ಮೈಸೂರು, ಜು.8(ಪಿಎಂ)- ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ಕಾರ್ಮಿಕರಿಗೆ ಲಾಕ್‍ಡೌನ್ ಅವಧಿ ಮತ್ತು ಜೂನ್ ತಿಂಗಳ ವೇತನ ನೀಡಬೇಕು. ಹಾಗೂ ಶೀಘ್ರವಾಗಿ ಅವರಿಗೆ ಕೆಲಸ ಪುನಾರಂಭಿಸಬೇಕು ಎಂದು ಆಗ್ರ ಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ (ಎಐಯು ಟಿಯುಸಿ ಸಂಯೋಜಿತ) ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ಮೈಸೂರಿನ ಪಡುವಾರಹಳ್ಳಿಯ ಆದಿ ಪಂಪ ರಸ್ತೆಯ ಡಾ. ಬಾಬುಜಗ ಜೀವರಾಂ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಎದುರು ಬೆಳಿಗ್ಗೆ ಜಮಾವಣೆಗೊಂಡ ಪ್ರತಿಭಟನಾ ಕಾರರು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಹೊರಗುತ್ತಿಗೆಯಡಿ 17-18 ವರ್ಷಗಳಿಂದ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಕೊರೊನಾದಿಂದಾಗಿ ಲಾಕ್‍ಡೌನ್ ಶುರು ವಾದ ದಿನದಿಂದ ನಮಗೆ ಕೆಲಸವೂ ಇಲ್ಲ, ವೇತನವೂ ಇಲ್ಲ ಎನ್ನುವಂತಾಗಿದೆ. ಪರಿ ಣಾಮ ನಮ್ಮ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಮಸ್ಯೆ ತೆರೆದಿಟ್ಟರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಲಾಕ್‍ಡೌನ್ ಅವಧಿಯಲ್ಲಿ ವೇತನ ನೀಡ ಬೇಕೆಂದು ಆದೇಶಿಸಿದ್ದರೂ ಜಾರಿಗೆ ಬರ ದಿರುವುದು ವಿಷಾದನೀಯ. ಜೂ.9ರಂದು ನಮ್ಮ ಸಂಘದ ನೇತೃತ್ವದಲ್ಲಿ ರಾಜ್ಯ ವ್ಯಾಪಿ ಪ್ರತಿಭಟನೆ ಮಾಡಿದ ನಂತರ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ಅದರ ಪ್ರಕಾರವೇ ವೇತನ ಪಾವತಿಸ ಬೇಕು. ಮರಳಿ ಕೆಲಸ ನೀಡಲು ಕ್ರಮ ವಹಿಸ ಬೇಕು. ಕಾರ್ಮಿಕರಿಗೆ ಇಪಿಎಫ್ ಪಾವತಿ ಸಿದ ಬಗ್ಗೆ ಮಾಹಿತಿ ನೀಡಬೇಕು. 4 ವರ್ಷ ಗಳಿಂದ ಬಾಕಿ ಉಳಿಸಿಕೊಂಡಿರುವ ವೇತನ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ಜಿಲ್ಲಾ ಕಾರ್ಯದರ್ಶಿ ಎನ್.ಮುದ್ದುಕೃಷ್ಣ, ಹೊರಗುತ್ತಿಗೆ ಕಾರ್ಮಿಕರಾದ ರವಿ, ಲೋಕೇಶ್, ಮಹದೇವಮ್ಮ, ಯಾಂದಳ್ಳಿ ಮಹದೇವಮ್ಮ, ನಾಗರತ್ನ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.