`ಕಲೆ-ಸಾಹಿತ್ಯದಿಂದ ಮೌಲ್ಯಯುತ ಸಮಾಜ ನಿರ್ಮಾಣ’
ಮೈಸೂರು

`ಕಲೆ-ಸಾಹಿತ್ಯದಿಂದ ಮೌಲ್ಯಯುತ ಸಮಾಜ ನಿರ್ಮಾಣ’

February 28, 2021

ಮೈಸೂರು, ಫೆ.27(ಎಸ್‍ಪಿಎನ್)- ಶಾಂತಿ ಮತ್ತು ಮೌಲ್ಯಯುತ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರನ್ನೂ ಒಳಗೊಳ್ಳುವ ಕಲೆ-ಸಾಹಿತ್ಯವನ್ನು ಹೆಚ್ಚು ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯ ಎಂದು ಪ.ಮಲ್ಲೇಶ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರು ಕಲಾಮಂದಿರ ಆವ ರಣದ ಚಿಂತಕರ ಚಾವಡಿಯಲ್ಲಿ `ಅಪ ರ್ಯಾಪ್ತ’ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ `ಮೆಹಫಿಲ್-ಎ-ಸೋಫಿಯಾನಾ’ ರಸಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೂಪಿ-ಸಂತರ ಇತಿಹಾಸಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಶಾಂತಿ ಸಂದೇಶ ಸಾರುವ ಸಮೂಹ ಗೀತೆಗಳನ್ನು ಇಲ್ಲಿನ ಯುವ ತಂಡ ಎಲ್ಲರನ್ನೂ ಆಕರ್ಷಿ ಸುವಂತೆ ಹಾಡುತ್ತಿದೆ. ಇಂಥ ಯುವ ಸಮೂಹ ರಾಜ್ಯಾದ್ಯಂತ ಸಂಚರಿಸಿದರೆ ಸಮಾಜದಲ್ಲಿನ ಅಶಾಂತಿ ಹೋಗಲಾಡಿಸಲು ಸಹಕಾರಿಯಾಗುತ್ತದೆ ಎಂದರು.

ಕಬೀರ್‍ದಾಸರು, ಖುಸ್ರೋ, ಇತರೆ ದಾಸವರೇಣ್ಯರ ಹಾಡುಗಳನ್ನು ಕೇಳಿದರೆ ಇಂದಿಗೂ ರೋಮಾಂ ಚನವಾಗುತ್ತದೆ. ಇತ್ತೀಚೆಗೆ ಇಂಥ ಸಮೂಹ ಗಾಯನ ದವರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವಕರಲ್ಲಿ ಮೌಲ್ಯಗಳು ಇಲ್ಲವಾಗುತ್ತಿವೆ. ಹಾಗಾಗಿ ಇಂಥ ಕಾರ್ಯ ಕ್ರಮಗಳನ್ನು ಹೆಚ್ಚು ಆಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು. ಈ ವೇಳೆ ಯುವ ಕಲಾವಿದೆ ಆರ್‍ಜೆ ರಶ್ಮಿ, ಸಂಚಲನ ಸಂಸ್ಥೆಯ ದೀಪಕ್ ಮೈಸೂರು, ಕನ್ನಡ-ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ ಉಪಸ್ಥಿತರಿದ್ದರು. ಈ ಕಾರ್ಯ ಕ್ರಮದಲ್ಲಿ ಕಲಾವಿದರಾದ ಕೃಷ್ಣ ಚೇತನ (ತಬಲ), ಸುಬ್ರಹ್ಮಣ್ಯರಾವ್ ಮತ್ತು ಸುಮುಖರಾವ್ (ಡೋಲಕ್), ಗುರುರಾಜ್, ಭರತ ಭಟ್, ಸುನೀಲ್, ಲಾಸ್ಯ, ನಿಶ್ಚಿತ, ವಿಷ್ಣು ವಸಿಷ್ಠ, ಉದಯ್, ನುಸ್ರತ್ ಸಾಥ್ ನೀಡಿದ್ದಾರೆ.

Translate »