ಗ್ರಾಪಂ ಅಧ್ಯಕ್ಷ, ಪಿಡಿಒ ಸಮನ್ವಯ ಕಾರ್ಯದಿಂದ ಗ್ರಾಮಾಭಿವೃದ್ಧಿ
ಮೈಸೂರು

ಗ್ರಾಪಂ ಅಧ್ಯಕ್ಷ, ಪಿಡಿಒ ಸಮನ್ವಯ ಕಾರ್ಯದಿಂದ ಗ್ರಾಮಾಭಿವೃದ್ಧಿ

February 28, 2021

ಮೈಸೂರು, ಫೆ.27(ಎಂಟಿವೈ)- ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾ ಯತ್ ಅಭಿವೃದ್ಧಿ ಅಧಿಕಾರಿಗಳು(ಪಿಡಿಒ) ಸಮನ್ವಯದಿಂದ ಗ್ರಾಮಗಳ ಸಮಗ್ರ ಅಭಿ ವೃದ್ಧಿಗೆ ಶ್ರಮಿಸಬೇಕು. ಶಾಲೆ, ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ರೂಪಿಸಿ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮೈಸೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಕೃಷ್ಣಕುಮಾರ್ ಸೂಚಿಸಿದ್ದಾರೆ.

ಅಬ್ದುಲ್ ನಜೀರ್‍ಸಾಬ್ ರಾಜ್ಯ ಗ್ರಾಮೀ ಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಮೈಸೂರು ತಾಪಂ ಆಡಳಿತವು ಚಾಮುಂಡಿ ಬೆಟ್ಟ, ವರಕೋಡು, ಸಿದ್ದಲಿಂಗಪುರ ಗ್ರಾಪಂ ಗಳ ನೂತನ ಸದಸ್ಯರಿಗೆ ಆಯೋಜಿಸಿದ್ದ ಸಾಮಥ್ರ್ಯ ಅಭಿವೃದ್ಧಿ ತರಬೇತಿ ಕಾರ್ಯಾ ಗಾರದಲ್ಲಿ ಕೃಷ್ಣಕುಮಾರ್ ಮಾತನಾಡಿದರÀು.

ಗ್ರಾ.ಪಂ ಸದಸ್ಯರು ಸುಲಲಿತ ಆಡಳಿತ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ರೂಪಿಸ ಬೇಕು. ಹಣದ ಅಗತ್ಯವಿರುವ, ಹಣವಿಲ್ಲದೇ ಮಾಡಬಹುದಾದ ಕಾರ್ಯಕ್ರಮಗಳನ್ನು ವಿಭಜಿಸಿಕೊಳ್ಳಬೇಕು. ರಸ್ತೆ, ಕುಡಿಯುವ ನೀರು, ವಿದ್ಯುತ್, ಶಾಲೆ, ಅಂಗನವಾಡಿ ಬೀದಿದೀಪ ನಿರ್ವಹಣೆ, ವಾಟರ್ ಮೀಟರ್ ಅಳವಡಿಕೆ, ಸ್ಮಾರ್ಟ್ ಎಲ್‍ಇಡಿ ಅಳವಡಿಕೆ ಅನುದಾನ ಮೀಸಲಿರಿಸಿ ಮಾಡಬೇಕಾದ ಕಾರ್ಯಕ್ರಮಗಳಾಗಿವೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದು, ವೃದ್ಧಾಪ್ಯ, ವಿಧವಾ ವೇತನಕ್ಕೆ ನೆರವು, ಆಧಾರ್ ಕಾರ್ಡ್, ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿ ಕೊಡುವುದು, ಜಾತಿ-ಮರಣ ಪ್ರಮಾಣಪತ್ರ ಹಣವಿಲ್ಲದೆ ಮಾಡುವ ಕಾರ್ಯಕ್ರಮಗಳಾ ಗಿವೆ. ಹೀಗೆ ಕಾರ್ಯಕ್ರಮಗಳನ್ನು ನಡೆಸು ವಂತೆ ಸಲಹೆ ನೀಡಿದರು. ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡಬೇಕು. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮ ಕೈಗೊಳ್ಳಬೇಕು. ಚರಂಡಿ ಹೂಳೆತ್ತಿಸಿ ಮಳೆನೀರು ಸರಾಗ ಹರಿದು ಹೋಗುವಂತೆ ಮಾಡಬೇಕು. ಮಳೆಗಾಲ ಆರಂಭಕ್ಕೂ ಮುನ್ನ ಶಿಥಿಲ ವಿದ್ಯುತ್ ಕಂಬ ಗಳನ್ನು ಬದಲಿಸಬೇಕು. ಅಪಘಾತ ತಡೆ ಗಟ್ಟಲು ರಸ್ತೆ ತಿರುವಲ್ಲಿ ಪೊದೆಗಳನ್ನು ತೆರವು ಗೊಳಿಸÀಬೇಕು. ದಸರಾದೊಳಗೆ ಘನ-ದ್ರವ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಬೇಕು. ಕಸ ವಿಂಗಡಣೆ, ಸಂಗ್ರಹಣೆ ಕ್ರಮ ಜಾರಿಗೆ ತರಬೇಕು. ಗ್ರಾಮೀಣ ಪ್ರದೇಶದಲ್ಲೂ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದ್ದು, ಪ್ಲಾಸ್ಟಿಕ್ ದುಷ್ಪರಿಣಾಮ ಕುರಿತು ಅರಿವು ಮೂಡಿಸಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಸ್ಯಾಮುಯಲ್, ಲೋಕೇಶ್, ನಾಗರಾಜ್, ಗಿರೀಶ್, ಚಾಮುಂಡಿ ಬೆಟ್ಟ ಗ್ರಾ.ಪಂ ಅಧ್ಯಕ್ಷ ಭರತ್ ಕಾಳಯ್ಯ, ಸಿದ್ದಲಿಂಗಪುರ ಗ್ರಾಪಂ ಅಧ್ಯಕ್ಷೆ ಶಕುಂ ತಲಾ, ವರಕೋಡು ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಜರಿದ್ದರು. ಎಲ್ಲಾ ಸದಸ್ಯ ರಿಗೂ ಪ್ರಮಾಣಪತ್ರ ವಿತರಿಸÀಲಾಯಿತು.

Translate »