ಮಹಾರಾಜ ಪದವಿ ಕಾಲೇಜಲ್ಲಿ 750 ವಿದ್ಯಾರ್ಥಿ-ಸಿಬ್ಬಂದಿಗೆ ಲಸಿಕೆ
ಮೈಸೂರು

ಮಹಾರಾಜ ಪದವಿ ಕಾಲೇಜಲ್ಲಿ 750 ವಿದ್ಯಾರ್ಥಿ-ಸಿಬ್ಬಂದಿಗೆ ಲಸಿಕೆ

July 2, 2021

ಮೈಸೂರು,ಜು.1(ಎಂಟಿವೈ)- ಕೊರೊನಾ ಅಪಾಯದಿಂದ ಪಾರಾಗಲು ಲಸಿಕೆ ಪಡೆಯು ವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದ್ದು, ಮಹಾರಾಜ ಪದವಿ ಕಾಲೇಜಿನಲ್ಲಿ ಲಸಿಕಾ ವಿಶೇಷ ಅಭಿಯಾನದಲ್ಲಿ ವಿದ್ಯಾರ್ಥಿ ಗಳು ಮತ್ತು ಕಾಲೇಜು ಸಿಬ್ಬಂದಿ ಸೇರಿ ದಂತೆ 750ಕ್ಕೂ ಹೆಚ್ಚು ಲಸಿಕೆ ಪಡೆದರು.

ಸದ್ಯದಲ್ಲೇ ಕಾಲೇಜು ಪುನಾರಂಭವಾಗ ಲಿರುವ ಹಿನ್ನೆಲೆಯಲ್ಲಿ ಸರ್ಕಾರ ಪಿಯುಸಿ ಮೇಲ್ಪಟ್ಟ 18-44 ವರ್ಷದೊಳಗಿನ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂ ದಿಗೆ ಲಸಿಕೆ ಹಾಕುವ ವಿಶೇಷ ಅಭಿಯಾನ ಆರಂಭಿಸಿದ್ದು, ಅದರ ಅಂಗವಾಗಿ ಇಂದು ಬೆಳಿಗ್ಗೆ ಮೈಸೂರಿನ ಮಹಾರಾಜ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಲಸಿಕೆ ಹಾಕ ಲಾಯಿತು. ಕಾಲೇಜಿನ ಶತಮಾನೋತ್ಸವ ಭವನದ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಾಲೇಜು ಸಿಬ್ಬಂದಿಗಳ ಸಂಯುಕ್ತಾಶ್ರಯ ದಲ್ಲಿ ಅಭಿಯಾನ ನಡೆಸಲಾಯಿತು.

ಕಾಲೇಜಿನಲ್ಲಿ 3500ಕ್ಕೂ ಹೆಚ್ಚು ಮಂದಿ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಬಿಎ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿದ್ದು, ಮೊದಲ ಹಂತದಲ್ಲಿ 1 ಸಾವಿರ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. 5 ಕೌಂಟರ್ ತೆರೆದು ಆಧಾರ್ ನಂಬರ್, ಕಾಲೇಜಿನ ಗುರುತಿನ ಚೀಟಿ ನಮೂದು ಮಾಡಿಕೊಂಡ ನಂತರ ಕೋವಿಡ್ ಟೆಸ್ಟ್‍ಗೆ ಒಳಪಡಿಸಲಾಯಿತು. ಪರೀಕ್ಷೆಯ ಬಳಿಕ ಲಸಿಕೆ ಪಡೆದ ವಿದ್ಯಾರ್ಥಿ ಗಳು ಮತ್ತು ಸಿಬ್ಬಂದಿ ಕಾಲೇಜಿನಲ್ಲೇ ಕೆಲ ಕಾಲ ವಿಶ್ರಾಂತಿ ಪಡೆದರು. ಯಾವುದೇ ಪಾಶ್ರ್ವ ಪರಿಣಾಮ ಇಲ್ಲವೆಂಬುದು ಖಚಿತವಾದ ಬಳಿಕ ಮನೆಗೆ ತೆರಳಿದರು. ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅನಿತಾ ಬ್ರಾಗ್ಸ್, ಲಸಿಕಾ ಅಭಿಯಾನದ ನೋಡಲ್ ಅಧಿಕಾರಿ ಪ್ರೊ.ಸಿದ್ದರಾಜು ಅಭಿಯಾನದ ಮೇಲುಸ್ತುವಾರಿ ವಹಿಸಿದ್ದರು.

Translate »