವಿಧ ಆಯಾಮಗಳ ಬಗ್ಗೆ ನಿರ್ದೇಶನ ನೀಡಿದರು. ಘಟನಾ ಸ್ಥಳದಲ್ಲಿ ಲಭ್ಯವಿರುವ ಸಾಕ್ಷö್ಯ ನಾಶವಾಗುವ ಆತಂಕದಿAದಾಗಿ ಇನ್ನೆರಡು ದಿನ ಘಟನೆ ನಡೆದ ಬಂಡೆ ಸುತ್ತಮುತ್ತಲಿನ ನಿರ್ಜನ ಪ್ರದೇಶದತ್ತ ಕುರಿ ಹಾಗೂ ದನಗಾಯಿಗಳು ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

 

Translate »