ಕೆಆರ್‍ಎಸ್‍ನಲ್ಲಿ ವಿವಿಧ ಸಂಘಟನೆ, ರೈತ ಸಂಘದಿಂದ ಪ್ರತಿಭಟನೆ
ಮೈಸೂರು

ಕೆಆರ್‍ಎಸ್‍ನಲ್ಲಿ ವಿವಿಧ ಸಂಘಟನೆ, ರೈತ ಸಂಘದಿಂದ ಪ್ರತಿಭಟನೆ

July 9, 2020

ಮೈಸೂರು,ಜು.8(ಆರ್‍ಕೆ)-ಕೃಷ್ಣ ರಾಜ ಸಾಗರ ಜಲಾಶಯದ ಬಳಿ ಮೈಸೂರು ಮಹಾ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಮಾತ್ರ ಸ್ಥಾಪಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆ ಹಾಗೂ ರಾಜ್ಯ ರೈತ ಸಂಘದ ಮುಖಂಡರು ಬುಧವಾರ ಕೆಆರ್‍ಎಸ್‍ನಲ್ಲಿ ಪ್ರತಿಭಟನೆ ನಡೆಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಮಾತ್ರ ಸ್ಥಾಪನೆ ಮಾಡು ವಂತೆ ಮೈಸೂರು ಮತ್ತು ಮಂಡ್ಯ ಹೋರಾಟ ಸಮಿತಿ, ರೈತ ಸಂಘ, ಶಿವಸೇನೆ ಸಂಘ ಟನೆಗಳ ಸಂಯುಕ್ತಾಶ್ರಯದಲ್ಲಿ ಕೆಆರ್‍ಎಸ್ ದಕ್ಷಿಣ ದ್ವಾರದ ಬಳಿ ಪ್ರತಿಭಟನೆ ನಡೆಸ ಲಾಯಿತು. ಕೆಆರ್‍ಎಸ್ ಅಣೆಕಟ್ಟೆ, ಶಿವನ ಸಮುದ್ರ ವಿದ್ಯುತ್ ಉತ್ಪಾದನಾ ಸ್ಥಾವರ, ಭಾರತೀಯ ವಿಜ್ಞಾನ ಸಂಸ್ಥೆ, ಪಿಕೆಟಿಬಿ ಆಸ್ಪತ್ರೆ, ಕೆ.ಆರ್.ಆಸ್ಪತ್ರೆ, ಮೈಸೂರು ವಿಶ್ವವಿದ್ಯಾ ನಿಲಯ, ನಾಲೆ, ಕೆರೆಕಟ್ಟೆಗಳಂತಹ ಹಲವು ಪ್ರಮುಖ ಜನಪರ ಯೋಜನೆಗಳನ್ನು ಅನು ಷ್ಠಾನ ಮಾಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ಕೆ.ಆರ್. ಸಾಗರ ದಲ್ಲಿ ನಿರ್ಮಿಸುವುದು ಸೂಕ್ತ. ಆದರೆ, ಕೇವಲ ದಿವಾನರಾಗಿ, ಅವರ ಕರ್ತವ್ಯ ನಿರ್ವಹಿ ಸಿದ ಸರ್.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಯನ್ನು ಮಹಾರಾಜರ ಸಮಾನವಾಗಿ ಸ್ಥಾಪಿಸುವುದು ಸರಿಯಲ್ಲ ಎಂದು ಪ್ರತಿ ಭಟನಾನಿರತರು ಒತ್ತಾಯಿಸಿದರು.

ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಗಳನ್ನು ಕೂಗಿದ ಅವರು, ತಕ್ಷಣವೇ ಸರ್ ಎಂವಿ ಪ್ರತಿಮೆ ನಿರ್ಮಾಣ ಕಾಮಗಾರಿ ಯನ್ನು ಸ್ಥಗಿತಗೊಳಿಸಬೇಕೆಂಬ ಮನವಿ ಪತ್ರ ವನ್ನು ಸ್ಥಳಕ್ಕೆ ಧಾವಿಸಿದÀ ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪಾ ಅವರಿಗೆ ಸಲ್ಲಿಸಿದರು.

ಕೇವಲ ನಾಲ್ವಡಿ ಅವರ ಪ್ರತಿಮೆ ಸ್ಥಾಪನೆ ಗಾಗಿ ಮೈಸೂರು ಮತ್ತು ಮಂಡ್ಯ ಹೋರಾಟ ಸಮಿತಿ ಸಂಚಾಲಕರಾದ ಪ್ರೊ.ಜಯಪ್ರಕಾಶ್ ಗೌಡ, ಪ್ರೊ.ಪಿ.ವಿ.ನಂಜರಾಜ ಅರಸ್, ಅರ ವಿಂದ ಶರ್ಮ, ಮುಖಂಡರಾದ ಹೊಸ ಕೋಟೆ ಬಸವರಾಜು, ಬಡಗಲಪುರ ನಾಗೇಂದ್ರ, ಕೆಂಪೂಗೌಡ, ಶಂಭೂನಹಳ್ಳಿ ಸುರೇಶ್, ಮಾಜಿ ಮೇಯರ್ ಪುರುಷೋ ತ್ತಮ್, ನಂದೀಶ್ ಅರಸ್, ಯಮುನಾ, ಸಿದ್ದರಾಜು ಸೋಸಲೆ ಸೇರಿದಂತೆ ಹಲ ವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »