ಅಪೊಲೋ ಬಿಜಿಎಸ್ ಆಸ್ಪತ್ರೆಗಳಲ್ಲಿ ಲಸಿಕಾ ಮೆಗಾ ಅಭಿಯಾನ
ಮೈಸೂರು

ಅಪೊಲೋ ಬಿಜಿಎಸ್ ಆಸ್ಪತ್ರೆಗಳಲ್ಲಿ ಲಸಿಕಾ ಮೆಗಾ ಅಭಿಯಾನ

July 1, 2021

ಮೈಸೂರು,ಜೂ.30(ಆರ್‍ಕೆ)-ಮೈಸೂರು ಸೇರಿದಂತೆ ರಾಜ್ಯ ಹಾಗೂ ದೇಶದಾದ್ಯಂತ ಎಲ್ಲಾ ಅಪೊಲೋ ಬಿಜಿಎಸ್ ಆಸ್ಪತ್ರೆಗಳಲ್ಲಿ ಬುಧವಾರ ಕೊರೊನಾ ಲಸಿಕೆ ಮೆಗಾ ಅಭಿಯಾನ ನಡೆಯಿತು.

ಕೋವಿಶೀಲ್ಡ್‍ಗೆ 780 ರೂ., ಕೋವ್ಯಾಕ್ಸಿನ್ ಲಸಿಕೆಗೆ 1,410 ರೂ.ನಂತೆ ಸರ್ಕಾರ ನಿಗದಿ ಪಡಿಸಿರುವ ದರದಲ್ಲಿ ಎಲ್ಲಾ ವಯಸ್ಸಿನ ಅರ್ಹ ಸಾರ್ವಜನಿ ಕರಿಗೆ ಲಸಿಕೆ ನೀಡಲಾಯಿತು. ಆನ್‍ಲೈನ್‍ನಲ್ಲಿ ಬುಕ್ ಮಾಡಿ ದವರು ಹಾಗೂ ಸ್ಥಳದಲ್ಲೇ ನೋಂದಣಿ ಮಾಡಿಸಿ, ಜನ ರಿಗೆ ಅಪೊಲೋ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಯಿತು. ಬೆಳಗ್ಗೆ 9.30ರಿಂದ ರಾತ್ರಿ 7.30 ಗಂಟೆ ವರೆಗೂ ಮೈಸೂರಿನ ಬಿಜಿಎಸ್ ಅಪೊಲೋ ಪ್ರಧಾನ ಆಸ್ಪತ್ರೆ, ಕುವೆಂಪುನಗರದ ಗಾನ ಭಾರತಿ ಬಳಿಯ ಶಾಖಾ ಕೇಂದ್ರ ಹಾಗೂ ಟೈಅಪ್ ಮಾಡಿಕೊಂಡಿರುವ ಜಯಲಕ್ಷ್ಮೀ ಪುರಂನ ಬೃಂದಾವನ ಆಸ್ಪತ್ರೆಯಲ್ಲಿ ನಿರಂತರವಾಗಿ ಕೋವಿಡ್-19 ಲಸಿಕೆ ಅಭಿಯಾನ ನಡೆಯಿತು. ಮೈಸೂರಲ್ಲಿ ಇಂದು ಒಂದೇ ದಿನ 15,000 ಡೋಸ್ ಲಸಿಕೆ ನೀಡುವ ಗುರಿ ಹೊಂದಿದ್ದು, ದೇಶದ ಎಲ್ಲಾ ಅಪೊಲೋ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಯಿತು ಎಂದು ಆಸ್ಪತ್ರೆಯ ಚೀಫ್ ಆಪರೇಟಿಂಗ್ ಆಫೀಸರ್ ರವಿಕುಮಾರ್ ತಿಳಿಸಿದ್ದಾರೆ.
ಮಹಾರಾಣಿ ಕಾಲೇಜು: ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಸರ್ಕಾರಿ ವ್ಯವಹಾರ ನಿರ್ವಹಣಾ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರಿಗೆ ಕೊರೊನಾ ಪರೀಕ್ಷೆ ಮಾಡಿ, ಲಸಿಕೆ ನೀಡಲಾಯಿತು.

ಶಾಸಕ ಎಲ್. ನಾಗೇಂದ್ರ ಅವರು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಬಿಕಾಂ., ಬಿಬಿಎಂ, ಎಂಕಾಂ ಹಾಗೂ ಎಂಬಿಎ ವಿದ್ಯಾರ್ಥಿನಿಯರು ಇಂದು ಲಸಿಕೆ ಪಡೆದುಕೊಂಡರು. ಅದೇ ರೀತಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪದವಿ ಕಾಲೇಜುಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯ್ತಿ ಮತ್ತು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಲಸಿಕಾ ಪ್ರಕ್ರಿಯೆ ನಡೆಸಿದರು.

Translate »