ಇತ್ತೀಚೆಗೆ ಮೈಸೂರಲ್ಲಿ ನಡೆದ ಐಎಎಸ್ ಅಧಿಕಾರಿಗಳಿಬ್ಬರ  ಮುಸುಕಿನ ಗುದ್ದಾಟದ ಬಗ್ಗೆ ಸಿದ್ದರಾಮಯ್ಯ ಬೇಸರ
ಮೈಸೂರು

ಇತ್ತೀಚೆಗೆ ಮೈಸೂರಲ್ಲಿ ನಡೆದ ಐಎಎಸ್ ಅಧಿಕಾರಿಗಳಿಬ್ಬರ ಮುಸುಕಿನ ಗುದ್ದಾಟದ ಬಗ್ಗೆ ಸಿದ್ದರಾಮಯ್ಯ ಬೇಸರ

July 2, 2021

ಮೈಸೂರು,ಜು.1(ಪಿಎಂ)- ಮೈಸೂರಿನ ಹಿಂದಿನ ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಸುತ್ತೂರು ಮಠದ ಆವರಣದಲ್ಲಿ ವಿವಿಧ ಮುಖಂಡರ ಜೊತೆ ಮೈಸೂರಿಗೆ ಸಂಬಂ ಧಿಸಿದಂತೆ ಮಾತನಾಡುತ್ತಿದ್ದಾಗ ಜಿಲ್ಲೆಯ ಹಲವು ವಿಚಾರಗಳ ಕುರಿತು ಪ್ರಸ್ತಾಪವಾಯಿತು. ಈ ವೇಳೆ ಮುಡಾ, ಮೈಸೂರು ಮಹಾನಗರ ನಗರಪಾಲಿಕೆ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾ ಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಅವರ ಜೊತೆ ಮಾತನಾಡುತ್ತಲೇ ಕೆಲವು ವಿಚಾರಗಳನ್ನು ಮೆಲುಕು ಹಾಕಿ ದರು. ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಬಹುದೇ ಹೊರತು ಅವರ ವೈಯಕ್ತಿಕ ವಿಚಾರಗಳನ್ನು ಮಾತನಾಡುವಂತಿಲ್ಲ ಎಂದರು. ಆ ಮೂಲಕ ಮೈಸೂರು ಮಹಾನಗರ ಪಾಲಿಕೆ ನಿರ್ಗಮಿತ ಆಯುಕ್ತೆ ಶಿಲ್ಪಾ ನಾಗ್ ಅವರು ಮಾಧ್ಯಮಗಳ ಮುಂದೆ ಮೈಸೂರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಲ್ಲದೆ, ಹಿಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನಿಯಮ ಬಾಹಿರವಾಗಿ ಪಾರಂಪರಿಕ ಕಟ್ಟಡದಲ್ಲಿ ಈಜು ಕೊಳ ನಿರ್ಮಾಣ ಮಾಡಿರುವ ಆರೋಪ ನಿಜ ವಾಗಿದ್ದರೆ ಅವರನ್ನು ತಕ್ಷಣವೇ ಅಮಾನತು ಮಾಡಬೇಕಿತ್ತು. ಅಧಿಕಾರಿಗಳು ವೈಯಕ್ತಿಕ ವಿಚಾರ, ಆಪಾದನೆಗಳನ್ನು ಮಾಧ್ಯಮಗಳ ಮುಂದೆ ಹೇಳು ವಂತಿಲ್ಲ. ಏನೇ ಸಮಸ್ಯೆಗಳು ಇದ್ದರೂ ಹಿರಿಯ ಅಧಿಕಾರಿ ಗಳ ಗಮನಕ್ಕೆ ತರಬೇಕಿತ್ತು ಎಂದು ಹೇಳಿದರು.

Translate »