ಉತ್ಪಾದಿತ ಪರ್ಯಾಯ ಮರಳಿನ ಅರಿವು ಮೂಡಿಸಲು ಡಿಸಿ ಸೂಚನೆ
ಮೈಸೂರು

ಉತ್ಪಾದಿತ ಪರ್ಯಾಯ ಮರಳಿನ ಅರಿವು ಮೂಡಿಸಲು ಡಿಸಿ ಸೂಚನೆ

February 28, 2021

ಮೈಸೂರು,ಫೆ.27-ಪಟ್ಟಾ ಜಮೀನಿನಲ್ಲಿ ನೈಸರ್ಗಿಕ ಮರಳಿನ ಲಭ್ಯತೆ ಕಡಿಮೆ ಇರುವ ಕಾರಣ ಅದಕ್ಕೆ ಪರ್ಯಾಯವಾಗಿ ಉತ್ಪಾದಿತ (ಎಂ ಸ್ಯಾಂಡ್-ಪ್ಲಾಸ್ಟರಿಂಗ್ ಸ್ಯಾಂಡ್ ಮತ್ತು ಕಾಂಕ್ರೀಟ್ ಸ್ಯಾಂಡ್) ಮರಳಿನ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 20 ಕ್ರಷರ್ ಘಟಕಗಳಿಗೆ ಅನುಮತಿ ನೀಡ ಲಾಗಿದ್ದು, ಅವುಗಳಲ್ಲಿ 16 ಕ್ರಷರ್ ಘಟಕಗಳಲ್ಲಿ ಎಂ-ಸ್ಯಾಂಡ್ ಮರಳು ಉತ್ಪಾದಿಸ ಲಾಗುತ್ತಿದೆ. ಎಂ-ಸ್ಯಾಂಡ್ ಮರಳು ಕಟ್ಟಡ ಮತ್ತು ಇತರೆ ಕಾಮಗಾರಿಗೆ ಸೂಕ್ತವಾಗಿದ್ದು, ನೈಸರ್ಗಿಕ ಮರಳಿಗಿಂತ ಕಡಿಮೆ ದರದಲ್ಲಿ ಸಿಗಲಿದೆ. ಎಂ-ಸ್ಯಾಂಡ್ ಮರಳು ವೈಜ್ಞಾನಿಕ ವಾಗಿ ಗ್ರೇಡ್ ಮಾಡಿರುವ ಕಾರಣ ಐ.ಐ.ಎಸ್.ಸಿ ಸಂಶೋಧನಾ ವರದಿಯಂತೆ ನದಿ ಮರಳಿಗಿಂತ ಎಂ-ಸ್ಯಾಂಡ್ ಮರಳು ಹೆಚ್ಚು ಗುಣಮಟ್ಟ ಹೊಂದಿದೆ ಎಂದು ಹೇಳಿದರು.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ನದಿ ಪಾತ್ರದಲ್ಲಿ ಅಕ್ರಮ ವಾಗಿ ಮರಳನ್ನು ತೆಗೆದು ಸಾಗಾಣಿಕೆ ಮಾಡುವವರಿಗೆ ಹಾಗೂ ಮಾರಾಟ ಮಾಡು ವವರ ವಿರುದ್ಧ ಪ್ರಕರಣ ದಾಖಲಿಸಿ, ವಾಹನಗಳನ್ನು ಜಪ್ತಿ ಮಾಡಲಾಗುವುದು. ಈ ಪ್ರಕರಣಗಳಲ್ಲಿ ಕಠಿಣವಾದ ಶಿಕ್ಷೆಗಳಿವೆ ಎಂದು ಎಚ್ಚರಿಸಿದರು. ಸಭೆಯಲ್ಲಿ ಗಣಿ ಇಲಾಖೆ ಹಿರಿಯ ಭೂವಿಜ್ಞಾನಿ ದ್ವಿತೀಯಾ, ಭೂವಿಜ್ಞಾನಿಗಳಾದ ಅಮೃತಾ, ಜೀವನ್, ನಂದಿನಿ, ಹುಣಸೂರು ಉಪವಿಭಾಗಾಧಿಕಾರಿ ಯದುಗಿರೀಶ್, ಮೈಸೂರು ಉಪವಿಭಾಗಾ ಧಿಕಾರಿ ರಾಜಶೇಖರ, ಅರಣ್ಯ ಇಲಾಖೆ ಎಸಿಎಫ್ ಅನುಷಾ ಇತರರು ಹಾಜರಿದ್ದರು.

Translate »