ಇಡೀ ಜಿಲ್ಲೆ ಸ್ತಬ್ಧ…ಸ್ತಬ್ಧ…ಸ್ತಬ್ಧ…
ಚಾಮರಾಜನಗರ,ಮಾ.22(ಎಸ್‍ಎಸ್)- ಕೊರೊನಾ ವೈರಸ್ ಹರಡುವುದನ್ನು ತಡೆ ಗಟ್ಟುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಕರೆ ನೀಡಿದ್ದ `ಜನತಾ ಕಫ್ರ್ಯೂ’ಗೆ ಭಾನುವಾರ ಜಿಲ್ಲೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಈ ಪರಿಯ ಬಂದ್ ವಾತಾವರಣ ಯಾವುದೇ ಸಂದರ್ಭದಲ್ಲಿ ಆಗಿರಲಿಲ್ಲ. `ಜನತಾ ಕಫ್ರ್ಯೂ’ ಜಿಲ್ಲೆಯಾದ್ಯಂತ ಅಭೂತಪೂರ್ವ ಯಶ ದೊರೆತು ಇಡೀ ಜಿಲ್ಲೆ ಸ್ತಬ್ಧಗೊಂಡಿತ್ತು.
ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆಗಳ ತುರ್ತು ಸೇವಾ ಘಟಕ, ಪೆಟ್ರೋಲ್ ಬಂಕ್‍ಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸೇವೆ ಗಳು ಬಂದ್ ಆಗಿದ್ದವು. ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್‍ಗಳು ತನ್ನ ಸಂಚಾ ರವನ್ನು ದಿನವಿಡೀ ಬಂದ್ ಮಾಡಿದ್ದ ರಿಂದ ಬಸ್‍ನಿಲ್ದಾಣಗಳು ಬಿಕೋ ಎನ್ನು ತ್ತಿದ್ದವು. ರೈಲು ಸಹ ರದ್ದಾಗಿತ್ತು. ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಹೀಗಾಗಿ ವ್ಯಾಪಾರ ಕೇಂದ್ರ ಗಳು ಭಣಗುಡುತ್ತಿದ್ದವು. ಚಿತ್ರಮಂದಿರಗಳು ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿದವು.
ಅಲ್ಲೊಬ್ಬರು, ಇಲ್ಲೊಬ್ಬರು ಓಡಾಟ ವನ್ನು ಹೊರತುಪಡಿಸಿದರೆ, ಯಾವುದೇ ರೀತಿಯ ಜನಸಂದಣಿ ಕಂಡುಬರಲಿಲ್ಲ. ಆಟೋ ಗಳು, ಕಾರುಗಳು, ಟೆಂಪೋ, ಲಾರಿಗಳು ಸಹ ರಸ್ತೆಗೆ ಇಳಿಯಲಿಲ್ಲ. ಭಾನುವಾರ ಆದ ಕಾರಣ ಸರ್ಕಾರಿ ಕಚೇರಿಗಳಿಗೆ ರಜೆ ಇತ್ತು. ಹೀಗಾಗಿ ಜಿಲ್ಲಾಡಳಿತಭವನ ಸಾರ್ವ ಜನಿಕರು, ಅಧಿಕಾರಿಗಳು, ನೌಕರರು ಇಲ್ಲದೇ, ಬಿಕೋ ಎನ್ನುತ್ತಿತ್ತು.
ಯಾವಾಗಲೂ ಜನರಿಂದ ತುಂಬಿ ತುಳುಕುತ್ತಿದ್ದ ಪ್ರದೇಶಗಳು ಜನರಿಲ್ಲದೇ, ಬಿಕೋ ಎನ್ನುತ್ತಿದ್ದವು. ನಗರದ ಜೋಡಿ ರಸ್ತೆ, ಡೀವಿಯೇಷನ್ ರಸ್ತೆ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಪ್ರಮುಖ ವೃತ್ತಗಳಲ್ಲಿ ಜನರೇ ಕಂಡುಬರಲಿಲ್ಲ. ಈ ಮೊದಲೇ ನಿಗದಿಯಾಗಿದ್ದ ಮದುವೆಗಳು ನಡೆದರೂ ಸಹ ಸಂಬಂಧಿಕರು, ಹಿತೈಷಿ ಗಳು ಇಲ್ಲದೇ ಕಲ್ಯಾಣಮಂಟಪದಲ್ಲಿ ಬೆರಳೆಣಿಕೆ ಯಷ್ಟು ಜನರು ಕಂಡುಬಂದರು. ತಯಾರಿ ಸಿದ್ದ ತಿಂಡಿ, ಊಟ ವ್ಯಯ ಆಯಿತು.
