ಡಾ. ರಾಜ್‍ಕುಮಾರ್ ರಸ್ತೆಯಲ್ಲಿ ಎರಡು ಅಂಗಡಿಗಳಲ್ಲಿ ಕಳವು
ಮೈಸೂರು

ಡಾ. ರಾಜ್‍ಕುಮಾರ್ ರಸ್ತೆಯಲ್ಲಿ ಎರಡು ಅಂಗಡಿಗಳಲ್ಲಿ ಕಳವು

August 10, 2018

ಮೈಸೂರು:  ಒಂದೇ ರಾತ್ರಿ ಅಂಗಡಿಗಳ ಸರಣಿ ಕಳ್ಳತನ ನಡೆದ ಬೆನ್ನಲ್ಲೇ ಮೈಸೂರಿನ ಡಾ|| ರಾಜ್‍ಕುಮಾರ್ ರಸ್ತೆಯ ಎರಡು ಅಂಗಡಿಗಳಲ್ಲಿ ಖದೀಮರು ಕಳೆದ ರಾತ್ರಿ ಕೈಚಳಕ ತೋರಿದ್ದಾರೆ. ಶ್ರೀಕಂಠೇಶ್ವರ ಟಿವಿ ಶೋ ರೂಂ ಮತ್ತು ಜಿಯೋ ಮೊಬೈಲ್ ಫೋನ್ ಶೋರೂಂನಲ್ಲಿ ಕಳ್ಳತನ ಮಾಡಲಾಗಿದ್ದು, ರೋಲಿಂಗ್ ಶೆಟರ್ ಮೀಟಿ ಎಂದಿನಂತೆ ನಗದು ದೋಚಿ ಪರಾರಿಯಾಗಿದ್ದಾರೆ.

ಶ್ರೀಕಂಠೇ ಶ್ವರ ಟಿವಿ ಶೋರೂಂನಲ್ಲಿ 1.3 ಲಕ್ಷ ರೂ. ನಗದು, ಡಿವಿಆರ್ ಅನ್ನು ಕಳವು ಮಾಡ ಲಾಗಿದೆ. ನಂತರ ಅದೇ ರಸ್ತೆಯ ಜಿಯೋ ಶೋರೂಂನಲ್ಲಿ ರೋಲಿಂಗ್ ಶೆಟರ್ ಎತ್ತಲು ಪ್ರಯತ್ನಿಸಿದಾಗ ಅಲ್ಲಿನ ಸೈರನ್ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಖದೀಮರು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಆಲನಹಳ್ಳಿ ಠಾಣೆ ಪೊಲೀ ಸರು ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »