ಮೈಸೂರು, ಮೇ 4- ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿ ನಲ್ಲಿ ರಾಜ್ಯ ಸರ್ಕಾರವು ಅತ್ಯಗತ್ಯ ಸೇವೆ ಒದಗಿಸುವ 10 ಪ್ರಮುಖ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆ ನೌಕ ರರು ಕರ್ತವ್ಯಕ್ಕೆ ಹಾಜರಾಗಲು ನೀಡಿದ್ದ ವಿನಾಯಿತಿಯನ್ನು ಹಿಂಪಡೆದ ಪರಿಣಾಮ ವಾಗಿ ಸೋಮವಾರ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಣೆ ಆರಂಭಿಸಿದವು.
ಅತ್ಯಗತ್ಯ ಸೇವೆ ಒದಗಿಸುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಒಳಾಡಳಿತ, ಕಂದಾಯ, ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಆಹಾರ, ನಾಗರಿಕ ಸರಬ ರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಇಂಧನ ಇಲಾಖೆ ಹೊರತುಪಡಿಸಿ ಉಳಿದ ಎಲ್ಲಾ ಇಲಾಖೆ ಗಳ ಅಧಿಕಾರಿ ಮತ್ತು ನೌಕರರಿಗೆ ಮಾರ್ಚ್ 24ರಿಂದ ಕರ್ತವ್ಯಕ್ಕೆ ಹಾಜರಾಗುವುದ ರಿಂದ ವಿನಾಯಿತಿ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ವಿನಾಯಿತಿ ನೀಡಲ್ಪಟ್ಟ ಇಲಾಖೆಗಳು ಕಾರ್ಯನಿರ್ವಹಿಸುತ್ತಿರ ಲಿಲ್ಲ. ಲಾಕ್‍ಡೌನ್ ಸಡಿಲಿಕೆ ಮಾಡಿರುವ ರಾಜ್ಯ ಸರ್ಕಾರವು ಎಲ್ಲಾ ಇಲಾಖೆಗಳ ಅಧಿಕಾರಿ ಮತ್ತು ನೌಕರರಿಗೆ ಕರ್ತವ್ಯಕ್ಕೆ ಹಾಜರಾಗು ವುದರಿಂದ ನೀಡಿದ್ದ ವಿನಾಯಿತಿಯನ್ನು ಹಿಂಪಡೆದಿದೆ. ಎ ಮತ್ತು ಬಿ ಗ್ರೂಪ್‍ನ ಅಧಿ ಕಾರಿಗಳು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸರ್ಕಾರ ತಿಳಿಸಿದ್ದು, ಸಿ ಮತ್ತು ಡಿ ಗ್ರೂಪ್ ನೌಕರರು ಶೇ.33ರಷ್ಟು ಕರ್ತವ್ಯಕ್ಕೆ ಹಾಜ ರಾಗಬೇಕೆಂದು ಸೂಚಿಸಿತ್ತು. ಅಲ್ಲದೇ ಈ ಹಿಂದೆ ನೀಡಿದಂತೆ 55 ವರ್ಷಕ್ಕೆ ಮೇಲ್ಪಟ್ಟ ವರಿಗೆ ವಿನಾಯಿತಿ ಮುಂದುವರೆಸಿತ್ತು.
ಸರ್ಕಾರ ವಿನಾಯಿತಿ ಹಿಂಪಡೆದು ಕರ್ತ ವ್ಯಕ್ಕೆ ಹಾಜರಾಗುವಂತೆ ಸೂಚಿಸಿದ ಹಿನ್ನೆಲೆ ಯಲ್ಲಿ ಸೋಮವಾರ ಮೈಸೂರು ವಿಶ್ವ ವಿದ್ಯಾನಿಲಯ, ಕರ್ನಾಟಕ ಮುಕ್ತ ವಿಶ್ವವಿದ್ಯಾ ನಿಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ, ಕಾವೇರಿ ನೀರಾವರಿ ನಿಗಮ ಸೇರಿದಂತೆ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳೂ ಕಾರ್ಯಾ ರಂಭ ಮಾಡಿವೆ. ಆದರೆ, ಸಾರ್ವಜನಿಕರ ಹಾಜರಾತಿ ವಿರಳವಾಗಿತ್ತು. ಶಿಕ್ಷಣ ಇಲಾ ಖೆಗೆ ಸಂಬಂಧಪಟ್ಟಂತೆ ಬೋಧಕೇತರ ವರ್ಗದವರು ಕರ್ತವ್ಯಕ್ಕೆ ಹಾಜರಾಗಿದ್ದರು.