ಜನತಾ ಕಫ್ರ್ಯೂಗೆ ಹಾಗೂ ಪಟ್ಟಣ ಪ್ರದೇಶಗಳು ಅಲ್ಲದೇ ಹೋಬಳಿ ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶ ಗಳಲ್ಲೂ ಸಂಪೂರ್ಣ ಬೆಂಬಲ ವ್ಯಕ್ತವಾ ಯಿತು. ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯದೇ ಇದ್ದುದರಿಂದ ನಾಗರಿಕರು ಮನೆಯಿಂದ ಹೊರಬಾರದ ಕಾರಣ ಬಿಕೋ ಎನ್ನುತ್ತಿದ್ದವು. ಒಟ್ಟಾರೆ ಜಿಲ್ಲೆಯಾದ್ಯಂತ ಜನತಾ ಕಫ್ರ್ಯೂಗೆ ಎಂದೂ ಸಹ ಕಂಡರಿಯ ದಂತಹ ಅಭೂತಪೂರ್ವ ಯಶ ದೊರೆಯಿತು.
ಪರಿಶೀಲನೆ: ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಹೆಚ್.ಡಿ.ಆನಂದ್‍ಕುಮಾರ್ ನಗರದ ಪ್ರಮುಖ ರಸ್ತೆಗಳು, ವೃತ್ತಗಳಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ ಜನರು
ಚಾಮರಾಜನಗರ,ಮಾ.22(ಎಸ್‍ಎಸ್) -ಕೊರೊನಾ ವೈರಸ್ ಭೀತಿಗೆ ಒಳಗಾಗಿ ರುವ ಜನರು ಭಾನುವಾರ ದಿನವಿಡೀ ಮನೆಯಿಂದ ಹೊರಬಾರದೆ ಜನತಾ ಕಫ್ರ್ಯೂ ಆಚರಿಸಿದರು.
ಪ್ರಧಾನಮಂತ್ರಿಗಳ ಸಲಹೆ ಮೇರೆಗೆ ಸಂಜೆ 5 ಗಂಟೆ ವೇಳೆಗೆ ಚಪ್ಪಾಳೆ ತಟ್ಟಿದರು. ಸಂಜೆ 5 ಗಂಟೆ ಆಗುತ್ತಿದ್ದಂ ತೆಯೇ ಪೊಲೀಸ್ ವಾಹನಗಳು ಸೈರನ್ ಹಾಕಿಕೊಂಡು ಪ್ರಮುಖ ರಸ್ತೆಗಳು ಹಾಗೂ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿದವು. ಈ ವೇಳೆ ಮನೆ ಯಿಂದ ಹೊರಬಂದ ನಾಗರಿಕರು ಚಪ್ಪಾಳೆ ತಟ್ಟಿದರು. ಈ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಅವಿರತ ವಾಗಿ ಶ್ರಮಿಸುತ್ತಿರುವ ವೈದ್ಯರು, ಶುಶ್ರೂಷ ಕರು, ಪೊಲೀಸರು, ಸೈನಿಕರು, ಪೌರ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದರು.
ನಗರದ ಭುವನೇಶ್ವರಿ ವೃತ್ತ, ಶಂಕರ ಪುರ, ನ್ಯಾಯಾಲಯದ ರಸ್ತೆ, ಭ್ರಮ ರಾಂಭ ಬಡಾವಣೆ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಜನರು ಜಮಾಯಿಸಿ ಚಪ್ಪಾಳೆ ತಟ್ಟಿದರು. ಈ ಮೂಲಕ ಕೊರೊನಾ ವೈರಸ್ ತಡೆಗಟ್ಟಲು ನಾವು ಸಹ ಸಹಕ ರಿಸುವುದಾಗಿ ಅಭಯ ನೀಡಿದರು.