ಇ-ಕಾಮರ್ಸ್ ಸಂಸ್ಥೆ ಡೆಲಿವರಿ ಬಾಯ್‍ನ 41,000 ರೂ. ಮೌಲ್ಯದ ವಸ್ತು ಕಳವು
ಮೈಸೂರು

ಇ-ಕಾಮರ್ಸ್ ಸಂಸ್ಥೆ ಡೆಲಿವರಿ ಬಾಯ್‍ನ 41,000 ರೂ. ಮೌಲ್ಯದ ವಸ್ತು ಕಳವು

June 12, 2018

ಮೈಸೂರು: ಗ್ರಾಹಕರಿಗೆ ವಸ್ತುಗಳನ್ನು ತಲುಪಿಸಲು ತೆರಳಿ ದಾಗ ಇ-ಕಾಮರ್ಸ್ ಸಂಸ್ಥೆಗೆ ಸೇರಿದ ಡೆಲಿವರಿ ಬಾಯ್ ಇರಿಸಿದ್ದ 41,000 ರೂ. ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಅನ್ನು ಹೊತ್ತೊಯ್ದಿ ರುವ ಘಟನೆ ಮೈಸೂರಿನ ವಿದ್ಯಾ ರಣ್ಯಪುರಂನ ರೈಲ್ವೆ ಬಡಾವಣೆಯಲ್ಲಿ ಕಳೆದ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಗಿರೀಶ್ ಬಾಬು ಎಂಬವರೇ ವಸ್ತು ಕಳೆದುಕೊಂಡ ಡೆಲಿವರಿ ಬಾಯ್. ಬ್ಯಾಗ್‍ನಲ್ಲಿದ್ದ 41,000 ರೂ. ಮೌಲ್ಯದ 31 ಬಗೆಯ ವಸ್ತುಗಳನ್ನು ಹಾಡಹಗಲೇ ಕಳವು ಮಾಡಲಾಗಿದೆ. ವಸ್ತುಗಳಿದ್ದ ಬ್ಯಾಗ್‍ಇದ್ದ ಬೈಕ್ ಅನ್ನು ಅಪಾರ್ಟ್ ಮೆಂಟ್ ವೊಂದರ ಮುಂದೆ ನಿಲ್ಲಿಸಿ ಬೇರೆ ವಸ್ತು ಡೆಲಿವರಿ ಮಾಡಲು ಗಿರೀಶ್ ಬಾಬು ಮೊದಲ ಮಹಡಿಗೆ ಹೋಗಿದ್ದಾಗ ಶನಿವಾರ ಮಧ್ಯಾಹ್ನ 12.50 ಗಂಟೆ ವೇಳೆ ಬ್ಯಾಗನ್ನು ಯಾರೋ ಎಗರಿಸಿ ಪರಾರಿ ಯಾಗಿದ್ದಾರೆ. ಗಿರೀಶ್ ವಾಪಸ್ ಬಂದಾಗ ಬೈಕ್‍ನಲ್ಲಿದ್ದ ಬ್ಯಾಗ್ ನಾಪತ್ತೆಯಾಗಿದ್ದ ರಿಂದ ಅಕ್ಕಪಕ್ಕ ನೋಡಿದರೂ ಯಾರೂ ಕಾಣಿಸದ ಕಾರಣ ವಿದ್ಯಾರಣ್ಯಪುರಂ ಠಾಣೆಗೆ ತೆರಳಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಇನ್‍ಸ್ಪೆಕ್ಟರ್ ಓಂಕಾರಪ್ಪ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.

ಕಳವಾಯಿತೆನ್ನಲಾದ ಸ್ಥಳದಲ್ಲಿ ಸಿಸಿ ಕ್ಯಾಮರಾಗಳಿಲ್ಲವಾದ್ದರಿಂದ ಕಳ್ಳನ ಸುಳಿವು ಸಿಗುತ್ತಿಲ್ಲ. ಆದರೂ ನಾವು ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದೇವೆ ಎಂದು ಇನ್‍ಸ್ಪೆಕ್ಟರ್ ಓಂಕಾರಪ್ಪ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಜೂನ್ 2ರಂದು ಉದಯಗಿರಿಯ ನೆಹರು ಪಾರ್ಕ್ ಬಳಿ ರಾಜೇಶ್ ಎಂಬ ಡೆಲಿವರಿ ಬಾಯ್‍ನಿಂದ ಮೊಬೈಲ್ ಕಿತ್ತು ಪರಾರಿಯಾಗಿದ್ದ ಪ್ರಕರಣದ ಬೆನ್ನಲ್ಲೇ ಇದೀಗ ಅಂತಹದೇ ಪ್ರಕರಣ ಮರುಕಳಿಸಿರುವುದರಿಂದ ಡೆಲಿವರಿ ಬಾಯ್‍ಗಳನ್ನೇ ಟಾರ್ಗೆಟ್ ಮಾಡುತ್ತಿರುವ ಗ್ಯಾಂಗ್ ಮೈಸೂರಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಶಂಕಿಸಲಾಗಿದೆ.

Translate »