ನಿವೃತ್ತಿಗೆ ಇನ್ನು ಐದೇ ದಿನವಿದ್ದ ಮುಡಾ ಟಿಪಿಎಂ ಜಯಸಿಂಹ ಎಸಿಬಿ ಬಲೆಗೆ
ಮೈಸೂರು

ನಿವೃತ್ತಿಗೆ ಇನ್ನು ಐದೇ ದಿನವಿದ್ದ ಮುಡಾ ಟಿಪಿಎಂ ಜಯಸಿಂಹ ಎಸಿಬಿ ಬಲೆಗೆ

May 28, 2022

ಡೇಟಾ ಎಂಟ್ರಿ ಆಪರೇಟರ್ ನಾಗೇಂದ್ರ ಕೂಡಾ ಎಸಿಬಿ ವಶಕ್ಕೆ

ಮೈಸೂರು, ಮೇ ೨೭(ಆರ್‌ಕೆ)- ಖಾಸಗಿ ವಸತಿ ಬಡಾವಣೆೆ ನಕ್ಷೆ ಅನು ಮೋದನೆಗೆ ಡೆವಲಪರ್ ನಿಂದ ಲಂಚ ಸ್ವೀಕರಿಸುತ್ತಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಗರ ಯೋಜಕ ಸದಸ್ಯ (ಖಿPಒ) ಹಾಗೂ ಡೇಟಾ ಎಂಟ್ರಿ ಆಪರೇಟರ್ (ಆಇಔ) ಎಸಿಬಿ ಬಲೆಗೆ ಬಿದ್ದಿದ್ದಾರೆ.

ನಗರ ಯೋಜನಾ ಜಂಟಿ ನಿರ್ದೇಶಕರೂ ಆದ ನಗರ ಯೋಜಕ ಸದಸ್ಯ ಜಿ.ಎಸ್. ಜಯಸಿಂಹ ಹಾಗೂ ಹೊರ ಗುತ್ತಿಗೆ ಆಧಾರದಲ್ಲಿ ಟಿಪಿಎಂ ಶಾಖೆಯ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಎಸಿಬಿ ಪೊಲೀಸರ ಬಲೆಗೆ ಬಿದ್ದವರು.

ಮೈಸೂರಿನಲ್ಲೇ ವಸತಿ ಬಡಾವಣೆ ಅಭಿವೃದ್ಧಿಗೆ ನಕ್ಷೆ ಅನುಮೋದನೆಗೆ ಬೆಂಗ ಳೂರಿನ ಡೆವಲಪರ್ ವೇಣು ಗೋಪಾಲ್ ಅವರಿಂದ ೫೦ ಸಾವಿರ ರೂ. ಲಂಚ ಸ್ವೀಕರಿಸು ತ್ತಿದ್ದಾಗ ಇಂದು ಮಧ್ಯಾಹ್ನ ೧೨.೩೫ರ ವೇಳೆಗೆ ಮುಡಾ ಕಚೇರಿ ಟಿಪಿಎಂ ಸೆಕ್ಷನ್‌ನಲ್ಲಿ ಹಣದ ಸಹಿತ ಜಯಸಿಂಹ ಮತ್ತು ನಾಗೇಂದ್ರ ಅವರನ್ನು
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾದರು. ಬಡಾವಣೆ ನಕ್ಷೆ ಅನು ಮೋದನೆ ೩ ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಜಯಸಿಂಹ, ಈಗಾಗಲೇ ೧ ಲಕ್ಷ ರೂ. ಮುಂಗಡವಾಗಿ ಪಡೆದಿದ್ದರು. ಉಳಿಕೆ ಹಣಕ್ಕಾಗಿ ಒತ್ತಾಯಿಸುತ್ತಿದ್ದರಿಂದ ವೇಣುಗೋಪಾಲ್, ಗುರುವಾರ ಎಸಿಬಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇಂದು ೫೦ ಸಾವಿರ ರೂ.ಗಳನ್ನು ಟಿಪಿಎಂ ಸೆಕ್ಷನ್‌ನ ನಾಗೇಂದ್ರ ಪಡೆದು ಜಯಸಿಂಹ ಅವರ ಕೊಠಡಿಗೆ ತೆರಳುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಡಿವೈಎಸ್ಪಿ ತಮ್ಮಯ್ಯ ನೇತೃತ್ವದ ಪೊಲೀಸ್ ಅಧಿಕಾರಿಗಳು ಹಣದ ಸಮೇತ ಇಬ್ಬರನ್ನೂ ವಶಕ್ಕೆ ಪಡೆದರು. ೩ ಲಕ್ಷ ರೂ.ಗಳಿಗೆ ಲಂಚಕ್ಕೆ ಬೇಡಿಕೆ ಇಟ್ಟು, ಈಗಾಗಲೇ ೧ ಲಕ್ಷ ರೂ. ಮುಂಗಡವಾಗಿ ಪಡೆದಿರುವ ಬಗ್ಗೆ ಮೊಬೈಲ್ ಆಡಿಯೋ ಸಂಭಾಷಣೆ, ಲಂಚವಾಗಿ ಪಡೆದಿದ್ದ ಹಣ, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುವ ಎಸಿಬಿ ಅಧಿಕಾರಿಗಳು, ಮಹಜರು ನಡೆಸಿ, ಮುಡಾದ ಇತರ ಅಧಿಕಾರಿಗಳನ್ನು ಮಹಜರು ವೇಳೆ ಸಾಕ್ಷಿದಾರರನ್ನಾಗಿ ಪರಿಗಣ ಸಿ ಹೇಳಿಕೆ ದಾಖಲಿಸಿ ಕೊಂಡಿದ್ದಾರೆ. ಮೇ ೩೧ರಂದು ಜಯಸಿಂಹ ನಿವೃತ್ತರಾಗಲಿದ್ದರು. ಇವರು ಎಸಿಬಿ ಬಲೆಗೆ ಬಿದ್ದಿರುವುದಕ್ಕೆ ಮುಡಾ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಕ್ಷೆ ಅನುಮೋದನೆ ವಿಷಯಕ್ಕೆ ಸಂಬAಧಿಸಿದAತೆ ಡೆವಲಪರ್ ವೇಣುಗೋಪಾಲ್ ಮತ್ತು ಜಯಸಿಂಹ ನಡುವೆ ಇತ್ತೀಚೆಗೆ ಮಾತಿನ ಚಕಮಕಿ ನಡೆದಿತ್ತು ಎಂದು ಹೇಳಲಾಗಿದೆ. ಈ ಇಬ್ಬರನ್ನೂ ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಎಸಿಬಿ ಡಿವೈಎಸ್ಪಿ ತಮ್ಮಯ್ಯ ಅವರು ತಿಳಿಸಿದ್ದಾರೆ. ಇನ್ಸ್ಪೆಕ್ಟರ್ ಮೋಹನ ಕೃಷ್ಣ ಸೇರಿದಂತೆ ಎಸಿಬಿಯ ೮ ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »