ಗೃಹೇತರ, ವಾಣಿಜ್ಯ, ಕೈಗಾರಿಕಾ ಬಳಕೆ ನೀರಿನ ದರ ಪರಿಷ್ಕರಣೆ ಜನವರಿ 1ರಿಂದ ಜಾರಿಗೆ ಪಾಲಿಕೆ ಆಯುಕ್ತರ ಆದೇಶ
ಮೈಸೂರು

ಗೃಹೇತರ, ವಾಣಿಜ್ಯ, ಕೈಗಾರಿಕಾ ಬಳಕೆ ನೀರಿನ ದರ ಪರಿಷ್ಕರಣೆ ಜನವರಿ 1ರಿಂದ ಜಾರಿಗೆ ಪಾಲಿಕೆ ಆಯುಕ್ತರ ಆದೇಶ

December 31, 2020

ಮೈಸೂರು, ಡಿ.30(ಆರ್‍ಕೆ)-ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಮುಂದಾ ಗಿರುವ ಮೈಸೂರು ಮಹಾನಗರ ಪಾಲಿಕೆಯು ನಾನ್ ಡೊಮೆ ಸ್ಟಿಕ್(ಗೃಹೇತರ), ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯ ನೀರಿನ ದರವನ್ನು ಪರಿಷ್ಕರಿಸಿದೆ. ಪರಿಷ್ಕøತ ದರವು ಜನವರಿ 1ರಿಂದ ಜಾರಿಗೆ ಬರುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. ನೀರನ್ನು ಮಿತವಾಗಿ ಬಳಸಲು ಮತ್ತು ನೀರಿನ ಬಿಲ್ಲನ್ನು ನಿಗದಿತ ಅವಧಿ ಯೊಳಗೆ ಪಾವತಿಸಬೇಕು, ಮೀಟರ್ ದುರಸ್ತಿಯಲ್ಲಿರುವ ಅಥವಾ ಮೀಟರ್ ಇಲ್ಲದೆ ಇರುವವರು ಅಳವಡಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಗೃಹೇತರ ಬಳಕೆ(ನಾನ್ ಡೊಮೆಸ್ಟಿಕ್)ಗೆ 10 ಸಾವಿರ ಲೀಟರ್‍ವರೆಗೆ ಪ್ರತೀ ಸಾವಿರ ಲೀಟರ್‍ಗೆ 16.80 ರೂ, 10,001ರಿಂದ 20,000 ಲೀಟರ್‍ವರೆಗೆ 21.60 ರೂ., 20,001ರಿಂದ 30,000 ಲೀಟರ್‍ವರೆಗೆ 26.40 ರೂ. ಹಾಗೂ 30,001 ಲೀಟರ್ ಗಿಂತ ಮೇಲ್ಪಟ್ಟ ನೀರಿನ ಬಳಕೆಗೆ ಪ್ರತೀ ಸಾವಿರ ಲೀಟರ್‍ಗೆ 31.20 ರೂ. ದರ ನಿಗದಿಪಡಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಬಳಕೆ(ಶುದ್ಧೀಕರಿಸಿದ ನೀರು)ಗೆ 10,000 ಲೀಟರ್‍ವರೆಗೆ ಪ್ರತೀ ಸಾವಿರ ಲೀಟರ್‍ಗೆ 33.60 ರೂ., 10,001 ರಿಂದ 20,000 ಲೀಟರ್‍ವರೆಗೆ 43.20 ರೂ., 20,001ರಿಂದ 30,000 ಲೀಟರ್‍ವರೆಗೆ 52.80 ರೂ., 30,001ಕ್ಕಿಂತ ಮೇಲ್ಪಟ್ಟ ಬಳಕೆಗೆ ಪ್ರತೀ ಸಾವಿರ ಲೀಟರ್‍ಗೆ 62.40 ರೂ. ದರ ನಿಗದಿಪಡಿಸಲಾಗಿದೆ. ಹಾಗೆಯೇ ಕಚ್ಚಾ ನೀರಿಗೆ 8,001ರಿಂದ 15,000 ಲೀಟರ್‍ವರೆಗೆ ಪ್ರತೀ ಸಾವಿರ ಲೀಟರ್‍ಗೆ 30 ರೂ., 15,001ರಿಂದ 25,000 ಲೀಟರ್‍ವರೆಗೆ 40 ರೂ. ಹಾಗೂ 25,001ಕ್ಕಿಂತ ಮೇಲ್ಪಟ್ಟ ಬಳಕೆಗೆ 50 ರೂ. ದರ ನಿಗದಿಪಡಿಸ ಲಾಗಿದೆ. ಗೃಹೇತರ ಬಳಕೆಗೆ ಕನಿಷ್ಠ ದರ 168 ರೂ., ವಾಣಿಜ್ಯ ಮತ್ತು ಕೈಗಾರಿಕೆ ಬಳಕೆ(ಶುದ್ಧೀಕರಿಸಿದ ನೀರು)ಗೆ 336 ರೂ. ಹಾಗೂ ಕಚ್ಛಾ ನೀರಿಗೆ 8,000 ಲೀಟರ್ ವರೆಗೆ 300 ರೂ. ಕನಿಷ್ಠ ದರ ನಿಗದಿಪಡಿಸಲಾಗಿದೆ. ನೀರಿನ ಶುಲ್ಕದ ಶೇ.30ರಂತೆ ಒಳಚರಂಡಿ ಶುಲ್ಕ ಹಾಗೂ ಸಂಪರ್ಕ ಸೇವಾ ಶುಲ್ಕವನ್ನು ಯಥಾಸ್ಥಿತಿ ಮುಂದುವರಿಸ ಲಾಗುವುದು ಎಂದೂ ಪಾಲಿಕೆ ಆಯುಕ್ತರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Translate »