ಮೈಸೂರು, ಅ.3(ವೈಡಿಎಸ್)- ಸ್ವರ ಸಾಮ್ರಾಟ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು `ಮುಂದಿನ ಜನ್ಮ ಇದ್ದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ಹೇಳಿದ್ದು ಕೇಳಿ ಸಂತೋಷವಾಯಿತು. ಯಾವುದೇ ಗಾಯಕ ರನ್ನೂ ಅವರಿಗೆ ಸಾಟಿ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಜನಜಾಗೃತಿ ಸೇವಾ ಟ್ರಸ್ಟ್, ಇಂಡಿಯನ್ ಟಿವಿ ಮತ್ತು ಬಸವ ಮಾರ್ಗ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ಆಯೋಜಿಸಿದ್ದ `ಗಾನನಮನ’ ಕಾರ್ಯ ಕ್ರಮದಲ್ಲಿ ಎಸ್‍ಪಿಬಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಎಸ್‍ಪಿಬಿ ಅವರು ಹಲವು ಭಾಷೆಗಳಲ್ಲಿ ಹಾಡಿದ್ದಾರೆಂ ದರೆ ಅದು ದೇವರು ಕೊಟ್ಟ ವರ ಎಂದರು.
ಕೋವಿಡ್ ಇನ್ನೂ ಎಷ್ಟು ಮಂದಿ ಯನ್ನೂ ಬಲಿ ಪಡೆಯುತ್ತದೆಯೋ ಊಹಿ ಸಲು ಸಾಧ್ಯವಿಲ್ಲ. ಎಸ್‍ಪಿಬಿ ಅವರು ಆಸ್ಪತ್ರೆ ಯಲ್ಲಿದ್ದಾಗ ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಸಾಮಾನ್ಯ ಜನರು ಎಸ್‍ಬಿಪಿ ಆರೋಗ್ಯವಾಗಿ ಬರಲಿ ಎಂದು ಪ್ರಾರ್ಥಿಸಿದ್ದರು. ಹೀಗೆ ಎಲ್ಲಾ ಸಮುದಾಯ ದವರು ಪ್ರಾರ್ಥಿಸಿದ್ದು ಎಸ್‍ಪಿಬಿ ಅವರಿಗೆ ಮಾತ್ರ. ಅವರಿಗೆ ಇಂಥ ಸಾವು ಬರಬಾರ ದಿತ್ತು. ಅವರು ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದರು.
ಬಿಜೆಪಿ ಮುಖಂಡ ರಘು ಕೌಟಿಲ್ಯ ಮಾತ ನಾಡಿ, ಸಂಗೀತ ಮನುಷ್ಯನಲ್ಲಿ ಸಾಂಸ್ಕøತಿಕ ಮನಸ್ಸನ್ನು ಬಿತ್ತುತ್ತದೆ. ಸಂಗೀತಗಾರನಿಗೆ ಮಾತ್ರ ಚಿಕಿತ್ಸಕ ಗುಣ ಇರುತ್ತದೆ. ಸಂಗೀತ ಗಾರರಿಗೆ ಭಾಷೆ ಗಡಿಯ ವ್ಯಾಪ್ತಿ ಇರೋದಿಲ್ಲ. ಎಸ್‍ಪಿಬಿ ಅವರ ವಿಶಿಷ್ಟತೆ ಎಂದರೆ ಇಡೀ ದಕ್ಷಿಣ ಭಾರತದಲ್ಲಿ ತಮಿಳುನಾಡಿನಲ್ಲಿ ತಮಿಳು ಸುಪುತ್ರ, ಕರ್ನಾಟಕಕ್ಕೆ ಬಂದರೆ ಕನ್ನಡ ಸುಪುತ್ರ, ಆಂಧ್ರಕ್ಕೆ ಹೋದರೆ ತೆಲುಗು ಸುಪುತ್ರ ಆಗಿರುತ್ತಿದ್ದರು. ಇಡೀ ಭಾರತದಲ್ಲಿ ಪ್ರಜ್ವಲಿಸಿದ ಅಭೂತಪೂರ್ವ ಗಾಯಕ ಎಂದು ಬಣ್ಣಿಸಿದರು.
ಬಿಜೆಪಿ ಮುಖಂಡ ಬಿ.ಪಿ.ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿ, ನಟನೆಗೆ ಡಾ. ರಾಜ್‍ಕುಮಾರ್, ಗಾಯನಕ್ಕೆ ಎಸ್‍ಪಿಬಿ ಮಾದರಿ. ಎಸ್‍ಪಿಬಿ ದಂಪತಿ ಗಾಯಕ ಜೇಸುದಾಸ್ ಪಾದಪೂಜೆ ಮಾಡಿದ್ದರು. ಅಂತಹ ವಿನಯವಂತಿಕೆ ಅವರಲ್ಲಿತ್ತು ಎಂದು ನೆನೆದರು. ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ. ಎಸ್.ರಂಗಪ್ಪ, ಬಿಜೆಪಿ ಮುಖಂಡರಾದ ವೈ.ವಿ.ರವಿಶಂಕರ್, ನೀಲಕಂಠ, ಚಂದ್ರ ಶೇಖರ್, ಇಂಡಿಯನ್ ಟಿವಿ ಸಂಸ್ಥಾಪಕ ಬಸವರಾಜು, ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.