ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಅಭಿಯಾನ
ಮೈಸೂರು

ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಅಭಿಯಾನ

January 22, 2021

ಮೈಸೂರು, ಜ.21(ಪಿಎಂ)- ಮೇಟಗಳ್ಳಿ ಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ (ಜಿಲ್ಲಾ ಕೋವಿಡ್ ಆಸ್ಪತ್ರೆ) ಗುರುವಾರ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿಗೆ ಕೊರೊನಾ ತಡೆ ಲಸಿಕೆ (ಕೋವಿಶೀಲ್ಡ್) ಹಾಕಲಾಯಿತು.

ಗುರುವಾರದಿಂದ 3 ದಿನಗಳು ಈ ಲಸಿಕೆ ನೀಡುವ ಅಭಿಯಾನ ನಡೆಯಲಿದ್ದು, ಮೊದಲ ದಿನವಾದ ಇಂದು ಆಸ್ಪತ್ರೆಯಲ್ಲಿ 3 ಲಸಿಕಾ ಕೇಂದ್ರಗಳನ್ನು ವ್ಯವಸ್ಥೆಗೊಳಿಸಿ, 100 ಮಂದಿಗೆ ಲಸಿಕೆ ನೀಡಲಾಯಿತು. ಅಂತೆಯೇ ದಿನಕ್ಕೆ 100 ಮಂದಿಯಂತೆ ಇನ್ನು 2 ದಿನದಲ್ಲಿ ಆಸ್ಪತ್ರೆಯ ಎಲ್ಲಾ ಸಿಬ್ಬಂ ದಿಗೂ ಲಸಿಕೆ ನೀಡುವ ಗುರಿ ಹೊಂದ ಲಾಗಿದೆ. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿ ಸುವ ಎಲ್ಲಾ ದರ್ಜೆಯ ಸಿಬ್ಬಂದಿ ಮಾತ್ರವ ಲ್ಲದೆ, ವಿವಿಧೆಡೆ ಕಾರ್ಯನಿರ್ವಹಿಸುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗೂ ಇಲ್ಲಿ ಲಸಿಕೆ ನೀಡಲು ಗುರಿ ಹೊಂದಲಾಗಿದೆ. ಒಟ್ಟಾರೆ ಆಸ್ಪತ್ರೆಯಲ್ಲಿ ಎಲ್ಲಾ 300 ಮಂದಿಗೆ ಈ ಮೊದಲ ಹಂತದ ಅಭಿಯಾನದಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಲಾಖೆ ಉಪ ನಿರ್ದೇಶಕರಾದ ಡಾ.ರಾಮಚಂದ್ರ, ಡಾ. ಪ್ರಸಾದ್ ಸೇರಿದಂತೆ ಆಸ್ಪತ್ರೆಯ ಎಲ್ಲಾ 30 ವೈದ್ಯರಿಗೂ ಇಂದು ಲಸಿಕೆ ನೀಡ ಲಾಯಿತು. ಜಿಲ್ಲಾ ಸರ್ಜನ್ ಡಾ.ಹೆಚ್.ಆರ್. ರಾಜೇಶ್ವರಿದೇವಿ, ಜಿಲ್ಲಾ ಸ್ಪತ್ರೆ ಆರ್‍ಎಂಓ (ಸ್ಥಾನಿಕ ವೈದ್ಯಾಧಿಕಾರಿ) ಡಾ.ಎಂ.ಐ.ನಯಾಜ್ ಪಾಷ ನೇತೃತ್ವದಲ್ಲಿ ಲಸಿಕೆ ನೀಡುವ ಕಾರ್ಯ ನಡೆಯಿತು. `ಕೋ-ವಿನ್’ ಆಪ್‍ನಲ್ಲಿ ಲಸಿಕೆ ಪಡೆದವರು ದತ್ತಾಂಶ ದಾಖಲಿಸುವ ಪ್ರಕ್ರಿಯೆ ಸೇರಿದಂತೆ ಮಾರ್ಗಸೂಚಿ ಅನ್ವಯ ಲಸಿಕೆ ನೀಡುವ ಅಭಿಯಾನ ನಡೆಯಿತು. ಆಸ್ಪತ್ರೆ ವೈದ್ಯರಾದ ಡಾ.ತ್ರಿವೇಣಿ, ಡಾ.ಪದ್ಮಾ, ಡಾ. ಅರವಿಂದ್, ಡಾ.ಮೋಹನ್, ಡಾ.ಸತ್ಯಪ್ರಕಾಶ್ ಲಸಿಕಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

Translate »