ಮೈಸೂರು ಪಾಲಿಕೆ ಕಚೇರಿ ಸ್ಯಾನಿಟೈಸ್; ಇಂದಿನಿಂದ ಕಚೇರಿ ಕಾರ್ಯ ನಿರ್ವಹಣೆ
ಮೈಸೂರು

ಮೈಸೂರು ಪಾಲಿಕೆ ಕಚೇರಿ ಸ್ಯಾನಿಟೈಸ್; ಇಂದಿನಿಂದ ಕಚೇರಿ ಕಾರ್ಯ ನಿರ್ವಹಣೆ

July 9, 2020

ಮೈಸೂರು, ಜು.8(ಪಿಎಂ)- ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಒಬ್ಬ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಸಯ್ಯಾಜಿರಾವ್ ರಸ್ತೆ ಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿಯನ್ನು 2 ದಿನ ಸೀಲ್‍ಡೌನ್ ಆಗಿತ್ತು. ಬಳಿಕ 2 ದಿನ ಸ್ಯಾನಿಟೈಸ್ ಮಾಡಿದ್ದು, ಪಾಲಿಕೆಯ ಈ ಪ್ರಧಾನ ಕಚೇರಿ ಜು.9ರ ಗುರುವಾರದಿಂದ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿದೆ. ಮಂಗಳವಾರ ಹಾಗೂ ಬುಧ ವಾರ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಪಾಲಿಕೆ ಕಟ್ಟಡವನ್ನು ಸಂಪೂರ್ಣವಾಗಿ ರಾಸಾಯನಿಕ ದ್ರಾವಣ ಸಿಂಪಡಿಸಿ (ಸ್ಯಾನಿಟೈಸ್) ಶುಚಿಗೊಳಿಸಲಾಗಿದೆ. ಸೀಲ್‍ಡೌನ್ ಮಾಡಿದ್ದ ಕಾರಣ 2 ದಿನ ಪಾಲಿಕೆ ಆವರಣ ಭಣಗುಡು ತ್ತಿತ್ತು. ಪಾಲಿಕೆಯ ಪ್ರಧಾನ ಕಚೇರಿಯನ್ನು ಬಂದ್ ಮಾಡಿ ದ್ದರೂ, ಕಂಟ್ರೋಲ್ ರೂಂ ಕಾರ್ಯ ನಿರ್ವಹಣೆ ಮಾಡು ತ್ತಿತ್ತು, ಹಾಗೂ ತುರ್ತು ಸೇವೆಗಳಿಗೆ ವ್ಯವಸ್ಥೆ ಮಾಡಲಾ ಗಿತ್ತು. ಕೊರೊನಾ ಸೋಂಕು ನಿವಾರಣೆ ಸಂಬಂಧದ ಕೆಲಸಗಳಿಗೂ ಎರಡೂ ದಿನ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ವಿಭಾಗದ ಸಿಬ್ಬಂದಿಗೆ ಜ್ವರ, ನೆಗಡಿ ಕಾಣಿಸಿದ್ದರಿಂದ ಮೂಗು-ಗಂಟಲು ದ್ರವ ಸಂಗ್ರ ಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವರಿಗೆ ಕೊರೊನಾ ಪಾಸಿಟಿವ್ ಇರುವ ವರದಿ ಸೋಮವಾರ ರಾತ್ರಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಪಾಲಿಕೆಯನ್ನು ಬಂದ್ ಮಾಡಿ ಎರಡು ದಿನ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

Translate »