ನವದೆಹಲಿ, ಮೇ 21- ಏಕಕಾಲದಲ್ಲಿ ಎರಡು ಪದವಿ ಕೋರ್ಸ್ ಗಳ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಪ್ರಸ್ತಾವನೆಗೆ ಯೂನಿವರ್ಸಿಟಿ ಗ್ರಾಂಟ್ಸ್ ಕಮಿ ಷನ್ (ಯುಜಿಸಿ) ಒಪ್ಪಿಗೆ ಸೂಚಿಸಿದೆ. ಒಂದರಲ್ಲೇ ಎರಡು ಪದವಿ ಅಥವಾ ವಿಭಿನ್ನ ಮಾದರಿಯಲ್ಲಿ ಎರಡು ಪದವಿ ಪಡೆ ಯುವ ವಿದ್ಯಾರ್ಥಿಗಳ ಕನಸು ಶೀಘ್ರವೇ ನನಸಾಗಲಿದೆ.
ಭಾರತದಲ್ಲಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಪದವಿ ವ್ಯಾಸಂಗ ಮಾಡುವುದಕ್ಕೆ ಅನುಕೂಲವಾಗುವ ಪ್ರಸ್ತಾವನೆಯನ್ನು ಇತ್ತೀಚಿನ ಸಭೆಯಲ್ಲಿ ಯುಜಿಸಿ ಅಂಗೀಕರಿಸಿದೆ. ಒಂದೇ ಸ್ಟ್ರೀಮ್‍ಗೆ ಸಂಬಂಧಿಸಿದ ಎರಡು ವಿಷಯಗಳು ಅಥವಾ ವಿಭಿನ್ನ ವಿಷಯ ಗಳ ಪದವಿಯನ್ನು ವ್ಯಾಸಂಗ ಮಾಡಬಹುದು. ಆದಾಗ್ಯೂ, ಒಂದು ಕೋರ್ಸನ್ನು ವಿದ್ಯಾರ್ಥಿಗಳು ರೆಗ್ಯುಲರ್ ಕಾಲೇಜು ಮೂಲಕ ವ್ಯಾಸಂಗ ಮಾಡಿದರೆ, ಇನ್ನೊಂದನ್ನು ಆನ್‍ಲೈನ್ ಡಿಸ್ಟೆನ್ಸ್ ಲರ್ನಿಂಗ್ ಮಾಡ್ ಮೂಲಕ ಮಾಡಬೇಕಾಗುತ್ತದೆ. ಈ ಸಂಬಂಧ ಅಧಿಸೂಚನೆಯೂ ಶೀಘ್ರವೇ ಪ್ರಕಟವಾಗಲಿದೆ ಎಂದು ಯುಜಿಸಿ ಸೆಕ್ರಟರಿ ರಜನೀಶ್ ಜೈನ್ ತಿಳಿಸಿದ್ದಾರೆ.
ಕಳೆದ ವರ್ಷ ಉಪಾಧ್ಯಕ್ಷ ಭೂಷಣ್ ಪಟವರ್ಧನ್ ಅಧ್ಯ ಕ್ಷತೆಯ ಸಮಿತಿಯೊಂದನ್ನು ಯುಜಿಸಿ ರಚಿಸಿದ್ದಲ್ಲದೆ, ಎರಡು ಪದವಿಗಳನ್ನು ಏಕಕಾಲಕ್ಕೆ ಮಾಡುವ ವಿಚಾರ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿತ್ತು. ಆದಾಗ್ಯೂ, ಇದೇ ಮೊದಲ ಸಲ ಆಯೋಗ ಈ ವಿಷಯವನ್ನು ಪರಿಶೀಲಿಸುತ್ತಿರುವುದಲ್ಲ. 2012ರಲ್ಲೂ ಇಂಥದ್ದೇ ಒಂದು ಸಮಿತಿಯನ್ನು ರಚಿಸಿತ್ತು. ಶಿಫಾರಸನ್ನೂ ಪಡೆದಿತ್ತಾದರೂ ನಂತರ ಅದು ಮೂಲೆಗುಂಪಾಯಿತು.
ಅಂದು ಹೈದರಾಬಾದ್ ಯೂನಿವರ್ಸಿಟಿಯ ಉಪಕುಲಪತಿ ಫುರ್ಕಾನ್ ಕ್ವಾಮರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿತ್ತು. ರೆಗ್ಯುಲರ್ ಮಾಡ್‍ನಲ್ಲಿ ಎರಡು ಪದವಿ ವ್ಯಾಸಂಗ ಮಾಡುವುದು ಸಾಧ್ಯವಾಗದೇ ಹೋಗಬಹುದು. ಅದರಿಂದ ಆಡಳಿತಾತ್ಮಕ ಮತ್ತು ಇತರೆ ಸಮಸ್ಯೆಗಳು ಉದ್ಭವಿಸಬಹುದು. ರೆಗ್ಯುಲರ್ ಮಾಡ್‍ನಲ್ಲಿ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಸರ್ಟಿಫಿ ಕೇಟ್ ಕೋರ್ಸ್, ಡಿಪೆÇ್ಲಮಾ, ಅಡ್ವಾನ್ಸ್ಡ್ ಡಿಪೆÇ್ಲಮಾ, ಪಿಜಿ ಡಿಪೆÇ್ಲಮಾ ಕೋರ್ಸ್‍ಗಳನ್ನು ಏಕಕಾಲದಲ್ಲಿ ಮಾಡುವುದಕ್ಕೆ ಅವಕಾಶ ನೀಡಬಹುದು ಎಂದು ಅಂದಿನ ಸಮಿತಿ ತಿಳಿಸಿತ್ತು.