ಕೃಷಿ ಕಾಯ್ದೆ ವಿರುದ್ಧ ಜ.26ರಂದು ಬೆಂಗಳೂರಲ್ಲಿ ರೈತರ ಬೃಹತ್ ರ್ಯಾಲಿ
ಮೈಸೂರು

ಕೃಷಿ ಕಾಯ್ದೆ ವಿರುದ್ಧ ಜ.26ರಂದು ಬೆಂಗಳೂರಲ್ಲಿ ರೈತರ ಬೃಹತ್ ರ್ಯಾಲಿ

January 22, 2021

ಮೈಸೂರು, ಜ.21(ಆರ್‍ಕೆಬಿ)- ಕೇಂದ್ರ ಸರ್ಕಾ ರದ ಕೃಷಿ ಕಾಯಿದೆ ವಿರೋಧಿಸಿ ಎರಡು ತಿಂಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ, ರಾಜ್ಯದ ರೈತರು ಜ.26ರಂದು ಬೆಂಗ ಳೂರಿನಲ್ಲಿ ಪರೇಡ್ ನಡೆಸಲಿದ್ದೇವೆ ಎಂದು ಕರ್ನಾ ಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯಾ ಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇಂದಿಲ್ಲಿ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ಮೂರು ಕೃಷಿ ಕಾಯಿದೆ ವಿರುದ್ಧ ದೆಹಲಿಯಲ್ಲಿ ರೈತರು ಪ್ರತಿ ಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರ ಇದುವರೆಗೆ ನಡೆಸಿದ 10 ಸುತ್ತಿನ ಮಾತುಕತೆಗಳೆಲ್ಲವೂ ವಿಫಲ ವಾಗಿವೆ. ಬುಧವಾರ ನಡೆದ 10ನೇ ಸುತ್ತಿನ ಮಾತು ಕತೆಯಲ್ಲಿ ಕೃಷಿ ಕಾನೂನುಗಳನ್ನು ಮುಂದಿನ ಒಂದೂ ವರೆ ವರ್ಷಗಳ ಕಾಲ ಅಮಾನತಿನಲ್ಲಿಡುವ ಬಗ್ಗೆ ಪ್ರಸ್ತಾಪವನ್ನಿಟ್ಟಿದೆ. ಆದರೆ ನಮಗೆ ಅದು ಒಪ್ಪಿಗೆಯಿಲ್ಲ. ಮೂರು ಕಾನೂನುಗಳನ್ನು ಸಂಪೂರ್ಣವಾಗಿ ರದ್ದು ಮಾಡಬೇಕೆಂ ಬುದೇ ನಮ್ಮ ಪ್ರಮುಖ ಆಗ್ರಹ ಮತ್ತು ಬೇಡಿಕೆಯಾಗಿದೆ ಎಂದು ಹೇಳಿದರು.

ದೆಹಲಿಯ ರೈತರು ಹೋರಾಟದ ಭಾಗವಾಗಿ ಜ.26ರಂದು ಬೃಹತ್ ಜನ ಗಣರಾಜ್ಯೋತ್ಸವ ಪರೇಡ್ ನಡೆಸಲಿ ದ್ದಾರೆ. ಪ್ರಧಾನಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ನಂತರ ದೆಹಲಿಯಲ್ಲಿ ರ್ಯಾಲಿ ನಡೆಯಲಿದೆ. ಅದೇ ವೇಳೆ ರಾಜ್ಯದಲ್ಲಿಯೂ ಮುಖ್ಯಮಂತ್ರಿಗಳು ಧ್ವಜಾರೋಹಣ ನೆರವೇರಿಸಿ, ಭಾಷಣ ಮಾಡಿದ ಬಳಿಕ ರಾಜ್ಯದ ರೈತರು ಬೆಂಗಳೂರು-ತುಮ ಕೂರು ರಸ್ತೆಯ ನೈಸ್ ಜಂಕ್ಷನ್‍ನಿಂದ ಪರೇಡ್ ಆರಂಭಿಸಿ, ಫ್ರೀಡಂ ಪಾರ್ಕ್ ತಲುಪಲಿದೆ. 8ರಿಂದ 10 ಸಾವಿರ ವಾಹನ ಗಳಲ್ಲಿ 25 ಸಾವಿರ ರೈತರು ಸ್ತಬ್ಧಚಿತ್ರಗಳ ಸಹಿತ, ರಾಷ್ಟ್ರಧ್ವಜ ಹಾಗೂ ಹಸಿರು ಬಾವುಟ ಹಿಡಿದು 17-18 ಕಿ.ಮೀ. ಜಾಥಾ ನಡೆಸಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ, ಜನವಿರೋಧಿ ಕಾನೂನುಗಳನ್ನು ಜಾರಿ ಮಾಡಿವೆ. ಶ್ರೀಮಂತರ ಕೈಗೆ ಕೃಷಿ, ಕೃಷಿ ಮಾರುಕಟ್ಟೆ, ಬಿತ್ತನೆ ಬೀಜದ ಪೇಟೆಂಟ್ ನೀಡಿ ರೈತರನ್ನು ಶೋಷಣೆಗೆ ಒಳಪಡಿಸುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ರೈತರ ಪರೇಡ್‍ಗೆ ಅವಕಾಶ ನೀಡದಿದ್ದರೆ ನಮ್ಮ ಹಕ್ಕು, ಸ್ವಾತಂತ್ರ್ಯ ಮತ್ತು ಅಸ್ತಿತ್ವ ಕ್ಕಾಗಿ ಅಹಿಂಸಾ ಮಾರ್ಗದಲ್ಲಿ ಬಾವುಟ ಹಿಡಿದು ಶಾಂತಿ ಯುತವಾಗಿ 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಸಲಾಗು ವುದು. ಸರ್ಕಾರ ಅವಕಾಶ ನೀಡದಿದ್ದರೆ ಎಲ್ಲೆಲ್ಲಿ ರೈತರನ್ನು ತಡೆಯಲಾಗುತ್ತದೆಯೋ ಅಲ್ಲಲ್ಲಿಯೇ ಪ್ರತಿಭಟನೆ ನಡೆಸಲು ರೈತರಿಗೆ ಕರೆ ನೀಡಲಾಗಿದೆ ಎಂದು ಎಚ್ಚ ರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭೈರೇಗೌಡ, ಜಿಲ್ಲಾಧ್ಯಕ್ಷ ಬೆಟ್ಟೇಗೌಡ, ಮುಖಂಡರಾದ ರಂಗನಾಥ್, ಬಸವೇ ಗೌಡ, ಆನಂದಪಾಟೀಲ್ ಇನ್ನಿತರರು ಉಪಸ್ಥಿತರಿದ್ದರು.

Translate »