ಮುಂದಿನ ವರ್ಷಾರಂಭ ರಾಜ್ಯದಲ್ಲಿ  `ಖೇಲೊ ಇಂಡಿಯಾ’ ಕ್ರೀಡಾಕೂಟ
ಮೈಸೂರು

ಮುಂದಿನ ವರ್ಷಾರಂಭ ರಾಜ್ಯದಲ್ಲಿ `ಖೇಲೊ ಇಂಡಿಯಾ’ ಕ್ರೀಡಾಕೂಟ

July 2, 2021

ಮೈಸೂರು, ಜು.1(ಎಂಕೆ)- ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛೆಯಂತೆಯೇ ಮುಂದಿನ ವರ್ಷ ರಾಜ್ಯದಲ್ಲಿ ‘ಖೇಲೋ ಇಂಡಿಯಾ ಕ್ರೀಡಾಕೂಟ’ ಆಯೋಜಿಸ ಲಾಗುವುದು ಎಂದು ಯುವ ಸಬಲೀ ಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಸಚಿವ ನಾರಾಯಣಗೌಡ ತಿಳಿಸಿದರು.

ನಗರದಲ್ಲಿನ ಬಿಜೆಪಿ ಜಿಲ್ಲಾ ಕಚೇರಿಗೆ ಗುರುವಾರ ಭೇಟಿ ನೀಡಿದ ಬಳಿಕ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ವನ್ನು ಕ್ರೀಡೆಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯಬೇಕೆಂಬ ಉದ್ದೇಶ ವಿದೆ. 2022ಕ್ಕೆ ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ಕೂಟಗಳನ್ನು ಆಯೋಜಿಸ ಲಾಗುತ್ತಿದೆ. ಕರ್ನಾಟಕ ಸರ್ಕಾರ ಮತ್ತು ಜೈನ್ ಯೂನಿವರ್ಸಿಟಿ ಸಹಯೋಗದಲ್ಲಿ ಫೆಬ್ರವರಿ ಅಥವಾ ಮಾರ್ಚ್‍ನಲ್ಲಿ ಕ್ರೀಡಾ ಕೂಟ ನಡೆಯಲಿದೆ. ಇದರಲ್ಲಿ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು ಎಂದು ತಿಳಿಸಿದರು.

ಕೊರೊನಾ ಸೋಂಕಿನ ಹಾವಳಿ ಕಡಿಮೆ ಯಾಗುತ್ತಿದ್ದು, ಕ್ರೀಡಾ ಚಟುವಟಿಕೆಗಳು ಪುನಾರಂಭಗೊಳ್ಳುತ್ತಿವೆ. ಕ್ರೀಡಾಪಟುಗಳ ಅನುಕೂಲಕ್ಕಾಗಿ ಕ್ರೀಡಾಂಗಣಗಳು, ಹಾಸ್ಟೆಲ್ ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕೋವಿಡ್ -19ನಿಂದ ಮೃತಪಟ್ಟ ಕ್ರೀಡಾಪಟುಗಳ ಪಟ್ಟಿ ತಯಾರಿಸಲಾಗುತ್ತಿದ್ದು, ಮೃತರ ಕುಟುಂಬದವರಿಗೆ 1 ಲಕ್ಷ ರೂ. ಪರಿಹಾರ ಧನವನ್ನು ಸರ್ಕಾರ ನೀಡಲಿದೆ ಎಂದರು.

ಅಭಿವೃದ್ಧಿ ಕೆಲಸವಾಗಬೇಕು: ಮೈಸೂರು, ಚಾ.ನಗರ, ರಾಮನಗರ, ಕೊಡಗು ಜಿಲ್ಲೆ ಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗ ಬೇಕಿದೆ. ರಸ್ತೆಗಳು ಅಭಿವೃದ್ಧಿಯಾಗಬೇಕು. ಶಾಸಕ, ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಗಳಲ್ಲಿನ ಹಣ ಈ ವರ್ಷ ಖರ್ಚಾಗದೆ ಉಳಿದಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳ ಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿ ಸಲು ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡಿದ್ದೇನೆ ಎಂದು ವಿವರಿಸಿದರು.

ಬಿಜೆಪಿ ಗ್ರಾಮಾಂತರ ಘಟಕದ ಜಿಲ್ಲಾ ಧ್ಯಕ್ಷೆ ಮಂಗಳಾ ಸೋಮಶೇಖರ್, ಮುಖಂಡ ರಾದ ವಾಣೀಶ್, ಯೋಗಾನಂದ್, ಮಹೇಶ್, ಜಯರಾಂ ಇನ್ನಿತರರಿದ್ದರು.

Translate »