ಸಮಾಜದಲ್ಲಿ ಪುಸ್ತಕ ಓದುವ ಸಂಸ್ಕøತಿ ಮರೆಯಾಗುತ್ತಿದೆ
ಮೈಸೂರು

ಸಮಾಜದಲ್ಲಿ ಪುಸ್ತಕ ಓದುವ ಸಂಸ್ಕøತಿ ಮರೆಯಾಗುತ್ತಿದೆ

December 31, 2020

ಮೈಸೂರು,ಡಿ.30(ಪಿಎಂ)-ಸಮಾಜದಲ್ಲಿ ಇಂದು ಪುಸ್ತಕ ಓದುವ ಸಂಸ್ಕøತಿ ಕಡಿಮೆ ಯಾಗಿದ್ದು, ಬುದ್ಧಿವಂತರಾದಷ್ಟೇ ಸಾಲದು, ಜೊತೆಗೆ ಪುಸ್ತಕ ಓದುವ ಹವ್ಯಾಸದ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಮಾಜಿ ಉನ್ನತ ಶಿಕ್ಷಣ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ಮೈಸೂರಿನ ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬುಧವಾರ ಹಮ್ಮಿ ಕೊಂಡಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರ `ಕಲಾವಲೋಕನ’ ಹಾಗೂ `ಮನೆ-ಮನಗಳ ಕಥೆ’ ಕೃತಿಗಳನ್ನು ಬಿಡು ಗಡೆಗೊಳಿಸಿ ಅವರು ಮಾತನಾಡಿದರು.

ಪ್ರಸ್ತುತ ಪುಸ್ತಕ ಓದುವ ಹವ್ಯಾಸ ಕಡಿಮೆ ಯಾಗುತ್ತಿದೆ. ಬಹುತೇಕ ರಾಜಕಾರಣಿಗಳೂ ಪುಸ್ತಕ ಓದುವ ಹವ್ಯಾಸದಿಂದ ದೂರವಿ ದ್ದಾರೆ. ದೇ.ಜವರೇಗೌಡರು (ದೇಜಗೌ) `ನೀವು ರಾಜಕಾರಣಿಗಳು ಪುಸ್ತಕ ಓದಲ್ಲ. ನೀನು ಬುದ್ಧಿವಂತ ಇದ್ದಿಯಾ, ಅಂಬೇ ಡ್ಕರ್ ವಿಚಾರಧಾರೆ ತಿಳಿದುಕೊಳ್ಳಲು ಪುಸ್ತಕ ಓದು’ ಎಂದು ನನಗೆ ಸಲಹೆ ನೀಡಿದ್ದರು ಎಂದು ಸ್ಮರಿಸಿದರು.

ಶಾಸಕಾಂಗ ಇಂದು ಎಂತಹ ಸ್ಥಿತಿಗೆ ತಲುಪುತ್ತಿದೆ ಎಂದು ಇಡೀ ಸಮಾಜಕ್ಕೆ ಗೊತ್ತಿದೆ. ಇತ್ತೀಚೆಗೆ ಪರಿಷತ್ ಗದ್ದಲ ಎಲ್ಲರೂ ತಲೆ ತಗ್ಗಿಸುವ ವಿಚಾರ. ಮತ್ತೊಂ ದೆಡೆ ಕಾರ್ಯಾಂಗದಲ್ಲೂ ಅಧಿಕಾರಿಗಳು ಪರಸ್ಪರ ಪ್ರತಿಷ್ಠೆ ಮೆರೆಯುವ ಪ್ರಕರಣಗಳು ಕಂಡು ಬರುತ್ತಿವೆ. ನ್ಯಾಯಾಂಗವೂ ಇಂತಹ ದರಿಂದ ಹೊರತಾಗಿಲ್ಲದ ಪರಿಸ್ಥಿತಿ ನಿರ್ಮಾಣ ವಾಗಿದೆ. ಸಮಾಜಕ್ಕೆ ಮಾರ್ಗದರ್ಶನ ನೀಡುವ ಪತ್ರಿಕಾರಂಗಕ್ಕೆ ಇತ್ತೀಚೆಗೆ ಬರು ವವರಲ್ಲಿ ಬಹುತೇಕರು ವೃತ್ತಿಧರ್ಮ, ಕೌಶಲ ಅರಿಯಲು ಆದ್ಯತೆ ನೀಡುತ್ತಿಲ್ಲ. ಆದಾಗ್ಯೂ ಅಂಶಿ ಪ್ರಸನ್ನಕುಮಾರ್ ಅವರಂತಹ ಪತ್ರ ಕರ್ತರಿಂದ ಇಂದಿಗೂ ಪತ್ರಿಕಾ ಧರ್ಮ ಉಳಿದಿದೆ ಎಂದು ತಿಳಿಸಿದರು.

