ಮೈಸೂರು, ಜು. 8(ಆರ್‍ಕೆ)- ಕೊರೊನಾ ವೈರಸ್ ಭೀತಿಯಿಂದಾಗಿ ಸಾರ್ವಜನಿಕರು ಹಾಗೂ ಕಕ್ಷಿದಾರ ರಿಗೆ ಪ್ರವೇಶ ನಿಷೇಧಿಸಿ ಕೇವಲ ಪ್ರಮುಖ ಪ್ರಕರಣಗಳ ವಿಚಾರಣೆಗೆ ಮಾತ್ರ ಸೀಮಿತಗೊಳಿಸಿರುವ ಮೈಸೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳನ್ನು ಇಂದಿನಿಂದ ಎರಡು ದಿನಗಳ ಕಾಲ ಬಂದ್ ಮಾಡಲಾಗಿದೆ.
ದಿನೇ ದಿನೆ ಮೈಸೂರಲ್ಲಿ ಕೋವಿಡ್-19 ಪಾಸಿ ಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನ್ಯಾಯಾ ಧೀಶರು, ವಕೀಲರು ಸೇವೆ ಸಲ್ಲಿಸುತ್ತಿರುವ ನ್ಯಾಯಾ ಲಯ ಕಟ್ಟಡಗಳಿಗೆ ಡಿಸ್ ಇನ್‍ಫೆಕ್ಟೆಂಟ್ ಸಿಂಪಡಿಸಿ ಸ್ಯಾನಿಟೈಸ್ ಮಾಡಬೇಕಾಗಿರುವುದರಿಂದ ಕಲಾಪ ಗಳನ್ನು ರದ್ದುಗೊಳಿಸಿ ಎರಡು ದಿನ ಬಿಟ್ಟುಕೊಡ ಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ವೆಂಕಟೇಶ್ ಅವರು ಕೇಳಿಕೊಂಡಿದ್ದರು ಎಂದು ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಆನಂದಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ಸುರಕ್ಷತೆ ದೃಷ್ಟಿಯಿಂದ ರಾಜ್ಯ ಹೈಕೋರ್ಟ್‍ನಿಂದ ಅನುಮತಿ ಪಡೆದು ಮೈಸೂರು ಜಿಲ್ಲಾ ಸತ್ರ ನ್ಯಾಯಾ ಲಯದ ನ್ಯಾಯಾಧೀಶರು ಇಂದು (ಜು.8) ಮತ್ತು ನಾಳೆ(ಜು.9) ಮೈಸೂರಿನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಕಟ್ಟಡ ಹಾಗೂ ಮಳಲವಾಡಿಯ ನ್ಯಾಯಾ ಲಯಗಳ ಹೊಸ ಕಟ್ಟಡಗಳಲ್ಲಿ ಕಲಾಪಗಳನ್ನು ರದ್ದು ಗೊಳಿಸಿ ಆರೋಗ್ಯ ಇಲಾಖೆ ಸುಪರ್ದಿಗೆ ವಹಿಸಿ ದ್ದಾರೆ ಎಂದು ಅವರು ತಿಳಿಸಿದರು.
ಅದರಂತೆ ಇಂದು ಆರೋಗ್ಯ ಇಲಾಖೆ ಅಧಿಕಾರಿ ಗಳು ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿಗಳ ಸಹಾಯದಿಂದ ಎರಡೂ ನ್ಯಾಯಾಲಯಗಳ ಕಟ್ಟಡ ಮತ್ತು ಆವರಣವನ್ನು ಸ್ವಚ್ಛ ಗೊಳಿಸಿ ರಸಾಯನಿಕ ಸಿಂಪಡಿಸಿ ಸಂಪೂರ್ಣ ಸ್ಯಾನಿ ಟೈಸ್ ಮಾಡಿದರು. ಬುಧವಾರ ಬೆಳಿಗ್ಗೆಯಿಂದ ಸಂಜೆವ ರೆಗೂ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕಟ್ಟ ಡದ ನೆಲಮಹಡಿ, ವಾಹನ ನಿಲುಗಡೆ ಸ್ಥಳ ಸೇರಿ ದಂತೆ ಎಲ್ಲಾ ಮಹಡಿಗಳ ಕೋರ್ಟ್ ಹಾಲ್, ಆಡಳಿತ ಕಚೇರಿ, ಕ್ಯಾಂಟಿನ್, ವಕೀಲರ ಸಂಘದ ಕಚೇರಿ ಹಾಗೂ ಸುತ್ತಲಿನ ಪ್ರದೇಶವನ್ನು ಫ್ಯೂಮಿಗೇಷನ್ ಮಾಡಿದರು. ಇಂದು ಸ್ಯಾನಿಟೈಸ್ ಕೆಲಸ ಪೂರ್ಣ ಗೊಂಡಿದೆಯಾದರೂ ಮುಂಜಾಗ್ರತಾ ಕ್ರಮವಾಗಿ ಎರಡೂ ನ್ಯಾಯಾಲಯಗಳ ಕಟ್ಟಡಗಳಲ್ಲಿ ನಾಳೆ (ಗುರುವಾರ)ಯೂ ಸಹ ಕೋರ್ಟ್ ಕಲಾಪಗಳನ್ನು ರದ್ದುಗೊಳಿಸಲಾಗಿದ್ದು, ಬುಧವಾರ-ಗುರುವಾರ ನಿಗದಿಯಾಗಿದ್ದ ಪ್ರಕರಣಗಳ ವಿಚಾರಣೆಯನ್ನು ಶುಕ್ರ ವಾರ ಮತ್ತು ಸೋಮವಾರಕ್ಕೆ ಮುಂದೂಡಲಾಗಿದೆ.
ಪರಿಣಾಮ ಆನ್‍ಲೈನ್‍ನಲ್ಲಿ ಇಂದು(ಜು.8) ಮತ್ತು ನಾಳೆ(ಜು.9) ಎರಡೂ ನ್ಯಾಯಾಲಯಗಳಲ್ಲಿ ಯಾವುದೇ ಪ್ರಕರಣಗಳ ವಿಚಾರಣೆಗಳು ನಡೆಯ ಲಿಲ್ಲ. ಲಕ್ಷ್ಮೀಪುರಂ ಮತ್ತು ಅಶೋಕಪುರಂ ಠಾಣೆಗಳ ಪೊಲೀಸರು ಹಾಜರಿದ್ದು, ಕಟ್ಟಡಗಳ ಸ್ಯಾನಿಟೈಸ್ ಕಾರ್ಯಕ್ಕೆ ಸಹಕಾರ ನೀಡಿದರು.