ವಂದಿತಾ ಶರ್ಮ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ
ಮೈಸೂರು

ವಂದಿತಾ ಶರ್ಮ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ

May 28, 2022

ಬೆಂಗಳೂರು- ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮ ಅವರು ನೇಮಕ ವಾಗಿದ್ದಾರೆ. ಈ ಸಂಬAಧ ಶುಕ್ರ ವಾರ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇವರು ಹಾಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾಗಿದ್ದಾರೆ.

ಹಾಲಿ ಮುಖ್ಯ ಕಾರ್ಯದರ್ಶಿಯಾಗಿ ರುವ ಪಿ.ರವಿಕುಮಾರ್ ಅವರ ಅಧಿಕಾರಾ ವಧಿ ಇದೇ ತಿಂಗಳ ೩೧ಕ್ಕೆ ಕೊನೆಗೊಳ್ಳಲಿದೆ. ತೆರವಾಗಲಿರುವ ಈ ಸ್ಥಾನಕ್ಕೆ ಸರ್ಕಾರ ವಂದಿತಾ ಶರ್ಮರನ್ನು ನೇಮಿಸಿದೆ. ೧೯೮೬- ಬ್ಯಾಚ್‌ನ ಐಎಎಸ್
ಅಧಿಕಾರಿಯಾಗಿರುವ ವಂದಿತಾ ಶರ್ಮಾ ಥೆರೇಸಾ ಭಟ್ಟಾಚಾರ್ಯ, ಮಾಲತಿ ದಾಸ್ ಮತ್ತು ರತ್ನ ಪ್ರಭಾ ಅವರ ನಂತರ ಈ ಸ್ಥಾನವನ್ನು ಅಲಂಕರಿಸಿದ ನಾಲ್ಕನೇ ಮಹಿಳೆಯಾಗಿದ್ದಾರೆ. ಕಾರ್ಯದರ್ಶಿ ಹುದ್ದೆಗೆ ೯ ಮಂದಿ ಐಎಎಸ್ ಅಧಿಕಾರಿಗಳು ರೇಸ್‌ನಲ್ಲಿ ಇದ್ದರು. ಈ ಪೈಕಿ ವಂದಿತಾ ಶರ್ಮಾ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್, ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಶಾಲಿನಿ ರಜನೀಶ್, ಅಜಯ್ ಸೇಠ್, ಇ.ವಿ.ರಮಣ ರೆಡ್ಡಿ, ರಾಕೇಶ್ ಸಿಂಗ್, ಜಿ.ಕುಮಾರ್ ನಾಯ್ಕ್ ಮತ್ತು ಗೌರವ ಗುಪ್ತ ಹೆಸರುಗಳು ಕೇಳಿ ಬಂದಿದ್ದವು. ಸೇವಾ ಹಿರಿತನವನ್ನು ಕಡೆಗಣ ಸಿ ನೇಮಿಸಿದರೆ ಅವಕಾಶ ವಂಚಿತರು ನ್ಯಾಯಾಲಯದ ಮೊರೆ ಹೋಗಬಹುದು ಎಂಬ ಆತಂಕದಿAದ ಅವರಿಗೆ ಮಣೆ ಹಾಕಲಾಗಿದೆ. ಜೊತೆಗೆ ವಂದಿತಾ ಶರ್ಮ ಅವರ ಮೇಲೆ ಯಾವುದೇ ರೀತಿಯ ಆರೋಪಗಳಿಲ್ಲ. ಆಡಳಿತ ಅನುಭವ ಇರುವುದರಿಂದ ಅವರನ್ನೇ ನೇಮಿಸಿದೆ.ಮುಂದಿನ ವರ್ಷ ನವೆಂಬರ್ ವರೆಗೆ ಅಧಿಕಾರಾವಧಿ ಇರಲಿದೆ.

Translate »