ಆರಂಭದಲ್ಲಿ ನನಗೆ ಚುನಾವಣಾ ರಾಜ ಕಾರಣದಲ್ಲಿ ಆಸಕ್ತಿ ಇರಲಿಲ್ಲ. ರಾಜಕಾರಣ ದಲ್ಲಿ ಸ್ಪರ್ಧೆ ಮಾಡುವುದು ಬೇಡವೆಂದು ಸಹಕಾರ ಸಂಘದ ಕಾರ್ಯದರ್ಶಿ ಕೆಲಸ ದಲ್ಲಿ ತೃಪ್ತಿಯಿಂದಿದ್ದೆ. ವ್ಯವಸಾಯದೊಂ ದಿಗೆ ನಮ್ಮ ಕುಟುಂಬ ಸಾಗುತ್ತಿದೆ ಎನ್ನುವ ಸಮಾಧಾನ ಇದ್ದಿತು. ಇದರ ಆಚೆಗೆ ಯೋಚನೆ ಮಾಡಿರಲಿಲ್ಲ. 1971ರಿಂದ ರಾಜಕೀಯ ಪ್ರವೇ ಶಿಸಿ, ಕೇವಲ ನಾಯಕರ ಪರ ಚುನಾವಣಾ ಪ್ರಚಾರ ಮಾಡುವುದಕ್ಕೆ ಸೀಮಿತಗೊಂಡಿದ್ದೆ. 1978ರಲ್ಲಿ ಅಂದಿನ ತಾಲೂಕು ಬೋರ್ಡ್‍ಗೆ ಒಲ್ಲದ ಮನಸ್ಸಿನಿಂದಲೇ ಸ್ಪರ್ಧಿಸಿದ್ದೆ ಎಂದು ಹಳೇ ನೆನಪು ಮೆಲುಕು ಹಾಕಿದರು.

ಅಂದು ತಾಲೂಕು ಬೋರ್ಡ್, ಗ್ರಾಮ ಪಂಚಾಯಿತಿಯಲ್ಲಿ ನಾವು ಬೆಂಬಲ ನೀಡಿ ಗೆಲ್ಲಿಸಿದವರೆಲ್ಲಾ ಕಾಂಗ್ರೆಸ್‍ಗೆ ಸೇರ್ಪಡೆ ಯಾದರು. ಈ ಸಂದರ್ಭದಲ್ಲಿ ಅನಿವಾರ್ಯ ವಾಗಿ ಒತ್ತಾಯದ ಮೇರೆಗೆ ಮೈಸೂರು ಎಪಿ ಎಂಸಿ ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಇಡೀ ರಾಜ್ಯದಲ್ಲೇ ಮೈಸೂರು ಎಪಿಎಂಸಿ ಯಲ್ಲಿ ಪ್ರಸಿದ್ಧ ವರ್ತಕರು ಇದ್ದರು. ಮೊದಲ ಬಾರಿಗೆ ನಾನು ಎಪಿಎಂಸಿಗೆ ಉಪಾಧ್ಯಕ್ಷನಾದ ಸಂದರ್ಭದಲ್ಲಿ ಅಂಶಿ ಪ್ರಸನ್ನಕುಮಾರ್ ಪತ್ರಿ ಕೋದ್ಯಮಕ್ಕೆ ಬಂದವರು. ಅವರು ಎಪಿಎಂಸಿಗೆ ವರದಿಗಾಗಿ ಭೇಟಿ ನೀಡುತ್ತಿದ್ದರು ಎಂದರು. `ಕಲಾವಲೋಕನ’ ಕೃತಿ ಕುರಿತು ಹಿರಿಯ ರಂಗಕರ್ಮಿ ಪ್ರೊ. ಹೆಚ್.ಎಸ್.ಉಮೇಶ್, `ಮನೆ-ಮನಗಳ ಕಥೆ’ ಕೃತಿ ಕುರಿತು ಸಹಾ ಯಕ ಪ್ರಾಧ್ಯಾಪಕ ಗೋವಿಂದರಾಜು ಲಕ್ಷ್ಮೀ ಪುರ ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಹಿಮಾ ಪ್ರಕಾಶನದ ಪ್ರಕಾಶಕ ಶ್ರೀನಿವಾಸ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕೋಶಾಧ್ಯಕ್ಷ ರಾಜಶೇಖರ ಕದಂಬ, ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಕೃತಿಗಳ ಕರ್ತೃ ಅಂಶಿ ಪ್ರಸನ್ನಕುಮಾರ್ ಮತ್ತಿತರರು ಹಾಜರಿದ್ದರು.

 

 

Translate »