ಮೈಸೂರು, ಅ3- ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಯು ಅ.4ರಂದು ಮೈಸೂರು ನಗರದ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ಮೈಸೂರು ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಮೈಸೂರು ನಗರದ ವಿ.ವಿ.ಮೊಹಲ್ಲಾದಲ್ಲಿ ರುವ ನಿರ್ಮಲ ಪ್ರೌಢಶಾಲೆ, ಕೃಷ್ಣಮೂರ್ತಿಪುರಂನಲ್ಲಿರುವ ಎಂ.ಎಂ.ಕೆ ಅಂಡ್ ಎಸ್‍ಡಿಎಂ ಬಾಲಕಿಯರ ಪಿ.ಯು ಕಾಲೇಜು, ಮರಿಮಲ್ಲಪ್ಪ ಪಿ.ಯು ಕಾಲೇಜು, ಮಹಾರಾಜ ಸರ್ಕಾರಿ ಪಿ.ಯು ಕಾಲೇಜು, ಸರ್ಕಾರಿ ಆದರ್ಶ ವಿದ್ಯಾಲಯ, ಸರಸ್ವತಿಪುರಂನಲ್ಲಿರುವ ಟಿ.ಟಿ.ಎಲ್ ಕಾಲೇಜು ಆಫ್ ಬಿಸಿನೆಸ್ ಮ್ಯಾನೇಜ್‍ಮೆಂಟ್, ಲಕ್ಷ್ಮೀಪುರಂನಲ್ಲಿರುವ ಕ್ರೈಸ್ಟ್ ದಿ ಕಿಂಗ್ ಕಾನ್ವೆಂಟ್, ಡಿ.ಬನುಮಯ್ಯ ಸ್ವತಂತ್ರ ಪಿ.ಯು ಕಾಲೇಜು, ಸರಸ್ವತಿಪುರಂ ನಲ್ಲಿರುವ ವಿಜಯ ವಿಠಲ ಸಂಯುಕ್ತ ಪಿ.ಯು ಕಾಲೇಜು, ಜಯಲಕ್ಷ್ಮಿಪುರಂನಲ್ಲಿ ರುವ ಎಸ್.ಬಿ.ಆರ್.ಆರ್ ಮಹಾಜನ ಪಿ.ಯು ಕಾಲೇಜು, ಒಂಟಿಕೊಪ್ಪಲಿನಲ್ಲಿರುವ ಸರ್ಕಾರಿ ಪಿ.ಯು ಕಾಲೇಜು, ನಜರ್‍ಬಾದ್‍ನಲ್ಲಿರುವ ಸರ್ಕಾರಿ ವಿಭಜಿತ ಮಹಾರಾಜ ಪಿ.ಯು ಕಾಲೇಜು, ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಪಬ್ಲಿಕ್ ಸ್ಕೂಲ್ ಮತ್ತು ಮಹಾರಾಣಿ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ನಿಷೇಧಾಜ್ಞೆ ಹೇರಲಾಗಿದೆ. ಈ ಪ್ರದೇಶಗಳಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದು ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿ ರುವ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಮೈಸೂರು ನಗರ ಪೆÇಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
